ETV Bharat / bharat

ಶ್ರೀಲಂಕಾ ಬಾಂಧವ್ಯ ಭಾರತಕ್ಕೇಕೆ ಮುಖ್ಯ...? ಮೋದಿ ರಾಜಪಕ್ಸೆ ಭೇಟಿ ಫಲಶೃತಿ ಏನು? - Shrilanka President Gotabaya Rajapaksa meet PM Modi

ಶ್ರೀಲಂಕದ ನೂತನ ಅಧ್ಯಕ್ಷ ಗೋಟಬಯ ರಾಜಪಕ್ಸೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದೆಹಲಿಯಲ್ಲಿ ಅಧಿಕೃತ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಈ ಕುರಿತ ಸಂಪೂರ್ಣ ವಿವರ ಇಲ್ಲಿದೆ.

Shrilanka President Gotabaya Rajapaksa meet PM Modi
ಗೋಟಬಯ ರಾಜಪಕ್ಸೆ ಮತ್ತು ಪ್ರಧಾನಿ ನರೇಂದ್ರ ಮೋದಿ ದ್ವಿಪಕ್ಷೀಯ ಮಾತುಕತೆ
author img

By

Published : Nov 30, 2019, 2:07 PM IST

Updated : Nov 30, 2019, 3:06 PM IST

ಇತ್ತೀಚೆಗಷ್ಟೆ ಪ್ರಮಾಣವಚನ ಸ್ವೀಕರಿಸಿದ ಶ್ರೀಲಂಕಾದ ನೂತನ ಅಧ್ಯಕ್ಷ ಗೋಟಬಯ ರಾಜಪಕ್ಸೆ, ತಮ್ಮ ಅಧಿಕಾರ ಸ್ವೀಕಾರದ ಬಳಿಕ ಮೊದಲ ಸಲ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ದೆಹಲಿಯಲ್ಲಿ ಅಧಿಕೃತ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಈ ಸಭೆಯಲ್ಲಿ ಚರ್ಚಿತ ಪ್ರಮುಖ ಐದು ವಿಷಯಗಳತ್ತ ಹಿರಿಯ ಪತ್ರಕರ್ತೆ ಸ್ಮಿತಾ ಶರ್ಮಾ ಬೆಳಕು ಚೆಲ್ಲಿದ್ದಾರೆ.

1. ರಾಜಪಕ್ಸೆ ಅವರೊಂದಿಗಿನ ಸಂಬಂಧ ಮುಂದುವರಿಕೆ

ಈ ತಿಂಗಳು ನಡೆದ ಶ್ರೀಲಂಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಗೋಟಬಯ ರಾಜಪಕ್ಸೆ ಜಯಗಳಿಸಿದ್ದು, ಅವರು ಪ್ರಮಾಣವಚನ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಭಾರತೀಯ ವಿದೇಶಾಂಗ ಸಚಿವ ಜೈಶಂಕರ್ ಅವರು ಕೊಲೊಂಬೊಗೆ ತೆರಳಿ ಅಭಿನಂದನೆ ಸಲ್ಲಿಸಿದ್ದರು. ಇದಾದ ಬಳಿಕ, ಅಧಿಕಾರ ವಹಿಸಿಕೊಂಡ ಕೇವಲ ಹತ್ತು ದಿನಗಳಲ್ಲಿ, ಗೋಟಬಯಾ ತಮ್ಮ ಮೊದಲ ಅಧಿಕೃತ ವಿದೇಶ ಪ್ರವಾಸಕ್ಕಾಗಿ ನವದೆಹಲಿಯಲ್ಲಿದ್ದರು. ಈ ಘಟನೆಗಳು ಎರಡೂ ಕಡೆಯವರು ಭಾರತ-ಶ್ರೀಲಂಕ ದ್ವಿಪಕ್ಷೀಯ ಸಂಬಂಧಕ್ಕೆ ನೀಡುತ್ತಿರುವ ಮಹತ್ವವನ್ನು ಸೂಚಿಸುತ್ತದೆ. ಮಹಿಂದಾ ರಾಜಪಕ್ಸೆ ಶ್ರೀಲಂಕದ ಅಧ್ಯಕ್ಷರಾಗಿದ್ದಾಗ ಅಭಿವೃದ್ಧಿಗೊಂಡ ಚೀನಾದ ನೆರಳನ್ನು ಗಮನದಲ್ಲಿಟ್ಟುಕೊಂಡು, ಭಾರತ-ಶ್ರೀಲಂಕಾ ಸಂಬಂಧ ಗಟ್ಟಿಗೊಳಿಸುವುದು ಮತ್ತು ಹೊಸ ಅಧ್ಯಾಯದ ಪ್ರಾರಂಭವು ಮಹತ್ವ ಪಡೆದಿದೆ. ರಾಜಪಕ್ಸೆ ಸಹೋದರರು ಅಧಿಕಾರಕ್ಕೆ ಮರಳಿದ್ದು, ದ್ವಿಪಕ್ಷೀಯ ಸಂಬಂಧಗಳ ಭವಿಷ್ಯಕ್ಕಾಗಿ ಈ ನಡೆಯೆ ಎಂಬ ಅನುಮಾನ ಸಹಜವಾಗಿ ಮೂಡುತ್ತದೆ. “ನಮ್ಮ ಎರಡು ದೇಶಗಳ ಭದ್ರತೆ ಮತ್ತು ಅಭಿವೃದ್ಧಿ ಬೇರ್ಪಡಿಸಲಾಗದು. ಆದ್ದರಿಂದ, ನಾವು ಪರಸ್ಪರರ ಸುರಕ್ಷತೆ ಮತ್ತು ಸಂವೇದನೆಗಳ ಬಗ್ಗೆ ಜಾಗೃತರಾಗಿರುವುದು ಸಹಜ ”ಎಂದು ಪ್ರಧಾನಿ ಮೋದಿ ಶ್ರೀಲಂಕಾ ಮಹತ್ವ ಕುರಿತ ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಒಂದು ಗಂಟೆ ಕಾಲ ನಿಯೋಗ ಮಟ್ಟದ ಚರ್ಚೆಗಳಿಲ್ಲದೆ, ಉಭಯ ನಾಯಕರ ಮುಖಾಮುಖಿ ಮತ್ತು ನಿರ್ಬಂಧಿತ ಸ್ವರೂಪದ ಮಾತುಕತೆ, ಎಲ್ಲಾ ಭೌಗೋಳಿಕ ರಾಜಕೀಯ ಕಳವಳಗಳ ನಡುವೆ ಹೊಸ ಸಂಬಂಧಗಳ ಪ್ರಾರಂಭದ ಸೂಚನೆ ನೀಡುತ್ತಿದೆ. ಮತ್ತು ರಾಜಪಕ್ಸೆ ನೂತನ ಆಡಳಿತದಲ್ಲಿ ಕೊಲಂಬೊಕ್ಕೆ ಮೊದಲ ವಿದೇಶಿ ನಾಯಕರಾಗಿ ಮೋದಿ ಅವರಿಗೆ ಆಹ್ವಾನ ನೀಡಿರುವುದು ಈ ಸಂದೇಶಕ್ಕೆ ಮತ್ತಷ್ಟು ಇಂಬು ನೀಡುತ್ತಿದೆ.

