ಶಿರಡಿ: ಪರ್ಬಾನಿಯಲ್ಲಿರುವ ಪತ್ರಿ ಸಾಯಿಬಾಬಾ ಜನ್ಮಸ್ಥಳ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಘೋಷಣೆ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಶಿರಡಿ ನಗರವನ್ನು ಅನಿರ್ದಿಷ್ಟಾವಧಿವರೆಗೆ ಮುಚ್ಚಲು ಸಾಯಿ ಬಾಬಾ ಸಂಸ್ಥಾನ ಟ್ರಸ್ಟ್ ಕರೆ ನೀಡಿದೆ.
ಸಾಯಿಬಾಬಾ ಅವರ ಜನ್ಮಸ್ಥಳದ ಬಗ್ಗೆ ವದಂತಿ ಹಬ್ಬಿದ ಹಿನ್ನೆಲೆಯಲ್ಲಿ ಶಿರಡಿ ನಗರವನ್ನು ಭಾನುವಾರದಿಂದ ಅನಿರ್ದಿಷ್ಟಾವಧಿಯವರೆಗೆ ಬಂದ್ ಮಾಡುವುದಾಗಿ ಹೇಳಿದ್ದೇವೆ ಎಂದು ಸಾಯಿಬಾಬಾ ಸಂಸ್ಥಾನ ಸದಸ್ಯರು ಹೇಳಿದ್ದಾರೆ. ಆದೇ ಸಾಯಿಬಾಬಾ ಮಂದಿರ ಭಕ್ತರಿಗಾಗಿ ತೆರೆದಿರಲಿದೆ. ಇದರಿಂದ ಭಕ್ತರು ದರ್ಶನ ಪಡೆಯಬಹುದು ಎಂದು ಇದೇ ವೇಳೆ ಸ್ಪಷ್ಟನೆ ಸಹ ನೀಡಿದ್ದಾರೆ.
ಶಿರಡಿ ನಗರದಲ್ಲಿ ಬಂದ್ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಇಂದು ಅಂಗಡಿ-ಮುಂಗಟ್ಟುಗಳು ಮುಚ್ಚಿ ಸ್ಥಳೀಯರು ಬೆಂಬಲ ಸೂಚಿಸಲಿದ್ದಾರೆ. ಸಿಎಂ ಹೇಳಿಕೆ ಹಿಂಪಡೆಯುವವರೆಗೆ ಬಂದ್ ಮುಂದುವರಿಸುವ ಸಾಧ್ಯತೆ ಇದೆ.