ETV Bharat / bharat

ಮಿದುಳು ಸಂಬಂಧಿ ರೋಗಕ್ಕೆ 83 ಮಕ್ಕಳು ಬಲಿ

author img

By

Published : Jun 15, 2019, 11:36 AM IST

ಬಿಹಾರದ ಮುಜಾಫರ್​ಪುರ ಜಿಲ್ಲೆಯಲ್ಲಿ ಮಿದುಳು ಸಂಬಂಧಿ ರೋಗಕ್ಕೆ 83 ಮಕ್ಕಳು ಬಲಿಯಾಗಿದ್ದು, ಹಲವರು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.

83 ಮಕ್ಕಳು ಬಲಿ

ಮುಜಾಫರ್​ಪುರ ​(ಬಿಹಾರ್​) : ಅಕ್ಯುಟ್ ಎನ್‌ಸೆಫಾಲಿಟಿಸ್ ಸಿಂಡ್ರೋಮ್ (ಎಇಎಸ್) ಎಂಬ ಮಿದುಳು ಸಂಬಂಧಿ ರೋಗಕ್ಕೆ 83 ಮಕ್ಕಳು ಮೃತಪಟ್ಟ ಘಟನೆ ಬಿಹಾರದ ಮುಜಾಫರ್‌ ನಗರದಲ್ಲಿ ಸಂಭವಿಸಿದೆ.

ಮುಜಾಫರ್​ಪುರದ ಶ್ರೀಕೃಷ್ಣ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ (ಎಸ್​ಕೆಎಂಸಿಎಚ್​) ಕಳೆದ ಹಲವು ದಿನಗಳಿಂದ ಅಕ್ಯುಟ್ ಎನ್‌ಸೆಫಾಲಿಟಿಸ್ ಸಿಂಡ್ರೋಮ್ ಸಂಬಂಧಿತ ರೋಗದಿಂದ ಬಳಲುತ್ತಿದ್ದ ಮಕ್ಕಳು ಚಿಕಿತ್ಸೆಗೆ ದಾಖಲಾಗಿದ್ದರು. ನಿನ್ನೆ 6 ಮಕ್ಕಳು ಚಿಕತ್ಸೆ ಫಲಕಾರಿಯಾಗದೇ ಸಾವಿಗೀಡಾಗಿದ್ದು, ಸಾವಿನ ಸಂಖ್ಯೆ 83ಕ್ಕೆ ತಲುಪಿದೆ.

ಮುಜಾಫರ್​ಪುರ, ವೈಶಾಲಿ, ಶಿಯೋಹರ್ ಜಿಲ್ಲೆಗಳಲ್ಲಿ ಈ ಸೋಕು ಕಾಣಿಸಿಕೊಂಡಿದ್ದು, ಮುಂಜಾಗ್ರತೆ ಕ್ರಮ ವಹಿಸುವಂತೆ ರಾಜ್ಯ ಸರ್ಕಾರ ಸೂಚನೆ ನೀಡಿದೆ. ಹಲವು ಆಸ್ಪತ್ರೆಗಳಲ್ಲಿ ಇನ್ನೂ ಕೆಲ ಮಕ್ಕಳು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.

2012ರ ಜೂನ್​ನಲ್ಲಿ ಅಕ್ಯುಟ್ ಎನ್‌ಸೆಫಾಲಿಟಿಸ್ ಸಿಂಡ್ರೋಮ್ ಪಾಟ್ನಾದಲ್ಲಿ ಉಲ್ಬಣಿಸಿ ಮೂರೇ ದಿನದಲ್ಲಿ 109ಕ್ಕೂ ಅಧಿಕ ಮಕ್ಕಳನ್ನು ಬಲಿ ತೆಗೆದುಕೊಂಡಿತ್ತು.

Intro:Body:Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.