2. ಅಭಿವೃದ್ಧಿ ದೃಷ್ಟಿಕೋನದೊಂದಿಗೆ ಕಾರ್ಯತಂತ್ರದ ಸಹಕಾರ

ಶ್ರೀಲಂಕಾದ ಮೂಲಸೌಕರ್ಯ ಮತ್ತು ಸಾಮರ್ಥ್ಯ ವೃದ್ಧಿಗಾಗಿ 400 ಮಿಲಿಯನ್ ಡಾಲರ್‌ ಸಾಲವನ್ನು ಭಾರತ ಘೋಷಿಸಿರುವುದು ಮಹತ್ತರವಾಗಿದೆ. ಇದನ್ನು ಸಮುದಾಯ ಅಭಿವೃದ್ಧಿ ಮತ್ತು ಶೈಕ್ಷಣಿಕ ಅನುದಾನ ಯೋಜನೆಗಳಿಗೆ ವಿಸ್ತರಿಸಲಾಗುವುದು ಎನ್ನಲಾಗಿದೆ. ಶ್ರೀಲಂಕ ಮಾಜಿ ಅಧ್ಯಕ್ಷ ಸಿರಿಸೇನಾ ಅವರಿಗೆ ದೇಶದ ಆರ್ಥಿಕ ಸವಾಲುಗಳು ಮುಳ್ಳಾದವು. ಹಂಬಂತೋಟ ಬಂದರು ಗುತ್ತಿಗೆ ಚೀನಾದ ಸಾಲದ ಬಲೆ ಎಂದು ಸಾಬೀತಾಯಿತು. ಆದರೆ ಭಾರತ, ಅಭಿವೃದ್ಧಿ, ಸಹಕಾರದ ನೆಲೆಯಲ್ಲಿ ವ್ಯಾಪಾರ ಮತ್ತು ಹೂಡಿಕೆ ಸಂಬಂಧಗಳ ಮೇಲೆ ಗಮನಹರಿಸಿರುವುದು ‘ಪರಸ್ಪರ ಹಿತಾಸಕ್ತಿ’ಯನ್ನು ಮತ್ತು ಜನತೆಯ ಆಶಯಕ್ಕೆ ಆದ್ಯತೆ ನೀಡುತ್ತಿರುವುದನ್ನು ಸಂಕೇತಿಸುತ್ತದೆ. ಶ್ರೀಲಂಕದ ಉತ್ತರ ಮತ್ತು ಪೂರ್ವ ಪ್ರಾಂತ್ಯಗಳಲ್ಲಿ ಆಂತರಿಕವಾಗಿ ಸ್ಥಳಾಂತರಗೊಂಡವರಿಗೆ ಭಾರತ ಇದುವರೆಗೆ 46,000 ಮನೆಗಳನ್ನು ನಿರ್ಮಿಸಿಕೊಟ್ಟಿದೆ. ಮತ್ತು ಭಾರತೀಯ ಮೂಲದ ತಮಿಳರಿಗೆ ಅಪ್-ಕಂಟ್ರಿ ಪ್ರದೇಶದಲ್ಲಿ 14,000 ಮನೆಗಳ ನಿರ್ಮಾಣ ನಡೆಯುತ್ತಿದೆ. ಅಂತಾರಾಷ್ಟ್ರೀಯ ಸೌರ ಒಕ್ಕೂಟದ ಶೃಂಗಸಭೆಯಲ್ಲಿ ಈ ಹಿಂದೆ ಘೋಷಿಸಲಾದ 100 ದಶಲಕ್ಷ ಸಾಲವನ್ನು ಶ್ರೀಲಂಕಾದ ಸೌರ ಯೋಜನೆಗಳಿಗೆ ಬಳಸಿಕೊಳ್ಳಲಾಗುವುದು. ಜುಲೈನಲ್ಲಿ ನಡೆದ ವಾರ್ಷಿಕ ಬಜೆಟ್‌ನಲ್ಲಿ ಭಾರತವು ಹತ್ತಿರದ ನೆರೆಯ ಶ್ರೀಲಂಕಗೆ ₹ 250 ಕೋಟಿ ಸಹಾಯ ನೀಡಿದೆ. ಹಾಗೆಯೇ ಮಾರಿಟಸ್‌ಗೆ ₹1100 ಕೋಟಿ ಮತ್ತು ಐಒಆರ್ (ಹಿಂದೂ ಮಹಾಸಾಗರ ಪ್ರದೇಶ) ದಲ್ಲಿ ಮಾಲ್ಡೀವ್ಸ್‌ಗೆ ₹ 576 ಕೋಟಿಗಳಷ್ಟು ಹಣ ಮೀಸಲಿಟ್ಟಿದೆ.

