ETV Bharat / bharat

ಕಾರ್​ ಮೇಲೆ ಉರುಳಿ ಬಿದ್ದ ಮರಳು ಲಾರಿ: 8 ಜನ ಸಾವು - ಕೌಶಂಬಿ ರಸ್ತೆ ಅಪಘಾತ,

six people died,  six people died in road accident,  six people died in road accident at Kaushambi, Kaushambi road accident, Kaushambi road accident news, ಆರು ಜನ ಸಾವು, ರಸ್ತೆ ಅಪಘಾತದಲ್ಲಿ ಆರು ಜನ ಸಾವು, ಕೌಶಂಬಿ ರಸ್ತೆ ಅಪಘಾತದಲ್ಲಿ ಆರು ಜನ ಸಾವು, ಕೌಶಂಬಿ ರಸ್ತೆ ಅಪಘಾತ, ಕೌಶಂಬಿ ರಸ್ತೆ ಅಪಘಾತ ಸುದ್ದಿ,
ಕಾರ್​ ಮೇಲೆ ಉರುಳಿ ಬಿದ್ದ ಮರಳು ತುಂಬಿದ ಲಾರಿ
author img

By

Published : Dec 2, 2020, 8:13 AM IST

Updated : Dec 2, 2020, 10:40 AM IST

08:03 December 02

ಮದುವೆ ಮುಗಿಸಿ ವಾಪಸ್​ ಮನೆಗೆ ಹೋಗುತ್ತಿದ್ದ ವೇಳೆ ಸಂಭವಿಸಿದ ಅಪಘಾತದಲ್ಲಿ 8 ಜನ ಸಾವನ್ನಪ್ಪಿರುವ ಘಟನೆ ಉತ್ತರಪ್ರದೇಶದ ಕೌಶಂಬಿಯಲ್ಲಿ ನಡೆದಿದೆ.

six people died,  six people died in road accident,  six people died in road accident at Kaushambi, Kaushambi road accident, Kaushambi road accident news, ಆರು ಜನ ಸಾವು, ರಸ್ತೆ ಅಪಘಾತದಲ್ಲಿ ಆರು ಜನ ಸಾವು, ಕೌಶಂಬಿ ರಸ್ತೆ ಅಪಘಾತದಲ್ಲಿ ಆರು ಜನ ಸಾವು, ಕೌಶಂಬಿ ರಸ್ತೆ ಅಪಘಾತ, ಕೌಶಂಬಿ ರಸ್ತೆ ಅಪಘಾತ ಸುದ್ದಿ,
ಕಾರ್​ ಮೇಲೆ ಉರುಳಿ ಬಿದ್ದ ಮರಳು ತುಂಬಿದ ಲಾರಿ

ಕೌಶಂಬಿ: ಮದುವೆ ಸಮಾರಂಭದಿಂದ ಹಿಂದಿರುಗಿದ ಕಾರಿನ ಮೇಲೆ ಮರಳು ತುಂಬಿದ ಟ್ರಕ್ ಉರುಳಿ ಬಿದ್ದ ಪರಿಣಾಮ ಆರು ಜನ ಸಾವನ್ನಪ್ಪಿರುವ ಘಟನೆ ದೇವಿಗಂಜ್​ ಪಟ್ಟಣದಲ್ಲಿ ನಡೆದಿದೆ.  

ಇಲ್ಲಿನ ಮಹೇಶ್ವರಿ ಅತಿಥಿಗೃಹದ ಬಳಿ ಸಂಭವಿಸಿದ ಅಪಘಾತದಲ್ಲಿ 8 ಜನ ಸಾವನ್ನಪ್ಪಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ. ಅಪಘಾತ ಸಂಭವಿಸಿದ ಕೂಡಲೇ ಸ್ಥಳೀಯರು ರಕ್ಷಣಾ ಕಾರ್ಯ ಕೈಗೊಂಡು ಪೊಲೀಸರಿಗೆ ಮಾಹಿತಿ ರವಾನಿಸಿದರು. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಗಾಯಾಳುಗಳನ್ನು ಸ್ಥಳೀಯರ ನೆರವಿನಿಂದ ಆಸ್ಪತ್ರೆಗೆ ದಾಖಲಿಸಿದರು. ಬಳಿಕ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು.  

ಕಡಾಧಮ್ ಪೊಲೀಸ್ ಠಾಣಾ ವ್ಯಾಪ್ತಿಯ ದೇವಿಗಂಜ್ ಪಟ್ಟಣದ ಶೆಹಜಾದ್ಪುರ ಗ್ರಾಮದ ಮಹೇಶ್ವರಿ ಅತಿಥಿಗೃಹದ ಬಳಿ ಅಪಘಾತ ಸಂಭವಿಸಿದೆ. ಕಾರ್​ ಚಾಲಕ ಸೇರಿದಂತೆ ಒಟ್ಟು 9 ಜನರು ಶೆಹಜಾದ್ಪುರ ಗ್ರಾಮದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದರು. ಮದುವೆ ಮೆರವಣಿಗೆ ಮುಗಿಸಿ ಮಹೇಶ್ವರಿ ಅತಿಥಿಗೃಹದಿಂದ ವಾಪಸ್​ ಮನೆಗೆ ಹಿಂದುರುಗುತ್ತಿದ್ದ ವೇಳೆ ಕಾರಿನ ಮೇಲೆ ಮರಳು ತುಂಬಿದ ಲಾರಿ ಪಲ್ಟಿಯಾಗಿದೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.  

ಸಾವಿನ ಸುದ್ದಿ ತಿಳಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಘಟನೆ ಕುರಿತು ಕಡಾಧಮ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

Last Updated : Dec 2, 2020, 10:40 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.