ETV Bharat / bharat

ರಾಮಮಂದಿರದ ಹಿಂದಿದೆ ಕರಸೇವಕ ಸಹೋದರರಿಬ್ಬರ ಪ್ರಾಣಾರ್ಪಣದ ಕತೆ..! - ಎಲ್​ ಕೆ ಅಡ್ವಾಣಿ

ಅದೊಂದು ಕರುಣಾ ಜನಕ ಕತೆ. ಇಬ್ಬರು ಸಹೋದರರು ರಾಮಮಂದಿರಕ್ಕಾಗಿ ಪ್ರಾಣಾರ್ಪಣೆ ಮಾಡಿದ ಕತೆ ಇದು. ಈಗ ಅವರ ಸಹೋದರಿಯನ್ನು ರಾಮಮಂದಿರ ಭೂಮಿ ಪೂಜೆಗೆ ಆಹ್ವಾನಿಸಲಾಗಿದೆ.

kar sewak
ಕರಸೇವಕ ಸಹೋದರರು
author img

By

Published : Aug 4, 2020, 6:28 PM IST

ಕೋಲ್ಕತ್ತಾ (ಪಶ್ಚಿಮ ಬಂಗಾಳ): 1990ರಲ್ಲಿ ವಿಶ್ವ ಹಿಂದೂ ಪರಿಷತ್ ಕರೆ ನೀಡಿದ್ದ ರಾಮಮಂದಿರ ಆಂದೋಲನಕ್ಕೆ ಭಾರಿ ಬೆಂಬಲ ವ್ಯಕ್ತವಾಗಿತ್ತು. ಬಿಜೆಪಿ ಹಿರಿಯ ನಾಯಕ ಎಲ್​.ಕೆ.ಅಡ್ವಾಣಿ ಅವರ ನೇತೃತ್ವದ ಈ ರಾಮಮಂದಿರ ಆಂದೋಲನ ಗುಜರಾತ್​ನ ಸೋಮನಾಥ ದೇವಾಲಯದಿಂದ ಸೆಪ್ಟೆಂಬರ್ 15ರಂದು ಆರಂಭವಾಗಿತ್ತು.

ದೇಶಾದ್ಯಂತ ಒಂದು ರೀತಿಯ ಅಲೆಯನ್ನು ಹುಟ್ಟುಹಾಕಲು ಯಶಸ್ವಿಯಾದ ಈ ಆಂದೋಲನ ಕೋಲ್ಕತ್ತಾದ ಈ ಸಹೋದರರನ್ನೂ ಬಿಡಲಿಲ್ಲ. ತಮ್ಮ ಸಹೋದರಿಯ ವಿವಾಹ ಇನ್ನು ಕೆಲವೇ ವಾರಗಳಿರುವಂತೆ, ಆ ಇಬ್ಬರು ಕರಸೇವಕ ಸಹೋದರರು ಅಯೋಧ್ಯೆಗೆ ತೆರಳುವುದಕ್ಕೆ ರೈಲು ಹತ್ತಿದ್ದರು. ಅವರ ಹೆಸರು ರಾಮ್​ ಕುಮಾರ್ ಕೊಠಾರಿ(22) ಹಾಗೂ ಶರದ್​ ಕುಮಾರ್ ಕೊಠಾರಿ (20). ಈಗಷ್ಟೇ ಟೀನೇಜ್​ ಅನ್ನು ದಾಟಿ ಹೊಸ ಕನಸುಗಳನ್ನು ಹೊರಬೇಕಿದ್ದ ಅವರು. ರಾಮಮಂದಿರದ ಕನಸನ್ನು ಹೊತ್ತು ಉತ್ತರ ಪ್ರದೇಶಕ್ಕೆ ತೆರಳಿದ್ದರು.

ರಾಮ ಮಂದಿರ

ಅಯೋಧ್ಯೆಗೆ ಕರಸೇವಕರು ಬರುವ ಸುದ್ದಿ ಕೇಳಿಯೇ ಉತ್ತರ ಪ್ರದೇಶದಲ್ಲಿ ಎಲ್ಲಾ ಮಾರ್ಗಗಳನ್ನು ಸರ್ಕಾರ ನಿಯಂತ್ರಣಕ್ಕೆ ತೆಗೆದುಕೊಂಡಿತ್ತು. ಅಯೋಧ್ಯೆಗೆ ತೆರಳುವ ಎಲ್ಲಾ ಮಾರ್ಗಗಳನ್ನು ಬಂದ್ ಮಾಡಲಾಗಿತ್ತು. ವಾರಣಾಸಿ ಅಥವಾ ಬೇರೆ ಬೇರೆ ಮಾರ್ಗಗಳ ಮೂಲಕ ಕರಸೇವಕರು ಅಯೋಧ್ಯೆ ತಲುಪಬೇಕಾಯಿತು.