3.ಉಗ್ರ ನಿಗ್ರಹ ಸೂತ್ರ, 50 ದಶಲಕ್ಷ ಅಮೆರಿಕ ಡಾಲರ್‌ ನಿಧಿ

25 ವರ್ಷಗಳ ಅಂತರ್ಯುದ್ಧದ ನಂತರ ಎಲ್‌ಟಿಟಿಇ ಅನ್ನು ಸೋಲಿಸಿದ ಅಂದಿನ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಅವರ ರಕ್ಷಣಾ ಕಾರ್ಯದರ್ಶಿಯಾಗಿದ್ದ ಗೋಟಬಯಾ ಅವರಿಗೆ ಭಯೋತ್ಪಾದನೆ ಸವಾಲು ಹೊಸದೇನಲ್ಲ. ಈ ಸವಾಲನ್ನು ಎದುರಿಸಲು ಮತ್ತು ಗುಪ್ತಚರ ಮಾಹಿತಿ ಹಂಚಿಕೆ ಕಾರ್ಯ ವಿಧಾನಗಳನ್ನು ಹೆಚ್ಚಿಸಲು ಶ್ರೀಲಂಕಕ್ಕೆ 50 ದಶಲಕ್ಷ ಡಾಲರ್ ಹೆಚ್ಚುವರಿ ಸಾಲ ನೀಡಲು ಭಾರತ ಒಪ್ಪಿದೆ. ಈ ಮಾತುಕತೆಯಲ್ಲಿ ಭಯೋತ್ಪಾದನೆ ಒಂದು ಪ್ರಮುಖ ವಿಷಯವಾಗಿತ್ತು. ಭಾರತ ಮತ್ತು ಶ್ರೀಲಂಕ ಕಳೆದ ವರ್ಷಗಳಲ್ಲಿ ಗುಪ್ತಚರ ಸಹಕಾರ ಹೆಚ್ಚಿಸಿವೆ. ಭಯೋತ್ಪಾದಕ ದಾಳಿಯ ಸಾಧ್ಯತೆ ಬಗ್ಗೆ ಹಿಂದಿನ ಸರ್ಕಾರದಿಂದ ಭಾರತ ಪದೆಪದೇ ಮಾಹಿತಿ ಕಲೆ ಹಾಕುತ್ತಿತ್ತು. ಈ ವರ್ಷದ ಈಸ್ಟರ್ ಭಾನುವಾರದಂದು ಶ್ರೀಲಂಕದ ಚರ್ಚುಗಳು ಮತ್ತು ಐಷಾರಾಮಿ ಹೋಟೆಲ್‌ಗಳಲ್ಲಿ ನಡೆದ ಭೀಕರ ಸರಣಿ ದಾಳಿಯ ನಂತರ ಕೊಲಂಬೊಗೆ ಭೇಟಿ ನೀಡಿದ ಮೊದಲ ವಿದೇಶಿ ನಾಯಕ ಪ್ರಧಾನಿ ಮೋದಿ. ದಾಳಿಯ ನಂತರ ರಾಷ್ಟ್ರೀಯ ತನಿಖಾ ಸಂಸ್ಥೆ ತಮಿಳುನಾಡು, ಕೇರಳ ಮತ್ತು ಒಡಿಶಾದಾದ್ಯಂತ ಶೋಧ ನಡೆಸಿ ಬಾಂಬ್ ಸ್ಫೋಟಕ್ಕೆ ಕಾರಣರಾದ ಐಎಸ್​ನ ಶಂಕಿತ ಕಾರ್ಯಕರ್ತರನ್ನು ತನಿಖೆಗಾಗಿ ಬಂಧಿಸಿತು. ಭಾರತ ತನ್ನ ಸಂಸ್ಥೆಗಳಲ್ಲಿ ಶ್ರೀಲಂಕದ ಪೊಲೀಸ್ ಸಿಬ್ಬಂದಿಗೆ ಭಯೋತ್ಪಾದನೆ ನಿಗ್ರಹದ ಬಗ್ಗೆ ತರಬೇತಿ ನೀಡುತ್ತಿದೆ.

4.ಚೀನಾ ಮೇಲಿನ ನಿಗಾಕ್ಕೆ ಕೊಲಂಬೊ ಮೇಲೆ ಕಣ್ಣು

ಮಾತುಕತೆಯ ನಂತರ ಭಾರತ ಮತ್ತು ಶ್ರೀಲಂಕ ಯಾವುದೇ ಜಂಟಿ ಹೇಳಿಕೆಯನ್ನು ನೀಡಬೇಕಾಗಿರಲಿಲ್ಲ, ಏಕೆಂದರೆ ಈ ಬಾರಿ ಯಾವುದೇ ನಿಯೋಗದ ಸಭೆಗಳಿರಲಿಲ್ಲ. ಆದರೆ ಗೊಟಬಯಾ ಅವರ ಈ ಭೇಟಿಯು ಭಾರತ, ತನ್ನ ನೆರೆಹೊರೆ ರಾಷ್ಟ್ರ ಮತ್ತು ಹಿಂದೂ ಮಹಾಸಾಗರ ಪ್ರದೇಶದಲ್ಲಿ ತನ್ನ ಬೆಲ್ಟ್ ಮತ್ತು ರೋಡ್ ಇನಿಶಿಯೇಟಿವ್ (ಬಿಆರ್​ಐ) ಮೂಲಕ ತನ್ನ ಹೆಜ್ಜೆ ಗುರುತನ್ನು ವಿಸ್ತರಿಸಿದೆ ಎಂಬ ಪ್ರಮುಖ ಸಂದೇಶ ಚೀನಾಕ್ಕೆ ರವಾನಿಸಿದೆ. ಚೀನಾ ಸ್ವಾಧೀನಪಡಿಸಿಕೊಂಡಿರುವ ಭಾರತವನ್ನು ಸುತ್ತುವರೆದಿರುವ ಕಾರ್ಯನಿರತ ಬಂದರುಗಳಲ್ಲಿ ಶ್ರೀಲಂಕದ ಹಂಬಂತೋಟ, ಬಾಂಗ್ಲಾದೇಶದ ಚಿತ್ತಗಾಂಗ್ ಮತ್ತು ಪಾಕಿಸ್ತಾನದ ಗ್ವಾಡರ್ ಸೇರಿವೆ. ಮಹೀಂದಾ ರಾಜಪಕ್ಸೆ ಅವರ ಅಧ್ಯಕ್ಷೀಯ ಅವಧಿಯಲ್ಲಿ 1.4 ಶತಕೋಟಿ ಡಾಲರ್‌ ವೆಚ್ಚದಲ್ಲಿ ಕೊಲಂಬೊ ಪೋರ್ಟ್ ಸಿಟಿ ಯೋಜನೆಗಳನ್ನು ಅನಾವರಣಗೊಳಿಸಿದಾಗ ಬೀಜಿಂಗ್‌ ಮತ್ತು ಕೊಲಂಬೊ ಬಾಂಧವ್ಯ ವೃದ್ಧಿಸಿತ್ತು. ಹೀಗಾಗಿ ಕೊಲಂಬೊ ಬಂದರಿನಲ್ಲಿ ಪೂರ್ವ ಕಂಟೈನರ್ ಟರ್ಮಿನಲ್ ಅನ್ನು ಅಭಿವೃದ್ಧಿಪಡಿಸಲು ಭಾರತ, ಜಪಾನ್ ಜೊತೆ ಪಾಲುದಾರಿಕೆ ಹೊಂದಿದೆ. ಮತ್ತು ಇಂದು ಸಂಚಾರ ದಟ್ಟಣೆಯಿಂದ ಹೆಚ್ಚಿನ ಲಾಭವನ್ನು ಪಡೆಯುತ್ತದೆ. ಚೀನಾ ನಿರ್ಮಿತ ದಂಗೆ ನಿಗ್ರಹ ಉಪಕರಣಗಳನ್ನು ಖರೀದಿಸಲು ಈ ವರ್ಷ ಮೇ ತಿಂಗಳಲ್ಲಿ 14 ಮಿಲಿಯನ್ ಡಾಲರ್ ನೆರವು ನೀಡುವ ಮೂಲಕ ಚೀನಾ, ಶ್ರೀಲಂಕದ ರಕ್ಷಣಾ ಕ್ಷೇತ್ರದಲ್ಲಿ ತನ್ನ ಸಹಕಾರ ಮತ್ತಷ್ಟು ಹೆಚ್ಚಿಸಿಕೊಂಡಿದೆ. ಶ್ರೀಲಂಕಾ ಪೊಲೀಸರಿಗೆ 150 ವಾಹನಗಳನ್ನು ಸರಬರಾಜು ಮಾಡಿದೆ. ದೇಶದ ನೌಕಾಪಡೆಗೆ ಬೆನ್ನೆಲುಬಾಗಿದೆ. ಈ ಪ್ರದೇಶದಲ್ಲಿ ಚೀನಾದ ಉಪಸ್ಥಿತಿಯು ವಾಸ್ತವವಾಗಿದ್ದರೂ ಕೊಲಂಬೊ, ಬೀಜಿಂಗ್ ಕಡೆಗೆ ಮತ್ತಷ್ಟು ವಾಲದಂತೆ ಖಚಿತಪಡಿಸಿಕೊಳ್ಳಲು ಭಾರತ-ಶ್ರೀಲಂಕದ ದಕ್ಷಿಣ ರಾಜ್ಯಗಳ ನಿಕಟ ಒಡನಾಟ ಹೆಚ್ಚಿಸುವತ್ತ ಗಮನಹರಿಸಿದೆ.

