ETV Bharat / bharat

ಕೈ ಕಳೆದುಕೊಂಡಿದ್ದ ಪೊಲೀಸ್​​ ಹರ್ಜಿತ್​ ಸಿಂಗ್​ ಗುಣಮುಖ: ಆಸ್ಪತ್ರೆಯಿಂದ ಡಿಸ್ಚಾರ್ಜ್​​! - ಎಎಸ್​ಐ ಹರ್ಜಿತ್​ ಸಿಂಗ್​

ದುಷ್ಕರ್ಮಿಗಳ ಹಲ್ಲೆ ವೇಳೆ ಕೈ ಕಳೆದುಕೊಂಡಿದ್ದ ಎಎಸ್​​ಐ ಹರ್ಜಿತ್​ ಸಿಂಗ್​ ಇದೀಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ.

SI Harjeet Singh discharged
SI Harjeet Singh discharged
author img

By

Published : Apr 30, 2020, 7:38 PM IST

ಪಂಜಾಬ್​: ಲಾಕ್​ಡೌನ್​ ವೇಳೆ ಕರ್ತವ್ಯ ನಿರ್ವಹಿಸಬೇಕಾದರೆ ದುಷ್ಕರ್ಮಿಗಳಿಂದ ಭೀಕರ ದಾಳಿಗೊಳಗಾಗಿ ಮುಂಗೈ ಕಳೆದುಕೊಂಡಿದ್ದ ಪಂಜಾಬ್​ನ ಪೊಲೀಸ್​ ಅಧಿಕಾರಿ ಇದೀಗ ಸಂಪೂರ್ಣವಾಗಿ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್​​ ಆಗಿದ್ದಾರೆ.

ಏಪ್ರಿಲ್​ 12ರಂದು ಬೆಳ್ಳಂಬೆಳಗ್ಗೆ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಬ್ಯಾರಿಕೇಡ್​ ಮೇಲೆ ಕಾರು ಹತ್ತಿಸಿದ್ದ ಕೆಲ ದುಷ್ಕರ್ಮಿಗಳ ಗುಂಪು ಪೊಲೀಸರ ಮೇಲೆ ಹಲ್ಲೆ ಮಾಡಿ ಎಎಸ್​ಐ ಹರ್ಜಿತ್​​ ಸಿಂಗ್​ ಅವರ ಕೈ ಕತ್ತರಿಸಿದ್ದನು. ಈ ವೇಳೆ ತಕ್ಷಣವೇ ಅವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬರೋಬ್ಬರಿ 7 ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಸಿ ಕೈ ಜೋಡಣೆ ಮಾಡಲಾಗಿತ್ತು. ಇದೀಗ ಅವರು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ.

  • Happy to share that SI Harjeet Singh has been discharged from PGI, Chandigarh today. I thank Doctors, Nurses, Paramedics & all the staff of PGI for taking good care of him. Before getting discharged, he was handed over his son's appointment letter with Punjab Police. pic.twitter.com/E2DnnvYIh8

    — Capt.Amarinder Singh (@capt_amarinder) April 30, 2020 " class="align-text-top noRightClick twitterSection" data=" ">

ಇದೀಗ ಮನೆಗೆ ತೆರಳಿ ವಿಶ್ರಾಂತಿ ಪಡೆದುಕೊಳ್ಳಲಿದ್ದು, ಅವರ ಮಗನನ್ನು ಕಾನ್​ಸ್ಟೇಬಲ್​ ಆಗಿ ನೇಮಕ ಮಾಡಿಕೊಳ್ಳಲಾಗಿದೆ ಎಂದು ಡಿಜಿಪಿ ದಿನಕರ್ ಗುಪ್ತಾ ತಿಳಿಸಿದ್ದಾರೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಅಮರಿಂದರ್​ ಸಿಂಗ್​, ಎಎಸ್​ಐ ಹರ್ಜಿತ್​ ಸಿಂಗ್​ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದು, ಡಾಕ್ಟರ್ಸ್​, ನರ್ಸ್​​ ಹಾಗೂ ಎಲ್ಲ ಸಿಬ್ಬಂದಿಗೂ ನಾನು ಧನ್ಯವಾದ ತಿಳಿಸುತ್ತೇನೆ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.