ETV Bharat / bharat

ಭಾರತದಿಂದ ಢಾಕಾಗೆ 20 ಲಕ್ಷ, ಕಠ್ಮಂಡುವಿಗೆ 10 ಲಕ್ಷ ಕೋವಿಡ್​ ಲಸಿಕೆ ರಫ್ತು!

author img

By

Published : Jan 21, 2021, 8:20 AM IST

ಇಂದು ಬೆಳಗ್ಗೆ ಭಾರತದಿಂದ ಢಾಕಾಗೆ 20 ಲಕ್ಷ ಮತ್ತು ಕಠ್ಮಂಡುವಿಗೆ 10 ಲಕ್ಷ ಕೋವಿಡ್​ ಲಸಿಕೆಗಳು ರಫ್ತಾಗಿವೆ. ಭಾರತದಿಂದ ಢಾಕಾಗೆ 20 ಲಕ್ಷ ಕೋವಿಡ್​ ಲಸಿಕೆ ರಫ್ತು, ಭಾರತದಿಂದ ಕಠ್ಮಂಡುವಿಗೆ 10 ಲಕ್ಷ ಕೋವಿಡ್​ ಲಸಿಕೆ ರಫ್ತು, ಭಾರತದಿಂದ ಕೋವಿಡ್​ ಲಸಿಕೆ ರಫ್ತು, ಭಾರತದಿಂದ ಕೋವಿಡ್​ ಲಸಿಕೆ ರಫ್ತು ಸುದ್ದಿ,

consignment of COVID-19  COVID-19 vaccines to be dispatched  COVID vaccine to Kathmandu  COVID vaccine to Dhaka  ಭಾರತದಿಂದ ಢಾಕಾಗೆ 20 ಲಕ್ಷ ಕೋವಿಡ್​ ಲಸಿಕೆ ರಫ್ತು,  ಭಾರತದಿಂದ ಕಠ್ಮಂಡುವಿಗೆ 10 ಲಕ್ಷ ಕೋವಿಡ್​ ಲಸಿಕೆ ರಫ್ತು,  ಭಾರತದಿಂದ ಕೋವಿಡ್​ ಲಸಿಕೆ ರಫ್ತು,  ಭಾರತದಿಂದ ಕೋವಿಡ್​ ಲಸಿಕೆ ರಫ್ತು ಸುದ್ದಿ,
ಭಾರತದಿಂದ ಢಾಕಾಗೆ 20 ಲಕ್ಷ, ಕಠ್ಮಂಡುವಿಗೆ 10 ಲಕ್ಷ ಕೋವಿಡ್​ ಲಸಿಕೆ ರಫ್ತು

ಮುಂಬೈ (ಮಹಾರಾಷ್ಟ್ರ): ಕಠ್ಮಂಡುವಿಗೆ 10 ಲಕ್ಷ ಮತ್ತು ಢಾಕಾಗೆ 20 ಲಕ್ಷ ಕೋವಿಡ್​ ಲಸಿಕೆಯ ಡೋಸೇಜ್‌ಗಳನ್ನು ಇಂದು ಬೆಳಗ್ಗೆ ಮುಂಬೈನಿಂದ ರವಾನಿಸಲಾಗಿದೆ.

ಇಂದು ಬೆಳಗ್ಗೆ ಕೋವಿಡ್ -19 ಲಸಿಕೆಗಳು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಿತ್ತು. ಕಠ್ಮಂಡುವಿಗೆ ಬೆಳಿಗ್ಗೆ 6:40 ಕ್ಕೆ ವಿಮಾನ ಹೊರಟರೆ, ಢಾಕಾಗೆ ಬೆಳಗ್ಗೆ 8 ಕ್ಕೆ ವಿಮಾನ ಪ್ರಯಾಣ ಆರಂಭಿಸಿತು.

ಸುಮಾರು 30 ಮಿಲಿಯನ್ ಜನಸಂಖ್ಯೆಯನ್ನು ಹೊಂದಿರುವ ನೇಪಾಳ ಸರ್ಕಾರವು ತನ್ನ ಶೇಕಡಾ 72 ರಷ್ಟು ನಾಗರಿಕರಿಗೆ ಲಸಿಕೆ ನೀಡಲು ಯೋಜಿಸಿದೆ. ಲಸಿಕೆ ನೀಡಲು ಕಾನೂನು ಮತ್ತು ಆರ್ಥಿಕ ಸಿದ್ಧತೆಗಳು ಪೂರ್ಣಗೊಂಡಿವೆ. ಹಿಮಾಲಯನ್ ರಾಷ್ಟ್ರದಲ್ಲಿ ಶೀಘ್ರದಲ್ಲೇ ವ್ಯಾಕ್ಸಿನೇಷನ್ ಡ್ರೈವ್​ ಪ್ರಾರಂಭಿಸಲು ಎಲ್ಲವೂ ಸಿದ್ಧವಾಗಿದೆ ಎಂದು ನೇಪಾಳ ಘೋಷಿಸಿದೆ.

ನೇಪಾಳಕ್ಕೆ ಇತ್ತೀಚಿನ ಕೋವಿಡ್​ ಲಸಿಕೆಗಳನ್ನು ಹೊರತುಪಡಿಸಿ, ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಭಾರತವು ಈ ಹಿಂದೆ ವೈದ್ಯಕೀಯ ಉಪಕರಣಗಳು, ಔಷಧಗಳು ಮತ್ತು ಇತರ ವ್ಯವಸ್ಥಾಪನಾ ಬೆಂಬಲವನ್ನು ನೀಡಿತ್ತು.

ಜನವರಿ 8 ರಂದು ಬಾಂಗ್ಲಾದೇಶವು ಭಾರತದಿಂದ 30 ದಶಲಕ್ಷ ಡೋಸ್ ಕೋವಿಡ್​ ಲಸಿಕೆಯ 'ಕೋವಿಶೀಲ್ಡ್' ಖರೀದಿಸಲು ಅನುಮೋದನೆ ನೀಡಿತ್ತು. ಭಾರತದ ವಿದೇಶಾಂಗ ಸಚಿವಾಲಯವು ಭೂತಾನ್, ಮಾಲ್ಡೀವ್ಸ್, ಬಾಂಗ್ಲಾದೇಶ, ನೇಪಾಳ, ಮ್ಯಾನ್ಮಾರ್ ಮತ್ತು ಸೀಶೆಲ್ಸ್ ದೇಶಗಳಿಗೆ ಲಸಿಕೆ ರವಾನಿಸಲು ಬುಧವಾರ ಪ್ರಕಟಿಸಿತ್ತು.

ಕೋವಿಡ್​ ಸಾಂಕ್ರಾಮಿಕ ಸಮಯದಲ್ಲಿ ಭಾರತವು ಈ ಹಿಂದೆ ಹೈಡ್ರಾಕ್ಸಿಕ್ಲೋರೋಕ್ವಿನ್, ರೆಮ್ಡೆಸಿವಿರ್ ಮತ್ತು ಪ್ಯಾರೆಸಿಟಮಾಲ್ ಮಾತ್ರೆಗಳು, ರೋಗ ನಿರೋಧಕ ಕಿಟ್‌ಗಳು, ವೆಂಟಿಲೇಟರ್‌ಗಳು, ಮುಖವಾಡಗಳು, ಕೈಗವಸುಗಳು ಸೇರಿದಂತೆ ಇತರ ವೈದ್ಯಕೀಯ ಸಾಮಗ್ರಿಗಳನ್ನು ಅನೇಕ ದೇಶಗಳಿಗೆ ಪೂರೈಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.