5.ಜನಾಂಗೀಯ ಸಾಮರಸ್ಯಕ್ಕಾಗಿ ಸಂದೇಶ

ಅಲ್ಪಸಂಖ್ಯಾತ ತಮಿಳರ ಸಮಸ್ಯೆಗಳು ಶ್ರೀಲಂಕದ ರಾಜಕೀಯದಲ್ಲಿ ಪ್ರಾತಿನಿಧ್ಯ ಹೆಚ್ಚಿಸಿದೆ. 13ನೇ ಕಾಯ್ದೆ ತಿದ್ದುಪಡಿ ಅನುಷ್ಠಾನವು ಔಪಚಾರಿಕ ಮಾತುಕತೆಗಳಲ್ಲಿ ಕಾಣಿಸಿಕೊಂಡಿದೆ. ಶ್ರೀಲಂಕಾದ ತಮಿಳು ರಾಜಕೀಯವು ದಕ್ಷಿಣ ಭಾರತದ ರಾಜ್ಯ ತಮಿಳುನಾಡಿನ ದೇಶೀಯ ರಾಜಕಾರಣದೊಂದಿಗೆ ಥಳಕು ಹಾಕುತ್ತದೆ. ರಾಜಪಕ್ಸೆ ಸಹೋದರರು ಎಲ್‌ಟಿಟಿಇ ವಿರುದ್ಧದ ಯುದ್ಧದ ಸಮಯದಲ್ಲಿ ಯುದ್ಧ ಅಪರಾಧಿಗಳನ್ನು ಬಂಧಿಸಿದ ಮತ್ತು ತಮಿಳು ಜನಾಂಗೀಯ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ ಹೊಂದಿದ್ದಾರೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಇದರ ಸಮನ್ವಯದ ಪ್ರಯತ್ನಗಳು ಹೆಚ್ಚಾದವು. ಆದರೆ ಯುದ್ಧ ಅಪರಾಧಗಳ ಬಗ್ಗೆ ತನಿಖೆ ಸಿರಿಸೇನಾರಿಂದಲೂ ಮುಂದುವರಿಯಲಿಲ್ಲ. ಬಹುಸಂಖ್ಯಾತ ಸಿಂಹಳೀಯ ದೇಶದಲ್ಲಿ ತಮಿಳು ಸಮುದಾಯದ ಆಕಾಂಕ್ಷೆಗಳನ್ನು ಸರ್ಕಾರ ಪೂರೈಸಲಿದೆ ಎಂದು ಮೋದಿ ಆಶಿಸಿದ್ದಾರೆ. “ನಾವು ಶ್ರೀಲಂಕಾದಲ್ಲಿ ಸಾಮರಸ್ಯದ ಬಗ್ಗೆ ಬಹಿರಂಗವಾಗಿ ವಿಚಾರ ವಿನಿಮಯ ಮಾಡಿಕೊಂಡಿದ್ದೇವೆ. ಅಧ್ಯಕ್ಷ ರಾಜಪಕ್ಸೆ ರಾಜಕೀಯ ದೃಷ್ಟಿಕೋನ ಹಂಚಿಕೊಂಡಿದ್ದಾರೆ. ಸಮಾನತೆ, ನ್ಯಾಯ, ಶಾಂತಿ ಮತ್ತು ಗೌರವಕ್ಕಾಗಿ ತಮಿಳರ ಆಕಾಂಕ್ಷೆಗಳನ್ನು ಈಡೇರಿಸಲು ಶ್ರೀಲಂಕಾ ಸರ್ಕಾರವು ಸಮನ್ವಯ ಪ್ರಕ್ರಿಯೆಯನ್ನು ಮುಂದಿಡಲಿದೆ ಎಂದು ನನಗೆ ವಿಶ್ವಾಸವಿದೆ”ಎಂದು ಮೋದಿ ಹೇಳಿದ್ದಾರೆ. ಮೀನುಗಾರರ ದುಃಸ್ಥಿತಿ ಮತ್ತು ಜೀವನೋಪಾಯದ ವಿಷಯಗಳ ಬಗ್ಗೆ ಕಾಳಜಿ ಸಹ ದೀರ್ಘವಾಗಿ ಚರ್ಚಿಸಲಾಯಿತು. ಶ್ರೀಲಂಕಾದ ವಶದಲ್ಲಿರುವ ಭಾರತೀಯ ಮೀನುಗಾರರ ದೋಣಿಗಳನ್ನು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಅಧ್ಯಕ್ಷ ರಾಜಪಕ್ಸೆ ಭರವಸೆ ನೀಡಿದರು.