ಮೊದಲಿಗೆ ಹನುಮಾನ್​ ಗರಿ ತಲುಪಿ ಅಲ್ಲಿಂದ ಮೆರವಣಿಗೆ ಹೊರಡಬೇಕೆಂದು ವಿಶ್ವ ಹಿಂದೂ ಪರಿಷತ್ ಹಾಗೂ ಬಿಜೆಪಿ ಮುಖಂಡರು ತೀರ್ಮಾನಿಸಿದ್ದ ಕಾರಣದಿಂದಿಂದ ಎಲ್ಲರೂ ಹನುಮಾನ್​ಗರಿ ದೇವಾಲಯದ ಬಳಿ ಜಮಾವಣೆಗೊಂಡಿದ್ದರು. ಅಕ್ಟೋಬರ್ 30ರಂದು ಇಬ್ಬರು ಹನುಮಾನ್​ಗರಿಗೆ ತಲುಪಿದ್ದು ಅಲ್ಲಿಂದ ವಿವಾದಿತ ಸ್ಥಳದ ಕಡೆಗೆ ಮೆರವಣಿಗೆ ಹೊರಡಬೇಕಿತ್ತು. ಈ ಇಬ್ಬರು ಸಹೋದರರು ಮೆರವಣಿಗೆ ಮುಂಭಾಗದಲ್ಲಿ ಸಾಗುತ್ತಿದ್ದರು.

ಅಕ್ಟೋಬರ್ 10ರಿಂದ ಮೆರವಣಿಗೆ ಆರಂಭವಾಗಿದ್ದು, ನನ್ನ ಸಹೋದರರು ಮೆರವಣಿಗೆ ಮುಂಭಾಗ ಕೇಸರಿ ಧ್ವಜವನ್ನು ಹಾರಿಸುತ್ತಾ ಮುನ್ನಡೆಯುತ್ತಿದ್ದರು. ನವೆಂಬರ್ 2ರಂದು ಮೆರವಣಿಗೆ ವೇಳೆ ಪೊಲೀಸರು ಫೈರಿಂಗ್ ಮಾಡಿದ್ದು, ನನ್ನ ಸಹೋದರರೂ ಸೇರಿದಂತೆ 16 ಮಂದಿ ಕರಸೇವಕರು ಈ ವೇಳೆ ಪ್ರಾಣಬಿಟ್ಟರು. ಕೆಲವು ದಿನಗಳ ನಂತರ ನನ್ನ ಸಹೋದರರ ಮೃತ ದೇಹ ಸಿಕ್ಕಿತ್ತು ಎಂದು ಮೃತರ ಸಹೋದರಿ ಪೂರ್ಣಿಮಾ ಕಂಬನಿಗರೆಯುತ್ತಾರೆ.

ಆ ಫೈರಿಂಗ್​ ನಡೆದ ಪ್ರದೇಶವನ್ನು ಹುತ್ಮಾತ್ಮರ ಪ್ರದೇಶ ಎಂದು ಕರೆಯಲಾಗುತ್ತಿದ್ದು, ಈ ಇಬ್ಬರು ಮೃತರ ಸಹೋದರಿಯನ್ನು ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ. ಸುಮಾರು ವರ್ಷಗಳ ನಂತರ ರಾಮಮಂದಿರ ನಿರ್ಮಾಣವಾಗುತ್ತಿರುವುದು ಹಾಗೂ ನನ್ನ ಸಹೋದರರ ಪ್ರತಿನಿಧಿಯಾಗಿ ನಾನು ಭಾಗಿಯಾಗುತ್ತಿರುವುದು ಸಂತೋಷ ನೀಡಿದೆ ಎಂದು ಭಾವುಕರಾಗುತ್ತಾರೆ ಪೂರ್ಣಿಮಾ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.