ETV Bharat / bharat

ಭಾರತದ ಕೋವಿಡ್​ ಹೋರಾಟ: 12 ಲಕ್ಷಕ್ಕೂ ಅಧಿಕ ಸೋಂಕಿತರು ಗುಣಮುಖ! - ICMR

ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 18,55,746 ಹಾಗೂ ಮೃತರ ಸಂಖ್ಯೆ 38,938ಕ್ಕೆ ಏರಿಕೆಯಾಗಿದೆ.

Total number of corona cases in India
ಭಾರತದ ಕೋವಿಡ್​ ಹೋರಾಟ
author img

By

Published : Aug 4, 2020, 10:07 AM IST

ನವದೆಹಲಿ: ದೇಶದಲ್ಲಿ ಪ್ರತಿನಿತ್ಯ ಅರ್ಧ ಲಕ್ಷ ಜನರಿಗೆ ಕೊರೊನಾ ವೈರಸ್​ ಅಂಟುತ್ತಿದ್ದು, ಇತ್ತ ಚೇತರಿಕೆಯ ಪ್ರಮಾಣದಲ್ಲಿ ಕೂಡ ಹೆಚ್ಚಳ ಕಂಡು ಬರುತ್ತಿದೆ.

ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 52,050 ಸೋಂಕಿತರು ಪತ್ತೆಯಾಗಿದ್ದು, 803 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 18,55,746 ಹಾಗೂ ಮೃತರ ಸಂಖ್ಯೆ 38,938ಕ್ಕೆ ಏರಿಕೆಯಾಗಿದೆ.

ಒಟ್ಟು ಸೋಂಕಿತರ ಪೈಕಿ 12,30,510 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಚ್​ ಆಗಿದ್ದಾರೆ. ಉಳಿದಂತೆ 5,86,298 ಕೇಸ್​​ಗಳು ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

Total number of corona cases in India
ಕೋವಿಡ್ ಟೆಸ್ಟ್​ ಅಪ್​​ಡೇಟ್ಸ್​

ಆಗಸ್ಟ್​ 3ರವರೆಗೆ 2,08,64,750 ಜನರಿಗೆ ಕೋವಿಡ್​ ಟೆಸ್ಟ್​ ಮಾಡಲಾಗಿದ್ದು, ನಿನ್ನೆ ಒಂದೇ ದಿನ 6,61,892 ಸ್ಯಾಂಪಲ್​ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.