Intro:Body:

ಶ್ರೀಲಂಕಾ ಬಾಂಧ್ಯವ್ಯ ಭಾರತಕ್ಕೇಕೆ ಮುಖ್ಯ...?ಮೋದಿ ರಾಜಪಕ್ಸೆ ಭೇಟಿ ಫಲಶೃತಿ ಏನು?

ಇತ್ತೀಚೆಗಷ್ಟೆ ಪ್ರಮಾಣವಚನ ಸ್ವೀಕರಿಸಿದ ಶ್ರೀಲಂಕದ ನೂತನ ಅಧ್ಯಕ್ಷ ಗೋಟಬಯ ರಾಜಪಕ್ಸೆ, ತಮ್ಮ ಅಧಿಕಾರ ಸ್ವೀಕಾರದ ಬಳಿಕ ಮೊದಲ ಸಲ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ದೆಹಲಿಯಲ್ಲಿ ಅಧಿಕೃತ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಈ ಸಭೆಯಲ್ಲಿ ಚರ್ಚಿತ ಪ್ರಮುಖ ಐದು ವಿಷಯಗಳತ್ತ ಹಿರಿಯ ಪತ್ರಕರ್ತೆ ಸ್ಮಿತಾ ಶರ್ಮಾ ಬೆಳಕು ಚೆಲ್ಲಿದ್ದಾರೆ

1. ರಾಜಪಕ್ಸೆಯವರೊಂದಿಗಿನ ಸಂಬಂಧ ಮುಂದುವರಿಕೆ

ಈ ತಿಂಗಳು ನಡೆದ ಶ್ರೀಲಂಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಗೋಟಬಯ ರಾಜಪಕ್ಸೆ ಜಯಗಳಿಸಿದ್ದು, ಅವರು ಪ್ರಮಾಣವಚನ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಭಾರತೀಯ ವಿದೇಶಾಂಗ ಸಚಿವ ಜೈಶಂಕರ್ ಅವರು ಕೊಲೊಂಬೊಗೆ ತೆರಳಿ ಅಭಿನಂದನೆ ಸಲ್ಲಿಸಿದ್ದರು. ಇದಾದ ಬಳಿಕ, ಅಧಿಕಾರ ವಹಿಸಿಕೊಂಡ ಕೇವಲ ಹತ್ತು ದಿನಗಳಲ್ಲಿ, ಗೋತಬಯಾ ತಮ್ಮ ಮೊದಲ ಅಧಿಕೃತ ವಿದೇಶ ಪ್ರವಾಸಕ್ಕಾಗಿ ನವದೆಹಲಿಯಲ್ಲಿದ್ದರು. ಈ ಘಟನೆಗಳು ಎರಡೂ ಕಡೆಯವರು ಭಾರತ-ಶ್ರೀಲಂಕಾ ದ್ವಿಪಕ್ಷೀಯ ಸಂಬಂಧಕ್ಕೆ ನೀಡುತ್ತಿರುವ ಮಹತ್ವವನ್ನು ಸೂಚಿಸುತ್ತದೆ. ಮಹಿಂದಾ ರಾಜಪಕ್ಸೆ ಶ್ರೀಲಂಕಾದ ಅಧ್ಯಕ್ಷರಾಗಿದ್ದಾಗ ಅಭಿವೃದ್ಧಿಗೊಂಡ ಚೀನಾದ ನೆರಳನ್ನು ಗಮನದಲ್ಲಿಟ್ಟುಕೊಂಡು, ಭಾರತ-ಶ್ರೀಲಂಕ ಸಂಬಂಧ ಗಟ್ಟಿಗೊಳಿಸುವುದು ಮತ್ತು ಹೊಸ ಅಧ್ಯಾಯದ ಪ್ರಾರಂಭವು ಮಹತ್ವ ಪಡೆದಿದೆ. ರಾಜಪಕ್ಸೆ ಸಹೋದರರು ಅಧಿಕಾರಕ್ಕೆ ಮರಳಿದ್ದು, ದ್ವಿಪಕ್ಷೀಯ ಸಂಬಂಧಗಳ ಭವಿಷ್ಯಕ್ಕಾಗಿ ಈ ನಡೆಯೆ ಎಂಬ ಅನುಮಾನ ಸಹಜವಾಗಿ ಮೂಡುತ್ತದೆ.  “ನಮ್ಮ ಎರಡು ದೇಶಗಳ ಭದ್ರತೆ ಮತ್ತು ಅಭಿವೃದ್ಧಿ ಬೇರ್ಪಡಿಸಲಾಗದು. ಆದ್ದರಿಂದ, ನಾವು ಪರಸ್ಪರರ ಸುರಕ್ಷತೆ ಮತ್ತು ಸಂವೇದನೆಗಳ ಬಗ್ಗೆ ಜಾಗೃತರಾಗಿರುವುದು ಸಹಜ ”ಎಂದು ಪ್ರಧಾನಿ ಮೋದಿ ಶ್ರೀಲಂಕಾ ಮಹತ್ವ ಕುರಿತ ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.  ಒಂದು ಗಂಟೆ ಕಾಲ ನಿಯೋಗ ಮಟ್ಟದ ಚರ್ಚೆಗಳಿಲ್ಲದೆ, ಉಭಯ ನಾಯಕರ ಮುಖಾಮುಖಿ ಮತ್ತು ನಿರ್ಬಂಧಿತ ಸ್ವರೂಪದ ಮಾತುಕತೆ, ಎಲ್ಲಾ ಭೌಗೋಳಿಕ ರಾಜಕೀಯ ಕಳವಳಗಳ ನಡುವೆ ಹೊಸ ಸಂಬಂಧಗಳ ಪ್ರಾರಂಭದ ಸೂಚನೆ ನೀಡುತ್ತಿದೆ. ಮತ್ತು ರಾಜಪಕ್ಸೆ ನೂತನ  ಆಡಳಿತದಲ್ಲಿ ಕೊಲಂಬೊಕ್ಕೆ ಮೊದಲ ವಿದೇಶಿ ನಾಯಕರಾಗಿ ಪ್ರಧಾನಿ ಮೋದಿಯವರಿಗೆ ಆಹ್ವಾನ ನೀಡಿರುವುದು ಈ ಸಂದೇಶಕ್ಕೆ ಮತ್ತಷ್ಟು ಇಂಬು ನೀಡುತ್ತಿದೆ. 

