ನವದೆಹಲಿ: ದೆಹಲಿಯ ಪ್ರತಿಷ್ಠಿತ ಜವಾಹರ್ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ (ಜೆಎನ್ಯು) ನಡೆದಿದ್ದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದ ಮಾಸ್ಕ್ ಧರಿಸಿದ್ದ ವಿಧ್ಯಾರ್ಥಿಯನ್ನು ದೆಹಲಿ ಪೊಲೀಸರ ವಿಶೇಷ ತನಿಖಾ ತಂಡ (ಎಸ್ಐಟಿ) ಪತ್ತೆಹಚ್ಚಿದೆ.
ಜವಾಹರ್ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಕಳೆದ ವಾರ ಮಾಸ್ಕ್ ಧರಿಸಿದ್ದ ದುಷ್ಕರ್ಮಿಗಳ ಗುಂಪೊಂದು ಜೆಎನ್ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಹಾಗೂ ಉಪನ್ಯಾಸಕರ ಮೇಲೆ ಹಲ್ಲೆ ನಡೆಸಿತ್ತು. ಘಟನೆಯಲ್ಲಿ ಐಷೆ ಘೋಷ್ ಹಾಗೂ ಪದಾಧಿಕಾರಿ ಸೇರಿ ಹಲವು ವಿದ್ಯಾರ್ಥಿಗಳ ಗಾಯಗೊಂಡಿದ್ದರು. ಇದರಲ್ಲಿ ಮಾಸ್ಕ್ ಧರಿಸಿದ್ದ ಮಹಿಳೆಯೊಬ್ಬರೂ ಇದ್ದರು.
-
Delhi Police: SIT team has identified that the masked woman who was seen in videos of #JNUViolence is from Delhi University. She will be soon served notice to join the investigation.
— ANI (@ANI) January 13, 2020 " class="align-text-top noRightClick twitterSection" data="
">Delhi Police: SIT team has identified that the masked woman who was seen in videos of #JNUViolence is from Delhi University. She will be soon served notice to join the investigation.
— ANI (@ANI) January 13, 2020Delhi Police: SIT team has identified that the masked woman who was seen in videos of #JNUViolence is from Delhi University. She will be soon served notice to join the investigation.
— ANI (@ANI) January 13, 2020
ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ದೆಹಲಿ ಪೊಲೀಸರು ವಿಶೇಷ ತನಿಖಾ ತಂಡ, ಹಲ್ಲೆ ನಡೆಸಿದ್ದ ವಿಡಿಯೋದಲ್ಲಿ ಸೆರೆಯಾಗಿದ್ದ ಮಾಸ್ಕ್ ಧರಸಿದ್ದು ದೆಹಲಿ ವಿಶ್ವವಿದ್ಯಾಲಯ ವಿದ್ಯಾರ್ಥಿ ಎಂದು ಗುರುತಿಸಿದ್ದಾರೆ. ಶೀಘ್ರವೇ ಅವರಿಗೆ ನೋಟಿಸ್ ನೀಡಿ ತನಿಖೆಗೆ ಸಹಕರಿಸುವಂತೆ ಸೂಚಿಸಲಾಗುವುದು ಎಂದು ತಂಡದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.