ETV Bharat / bharat

ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸುವ ವೇಳೆ ಅವಘಡ ; ವಿಷಾನಿಲ ಸೇವಿಸಿ ಆರು ಮಂದಿ ಸಾವು

ದೇವಿಪುರ ಠಾಣೆಯ ಪೊಲೀಸರ ಸಹಾಯದಿಂದ ಜೆಸಿಬಿಯನ್ನು ಬಳಸಿ ಆರು ಜನರನ್ನು ಹೊರತಂದು, ಸದರ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ, ವೈದ್ಯರು ಇವರೆಲ್ಲಾ ಮೃತಪಟ್ಟಿದ್ದಾರೆಂದು ದೃಢಪಡಿಸಿದ್ದಾರೆ..

Six died after inhaling toxic gas in a septic tank
ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸುವ ವೇಳೆ ಅವಘಡ
author img

By

Published : Aug 9, 2020, 4:03 PM IST

ದಿಯೋಗರ್(ಜಾರ್ಖಂಡ್​​) : ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸುವ ವೇಳೆ ವಿಷಕಾರಿ ಅನಿಲ ಸೇವಿಸಿ ಇಬ್ಬರು ಕಾರ್ಮಿಕರು ಸೇರಿ ಆರು ಮಂದಿ ಮೃತಪಟ್ಟಿರುವ ಘಟನೆ ಜಾರ್ಖಂಡ್​​ನ ದಿಯೋಗರ್​​ನಲ್ಲಿ ನಡೆದಿದೆ.

ದಿಯೋಗರ್​​ನ ದೇವಿಪುರದ ಮನೆಯೊಂದರ ಶೌಚಾಲಯದ ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸುವ ವೇಳೆ ಈ ದುರಂತ ನಡೆದಿದೆ. ಮೊದಲು ಒಬ್ಬ ವ್ಯಕ್ತಿ ಟ್ಯಾಂಕ್‌ನೊಳಗಡೆ ಹೋಗಿದ್ದಾನೆ. ಆದರೆ, ಸ್ವಲ್ಪ ಸಮಯ ಕಳೆದರೂ ಯಾವುದೇ ಶಬ್ದ ಕೇಳಿದ ಕಾರಣ ಇನ್ನೊಬ್ಬ ಟ್ಯಾಂಕ್‌ನೊಳಗೆ ಇಳಿದಿದ್ದಾನೆ. ಹೀಗೆ ಒಬ್ಬರಾದ ಮೇಲೆ ಒಬ್ಬರಂತೆ ಇಳಿದ ಆರೂ ಮಂದಿ ಸಾವನ್ನಪ್ಪಿದ್ದಾರೆ.

ವಿಷಾನಿಲ ಸೇವಿಸಿ ಆರು ಮಂದಿ ಸಾವು

ದೇವಿಪುರ ಠಾಣೆಯ ಪೊಲೀಸರ ಸಹಾಯದಿಂದ ಜೆಸಿಬಿಯನ್ನು ಬಳಸಿ ಆರು ಜನರನ್ನು ಹೊರತಂದು, ಸದರ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ, ವೈದ್ಯರು ಇವರೆಲ್ಲಾ ಮೃತಪಟ್ಟಿದ್ದಾರೆಂದು ದೃಢಪಡಿಸಿದ್ದಾರೆ.

ಆಸ್ಪತ್ರೆಗೆ ದಿಯೋಗರ್ ಜಿಲ್ಲಾಧಿಕಾರಿ ಕಲ್ಮೇಶ್ವರ ಪ್ರಸಾದ್ ಸಿಂಗ್ ಭೇಟಿ ನೀಡಿದ್ದು, ಮೃತರ ಕುಟುಂಬಗಳಿಗೆ ಸರ್ಕಾರದಿಂದ ಸಾಧ್ಯವಿರುವ ನೆರವು ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.