2. ಅಭಿವೃದ್ಧಿ ದೃಷ್ಟಿಕೋನದೊಂದಿಗೆ ಕಾರ್ಯತಂತ್ರದ ಸಹಕಾರ

ಶ್ರೀಲಂಕಾದಲ್ಲಿನ ಮೂಲಸೌಕರ್ಯ ಮತ್ತು ಸಾಮರ್ಥ್ಯ ವೃದ್ಧಿಗಾಗಿ 400 ಮಿಲಿಯನ್ ಡಾಲರ್‌  ಸಾಲವನ್ನು ಭಾರತ ಘೋಷಿಸಿರುವುದು ಮಹತ್ತರವಾಗಿದೆ. ಇದನ್ನು ಸಮುದಾಯ ಅಭಿವೃದ್ಧಿ ಮತ್ತು ಶೈಕ್ಷಣಿಕ ಅನುದಾನ ಯೋಜನೆಗಳಿಗೆ ವಿಸ್ತರಿಸಲಾಗುವುದು ಎನ್ನಲಾಗಿದೆ. ಶ್ರೀಲಂಕ ಮಾಜಿ ಅಧ್ಯಕ್ಷ ಸಿರಿಸೇನಾ ಅವರಿಗೆ ದೇಶದ ಆರ್ಥಿಕ ಸವಾಲುಗಳು ಮುಳ್ಳಾದವು. ಹಂಬಂಟೋಟ ಬಂದರು ಗುತ್ತಿಗೆ ಚೀನಾದ ಸಾಲದ ಬಲೆ ಎಂದು ಸಾಬೀತಾಯಿತು. ಆದರೆ ಭಾರತ, ಅಭಿವೃದ್ಧಿ, ಸಹಕಾರದ ನೆಲೆಯಲ್ಲಿ ವ್ಯಾಪಾರ ಮತ್ತು ಹೂಡಿಕೆ ಸಂಬಂಧಗಳ ಮೇಲೆ ಗಮನಹರಿಸಿರುವುದು ‘ಪರಸ್ಪರ ಹಿತಾಸಕ್ತಿ’ ಯನ್ನು ಮತ್ತು ಜನತೆಯ ಆಶಯಕ್ಕೆ ಆದ್ಯತೆ ನೀಡುತ್ತಿರುವುದನ್ನು ಸಂಕೇತಿಸುತ್ತದೆ. ಶ್ರೀಲಂಕಾದ ಉತ್ತರ ಮತ್ತು ಪೂರ್ವ ಪ್ರಾಂತ್ಯಗಳಲ್ಲಿ ಆಂತರಿಕವಾಗಿ ಸ್ಥಳಾಂತರಗೊಂಡವರಿಗೆ ಭಾರತ ಇದುವರೆಗೆ 46,000 ಮನೆಗಳನ್ನು ನಿರ್ಮಿಸಿಕೊಟ್ಟಿದೆ ಮತ್ತು ಭಾರತೀಯ ಮೂಲದ ತಮಿಳರಿಗೆ ಅಪ್-ಕಂಟ್ರಿ ಪ್ರದೇಶದಲ್ಲಿ 14,000 ಮನೆಗಳ ನಿರ್ಮಾಣ ನಡೆಯುತ್ತಿದೆ. ಅಂತಾರಾಷ್ಟ್ರೀಯ ಸೌರ ಒಕ್ಕೂಟದ ಶೃಂಗಸಭೆಯಲ್ಲಿ ಈ ಹಿಂದೆ ಘೋಷಿಸಲಾದ 100 ದಶಲಕ್ಷ ಸಾಲವನ್ನು ಶ್ರೀಲಂಕಾದ ಸೌರ ಯೋಜನೆಗಳಿಗೆ ಬಳಸಿಕೊಳ್ಳಲಾಗುವುದು. ಈ ವರ್ಷದ ಜುಲೈನಲ್ಲಿ ನಡೆದ ವಾರ್ಷಿಕ ಬಜೆಟ್‌ನಲ್ಲಿ ಭಾರತವು ಹತ್ತಿರದ ನೆರೆಯ ಶ್ರೀಲಂಕಾಗೆ 250 ಕೋಟಿ ಸಹಾಯವನ್ನು ಮಂಜೂರು ಮಾಡಿದ್ದರೆ, ಮಾರಿಟಸ್‌ಗೆ 1100 ಕೋಟಿ ಮತ್ತು ಐಒಆರ್ (ಹಿಂದೂ ಮಹಾಸಾಗರ ಪ್ರದೇಶ) ದಲ್ಲಿ ಮಾಲ್ಡೀವ್ಸ್‌ಗೆ 576 ಕೋಟಿಗಳಷ್ಟು ಹಣವನ್ನು ಮೀಸಲಿಟ್ಟಿದೆ. 

