ETV Bharat / bharat

ಮಹಾರಾಷ್ಟ್ರದಲ್ಲಿ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚಳ: ಶಿರಡಿ ಸಾಯಿಬಾಬಾ ದೇವಾಲಯ ಬಂದ್​​

ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್​ ಹರಡುವಿಕೆ ಹಿನ್ನೆಲೆ ಪ್ರಸಿದ್ಧ ಶಿರಡಿ ಸಾಯಿಬಾಬಾ ದೇವಸ್ಥಾನಕ್ಕೆ ಜನರ ಪ್ರವೇಶ ನಿರ್ಬಂಧಿಸಲಾಗಿದೆ.

shirdi saibaba temple will be closed anytime today
ಶಿರಡಿ ಸಾಯಿಬಾಬಾ ದೇವಾಲಯ ಬಂದ್​​
author img

By

Published : Mar 17, 2020, 11:41 AM IST

ಮಹಾರಾಷ್ಟ್ರ: ಜಾಗತಿಕ ಮಟ್ಟದಲ್ಲಿ ಭೀತಿ ಹುಟ್ಟಿಸಿರುವ ಕೊರೊನಾ ವೈರಸ್​​ ಹರಡುವಿಕೆ ಹಿನ್ನೆಲೆ ದೇಶಾದ್ಯಂತ ದೇವಸ್ಥಾನಗಳನ್ನು ಬಂದ್​​ ಮಾಡಲಾಗುತ್ತಿದೆ. ಇದೇ ಹಿನ್ನೆಲೆಯಲ್ಲಿ ಪ್ರಸಿದ್ಧ ದೇವಾಲಯ ಮಹಾರಾಷ್ಟ್ರದ ಶಿರಡಿ ಸಾಯಿಬಾಬಾ ದೇವಾಲಯಕ್ಕೆ ಭಕ್ತರ ಪ್ರವೇಶ ನಿಷೇಧಿಸಲಾಗಿದೆ.

ಶಿರಡಿ ಸಾಯಿಬಾಬಾ ದೇವಾಲಯ ಬಂದ್​​

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸೋಂಕು ಮತ್ತಷ್ಟು ವ್ಯಾಪಿಸುವುದನ್ನು ತಡೆಯಲು ಸರ್ಕಾರ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಈ ಹಿನ್ನೆಲೆ ಸಾಯಿಬಾಬಾ ದೇವಾಲಯಕ್ಕೆ ಭಕ್ತರಿಗೆ ನಿರ್ಬಂಧ ಹೇರಲಾಗಿದೆ ಎಂದು ಶಿರಡಿ ಸಾಯಿಬಾಬಾ ಟ್ರಸ್ಟ್​​ನಿಂದ ಪ್ರಕಟಣೆ ಹೊರಡಿಸಿದೆ. ಪ್ರತಿದಿನ ಶಿರಡಿಗೆ ಸಾವಿರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆಯುತ್ತಿದ್ರು. ಆದ್ರೆ ಇದೀಗ ದೇವಾಲಯ ಬಂದ್​​ ಮಾಡಿರುವುದರಿಂದ ದೇವಾಲಯದ ಆದಾಯಕ್ಕೂ ಹೊಡೆತ ಬಿದ್ದಿದೆ.

ಮಹಾರಾಷ್ಟ್ರದಲ್ಲಿ ಈವರೆಗೆ ಒಟ್ಟು 39 ಜನರಿಗೆ ಕೋವಿಡ್​​-19 ವೈರಸ್​​ ತಗುಲಿದ್ದು, ಇಂದು ಒಬ್ಬ ವ್ಯಕ್ತಿ ಮಾರಕ ವೈರಸ್ ನಿಂದ ಮೃತಪಟ್ಟಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.