3. ಉಗ್ರ ನಿಗ್ರಹ ಸೂತ್ರ, 50 ದಶಲಕ್ಷ ಅಮೆರಿಕ ಡಾಲರ್‌ ನಿಧಿ

25 ವರ್ಷಗಳ ಅಂತರ್ಯುದ್ಧದ ನಂತರ ಎಲ್‌ಟಿಟಿಇಯನ್ನು ಸೋಲಿಸಿದ ಅಂದಿನ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಅವರ ರಕ್ಷಣಾ ಕಾರ್ಯದರ್ಶಿಯಾಗಿದ್ದ ಗೋಟಬಯಾ ಅವರಿಗೆ ಭಯೋತ್ಪಾದನೆ ಸವಾಲು ಹೊಸದೇನಲ್ಲ. ಈ ಸವಾಲನ್ನು ಎದುರಿಸಲು ಮತ್ತು ಗುಪ್ತಚರ ಮಾಹಿತಿ ಹಂಚಿಕೆ ಕಾರ್ಯವಿಧಾನಗಳನ್ನು ಹೆಚ್ಚಿಸಲು ಶ್ರೀಲಂಕಾಕ್ಕೆ 50 ದಶಲಕ್ಷ ಡಾಲರ್ ಹೆಚ್ಚುವರಿ ಸಾಲವನ್ನು ನೀಡಲು ಭಾರತ ಒಪ್ಪಿದೆ. ಈ ಮಾತುಕತೆಯಲ್ಲಿ ಭಯೋತ್ಪಾದನೆ ಒಂದು ಪ್ರಮುಖ ವಿಷಯವಾಗಿತ್ತು. ಭಾರತ ಮತ್ತು ಶ್ರೀಲಂಕಾ ಕಳೆದ ವರ್ಷಗಳಲ್ಲಿ ಗುಪ್ತಚರ ಸಹಕಾರವನ್ನು ಹೆಚ್ಚಿಸಿವೆ. ಭಯೋತ್ಪಾದಕ  ದಾಳಿಯ ಸಾಧ್ಯತೆಯ ಬಗ್ಗೆ ಹಿಂದಿನ ಸರ್ಕಾರದಿಂದ ಭಾರತ ಪದೆ ಪದೆ ಮಾಹಿತಿ ಕಲೆ ಹಾಕುತ್ತಿತ್ತು. ಈ ವರ್ಷದ ಈಸ್ಟರ್ ಭಾನುವಾರದಂದು ಶ್ರೀಲಂಕಾದ ಚರ್ಚುಗಳು ಮತ್ತು ಐಷಾರಾಮಿ ಹೋಟೆಲ್‌ಗಳಲ್ಲಿ ನಡೆದ ಭೀಕರ ಸರಣಿ ದಾಳಿಯ ನಂತರ ಕೊಲಂಬೊಗೆ ಭೇಟಿ ನೀಡಿದ ಮೊದಲ ವಿದೇಶಿ ನಾಯಕ ಪ್ರಧಾನಿ ಮೋದಿ. ದಾಳಿಯ ನಂತರ ರಾಷ್ಟ್ರೀಯ ತನಿಖಾ ಸಂಸ್ಥೆ ತಮಿಳುನಾಡು, ಕೇರಳ ಮತ್ತು ಒಡಿಶಾದಾದ್ಯಂತ ಶೋಧ ಕಾರ್ಯ ನಡೆಸಿ ಶ್ರೀಲಂಕದ ಬಾಂಬ್ ಸ್ಫೋಟಕ್ಕೆ ಕಾರಣರಾದ ಐಎಸ್ನ ಭಾರತೀಯ ಶಂಕಿತ ಕಾರ್ಯಕರ್ತರನ್ನು ತನಿಖೆಗಾಗಿ ಬಂಧಿಸಿತು. ಭಾರತ ತನ್ನ ಸಂಸ್ಥೆಗಳಲ್ಲಿ ಶ್ರೀಲಂಕದ ಪೊಲೀಸ್ ಸಿಬ್ಬಂದಿಗೆ ಭಯೋತ್ಪಾದನೆ ನಿಗ್ರಹದ ಬಗ್ಗೆ ತರಬೇತಿ ನೀಡುತ್ತಿದೆ.

4. ಚೀನಾ ಮೇಲಿನ ನಿಗಾಕ್ಕೆ ಕೊಲಂಬೊ ಮೇಲೆ ಕಣ್ಣು

ಮಾತುಕತೆಯ ನಂತರ ಭಾರತ ಮತ್ತು ಶ್ರೀಲಂಕಾ ಯಾವುದೇ ಜಂಟಿ ಹೇಳಿಕೆಯನ್ನು ನೀಡಬೇಕಾಗಿರಲಿಲ್ಲ, ಏಕೆಂದರೆ ಈ ಬಾರಿ ಯಾವುದೇ ನಿಯೋಗದ ಸಭೆಗಳಿರಲಿಲ್ಲ. ಆದರೆ ಗೊಟಬಯಾ ಅವರ ಈ ಭೇಟಿಯು ಭಾರತ, ತನ್ನ ನೆರೆಹೊರೆ ರಾಷ್ಟ್ರ ಮತ್ತು ಹಿಂದೂ ಮಹಾಸಾಗರ ಪ್ರದೇಶದಲ್ಲಿ ತನ್ನ ಬೆಲ್ಟ್ ಮತ್ತು ರೋಡ್ ಇನಿಶಿಯೇಟಿವ್ (ಬಿಆರ್ಐ) ಮೂಲಕ ತನ್ನ ಹೆಜ್ಜೆಗುರುತನ್ನು ವಿಸ್ತರಿಸಿದೆ ಎಂಬ ಒಂದು ಪ್ರಮುಖ ಸಂದೇಶವನ್ನುಚೀನಾಕ್ಕೆ ರವಾನಿಸಿದೆ. ಚೀನಾ ಸ್ವಾಧೀನಪಡಿಸಿಕೊಂಡಿರುವ ಭಾರತವನ್ನು ಸುತ್ತುವರೆದಿರುವ ಕಾರ್ಯನಿರತ ಬಂದರುಗಳಲ್ಲಿ ಶ್ರೀಲಂಕಾದ ಹಮಾಬಂಟೋಟ, ಬಾಂಗ್ಲಾದೇಶದ ಚಿತ್ತಗಾಂಗ್ ಮತ್ತು ಪಾಕಿಸ್ತಾನದ ಗ್ವಾಡರ್ ಸೇರಿವೆ. ಮಹೀಂದಾ ರಾಜಪಕ್ಸೆ ಅವರ ಅಧ್ಯಕ್ಷೀಯ ಅವಧಿಯಲ್ಲಿ 1.4 ಶತಕೋಟಿ ಡಾಲರ್‌ ವೆಚ್ಚದಲ್ಲಿ ಕೊಲಂಬೊ ಪೋರ್ಟ್ ಸಿಟಿ ಯೋಜನೆಗಳನ್ನುಅನಾವರಣಗೊಳಿಸಿದಾಗ ಬೀಜಿಂಗ್‌ ಮತ್ತು ಕೊಲಂಬೊ ಬಾಂಧವ್ಯ ವೃದ್ಧಿಸಿತ್ತು. ಹೀಗಾಗಿ ಕೊಲಂಬೊ ಬಂದರಿನಲ್ಲಿ ಪೂರ್ವ ಕಂಟೈನರ್ ಟರ್ಮಿನಲ್ ಅನ್ನು ಅಭಿವೃದ್ಧಿಪಡಿಸಲು ಭಾರತ, ಜಪಾನ್ ಜೊತೆ ಪಾಲುದಾರಿಕೆ ಹೊಂದಿದೆ ಮತ್ತು ಇಂದು ಸಂಚಾರ ದಟ್ಟಣೆಯಿಂದ ಹೆಚ್ಚಿನ ಲಾಭವನ್ನು ಪಡೆಯುತ್ತದೆ. ಚೀನಾ ನಿರ್ಮಿತ ದಂಗೆ ನಿಗ್ರಹ ಉಪಕರಣಗಳನ್ನು ಖರೀದಿಸಲು ಈ ವರ್ಷ ಮೇ ತಿಂಗಳಲ್ಲಿ 14 ಮಿಲಿಯನ್ ಡಾಲರ್ ನೆರವು ನೀಡುವ ಮೂಲಕ ಚೀನಾ, ಶ್ರೀಲಂಕಾದ ರಕ್ಷಣಾ ಕ್ಷೇತ್ರದಲ್ಲಿ ತನ್ನ ಸಹಕಾರ ಮತ್ತಷ್ಟು ಹೆಚ್ಚಿಸಿಕೊಂಡಿದೆ ಮತ್ತು ಶ್ರೀಲಂಕಾ ಪೊಲೀಸರಿಗೆ 150 ವಾಹನಗಳನ್ನು ಸರಬರಾಜು ಮಾಡಿದೆ ಮತ್ತು ದೇಶದ ನೌಕಾಪಡೆಗೆ ಬೆನ್ನೆಲುಬಾಗಿದೆ. ಈ ಪ್ರದೇಶದಲ್ಲಿ ಚೀನಾದ ಉಪಸ್ಥಿತಿಯು ವಾಸ್ತವವಾಗಿದ್ದರೂ, ಕೊಲಂಬೊ, ಬೀಜಿಂಗ್ ಕಡೆಗೆ ಮತ್ತಷ್ಟು ವಾಲದಂತೆ ಖಚಿತಪಡಿಸಿಕೊಳ್ಳಲು ಭಾರತ, ಶ್ರೀಲಂಕಾದ ದಕ್ಷಿಣ ರಾಜ್ಯಗಳ ನಿಕಟ ಒಡನಾಟವನ್ನು ಹೆಚ್ಚಿಸುವತ್ತ ಗಮನಹರಿಸಿದೆ. 

5.ಜನಾಂಗೀಯ ಸಾಮರಸ್ಯಕ್ಕಾಗಿ ಸಂದೇಶ

ಅಲ್ಪಸಂಖ್ಯಾತ ತಮಿಳರ ಸಮಸ್ಯೆಗಳು ಶ್ರೀಲಂಕದ ರಾಜಕೀಯದಲ್ಲಿ ಅಲ್ಪಸಂಖ್ಯಾತ ತಮಿಳರ ರಾಜಕೀಯ ಪ್ರಾತಿನಿಧ್ಯವನ್ನು ಹೆಚ್ಚಿಸಿದೆ ಮತ್ತು 13ನೇ ಕಾಯ್ದೆ ತಿದ್ದುಪಡಿಯ ಅನುಷ್ಠಾನವು ಔಪಚಾರಿಕ ಮಾತುಕತೆಗಳಲ್ಲಿ ಕಾಣಿಸಿಕೊಂಡಿದೆ. ಶ್ರೀಲಂಕಾದ ತಮಿಳು ರಾಜಕೀಯವು ದಕ್ಷಿಣ ಭಾರತದ ರಾಜ್ಯವಾದ ತಮಿಳುನಾಡಿನಲ್ಲಿನ ದೇಶೀಯ ರಾಜಕಾರಣದೊಂದಿಗೆ ಥಳಕು ಹೊಂದಿದೆ. ರಾಜಪಕ್ಸೆ ಸಹೋದರರು ಎಲ್‌ಟಿಟಿಇ ವಿರುದ್ಧದ ಯುದ್ಧದ ಸಮಯದಲ್ಲಿ ಯುದ್ಧ ಅಪರಾಧಿಗಳನ್ನು ಬಂಧಿಸಿದ ಮತ್ತು ತಮಿಳು ಜನಾಂಗೀಯ ಮಾನವ ಹಕ್ಕುಗಳ ಉಲ್ಲಂಘನೆಯ ಆರೋಪ ಹೊಂದಿದ್ದಾರೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಇದರ ಸಮನ್ವಯದ ಪ್ರಯತ್ನಗಳು ಹೆಚ್ಚಾದವು. ಆದರೆ ಯುದ್ಧ ಅಪರಾಧಗಳ ಬಗ್ಗೆ ತನಿಖೆ ಸಿರಿಸೇನರಿಂದಲೂ ಮುಂದುವರಿಯಲಿಲ್ಲ. ಬಹುಸಂಖ್ಯಾತ ಸಿಂಹಳೀಯ ದೇಶದಲ್ಲಿ ತಮಿಳು ಸಮುದಾಯದ ಆಕಾಂಕ್ಷೆಗಳನ್ನು ಸರ್ಕಾರ ಪೂರೈಸಲಿದೆ ಎಂದು ಪ್ರಧಾನಿ ಮೋದಿ ಆಶಿಸಿದ್ದಾರೆ. “ನಾವು ಶ್ರೀಲಂಕಾದಲ್ಲಿ ಸಾಮರಸ್ಯದ ಬಗ್ಗೆ ಬಹಿರಂಗವಾಗಿ ವಿಚಾರ ವಿನಿಮಯ ಮಾಡಿಕೊಂಡಿದ್ದೇವೆ. ಅಧ್ಯಕ್ಷ ರಾಜಪಕ್ಸೆ ಜನಾಂಗೀಯ ಸಾಮರಸ್ಯದ ಬಗ್ಗೆ ಅವರ ರಾಜಕೀಯ ದೃಷ್ಟಿಕೋನ ಹಂಚಿಕೊಂಡಿದ್ದಾರೆ. ಸಮಾನತೆ, ನ್ಯಾಯ, ಶಾಂತಿ ಮತ್ತು ಗೌರವಕ್ಕಾಗಿ ತಮಿಳರ ಆಕಾಂಕ್ಷೆಗಳನ್ನು ಈಡೇರಿಸಲು ಶ್ರೀಲಂಕಾ ಸರ್ಕಾರವು ಸಮನ್ವಯ ಪ್ರಕ್ರಿಯೆಯನ್ನು ಮುಂದಿಡಲಿದೆ ಎಂದು ನನಗೆ ವಿಶ್ವಾಸವಿದೆ ”ಎಂದು ಪ್ರಧಾನಿ ಮೋದಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮೀನುಗಾರರ ದುಃಸ್ಥಿತಿ ಮತ್ತು ಜೀವನೋಪಾಯದ ವಿಷಯಗಳ ಬಗ್ಗೆ ಮಾನವೀಯ ಕಾಳಜಿಗಳನ್ನು ಸಹ ದೀರ್ಘವಾಗಿ ಚರ್ಚಿಸಲಾಯಿತು. ಶ್ರೀಲಂಕಾದ ವಶದಲ್ಲಿರುವ ಭಾರತೀಯ ಮೀನುಗಾರರ ದೋಣಿಗಳನ್ನು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಅಧ್ಯಕ್ಷ ರಾಜಪಕ್ಸೆ ಭರವಸೆ ನೀಡಿದರು. 

Conclusion:
Last Updated : Nov 30, 2019, 3:06 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.