ETV Bharat / bharat

ಮಹಾರಾಷ್ಟ್ರ ಸಿಎಂ ಆಗಬೇಕೆಂಬ ಜಯಂತ್ ಪಾಟೀಲ್ ಆಶಯಕ್ಕೆ ಶರದ್ ಪವಾರ್ ಪ್ರತಿಕ್ರಿಯಿಸಿದ್ದು ಹೀಗೆ - Statement by Jayant Patil

ನಾಳೆ ನಾನೂ ಮುಖ್ಯಮಂತ್ರಿಯಾಗಲು ಬಯಸುತ್ತೇನೆ. ನನ್ನನ್ನು ಆಯ್ಕೆ ಮಾಡುವಿರೇ? ಎಂದು ಮಹಾರಾಷ್ಟ್ರ ಸಿಎಂ ಆಗಬೇಕೆಂಬ ಜಯಂತ್ ಪಾಟೀಲ್ ಅವರ ಆಶಯಕ್ಕೆ ಶರದ್ ಪವಾರ್ ವ್ಯಂಗ್ಯವಾಗೇ ಪ್ರತಿಕ್ರಿಯಿಸಿದ್ದಾರೆ.

Sharad Pawar  reacts to Jayant Patil's Wish Of Becoming The Maharashtra CM
ಮಹಾರಾಷ್ಟ್ರ ಸಿಎಂ ಆಗಬೇಕೆಂಬ ಜಯಂತ್ ಪಾಟೀಲ್ ಆಶಯಕ್ಕೆ ಶರದ್ ಪವಾರ್ ಪ್ರತಿಕ್ರಿಯಿಸಿದ್ದು ಹೀಗೆ
author img

By

Published : Jan 22, 2021, 2:52 PM IST

ಕೊಲ್ಹಾಪುರ: ಎನ್‌ಸಿಪಿ ರಾಜ್ಯ ಅಧ್ಯಕ್ಷ ಜಯಂತ್ ಪಾಟೀಲ್ ಮುಖ್ಯಮಂತ್ರಿಯಾಗಬೇಕೆಂಬ ಬಯಕೆಗೆ ಎನ್‌ಸಿಪಿ ರಾಜ್ಯ ಅಧ್ಯಕ್ಷ ಶರದ್ ಪವಾರ್ ತುಂಟ ಪ್ರತಿಕ್ರಿಯೆ ನೀಡಿದ್ದಾರೆ. ಜಯಂತ್ ಪಾಟೀಲ್ ಅವರು ಮುಖ್ಯಮಂತ್ರಿಯಾಗಲು ಬಯಸಿದರೆ ಎಂದು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪವಾರ್, ಬಯಸಿದರೆ ಏನು? ಅವನಿಗೆ ಶುಭವಾಗಲಿ... ನಾಳೆ ನಾನೂ ಮುಖ್ಯಮಂತ್ರಿಯಾಗಬೇಕೆಂದು ಬಯಸುತ್ತೇನೆ. ಅದನ್ನು ಯಾರು ಮಾಡುತ್ತಾರೆ? ಎಂದರು.

ಜಯಂತ್ ಪಾಟೀಲ್ ಹೇಳಿದ್ದು:

ಸಾಂಗ್ಲಿಯ ಇಸ್ಲಾಂಪುರದಲ್ಲಿ ನಡೆದ ಸಂದರ್ಶನವೊಂದರಲ್ಲಿ ಅವರು ಮಾತನಾಡಿ, ನಾನು ಕೂಡ ಮುಖ್ಯಮಂತ್ರಿಯಾಗಲು ಬಯಸುತ್ತೇನೆ. ಈ ಸುಪ್ತ ಭಾವನೆಯನ್ನು ಎನ್‌ಸಿಪಿ ರಾಜ್ಯಾಧ್ಯಕ್ಷ ಮತ್ತು ಜಲಸಂಪನ್ಮೂಲ ಸಚಿವ ಜಯಂತ್ ಪಾಟೀಲ್ ವ್ಯಕ್ತಪಡಿಸಿದ್ದಾರೆ. ರಾಜಕೀಯದಲ್ಲಿ ದೀರ್ಘಕಾಲ ಕೆಲಸ ಮಾಡುತ್ತಿರುವ ಯಾರೇ ಆದರೂ ಮುಖ್ಯಮಂತ್ರಿಯಾಗಲು ಬಯಸಬಹುದು. ನನಗೂ ಅದೇ ರೀತಿ ಅನಿಸುವುದು ಸಹಜ. ಆದರೆ ಶರದ್ ಪವಾರ್ ಅವರ ನಿರ್ಧಾರ ನಮ್ಮ ದೃಷ್ಟಿಯಲ್ಲಿ ಅಂತಿಮವಾಗಿದೆ ಎಂದು ಸಚಿವ ಜಯಂತ್ ಪಾಟೀಲ್ ಹೇಳಿದ್ದರು.

ಯು-ಟರ್ನ್ ಹೊಡೆದ ಜಯಂತ್ ಪಾಟೀಲ್:

ತಮ್ಮ ಹೇಳಿಕೆಯಲ್ಲಿ ಜಯಂತ್ ಪಾಟೀಲ್ ಯು-ಟರ್ನ್ ತೆಗೆದುಕೊಂಡಿದ್ದು, ರಾಜಕೀಯ ವಲಯಗಳಲ್ಲಿನ ಚರ್ಚೆಗಳನ್ನು ನೋಡಿದರೆ ನಾನು ಹಾಗೆ ಯೋಚಿಸುವುದಿಲ್ಲ. ನೀವು ಮುಖ್ಯಮಂತ್ರಿಯಾಗಲು ಬಯಸುವಿರಾ? ಅದು ನನಗೆ ಕೇಳಿದ ಪ್ರಶ್ನೆಯಾಗಿತ್ತು. ಸುದ್ದಿ ಚಾನೆಲ್​​ಗಳು ನನ್ನ ಹೇಳಿಕೆಯನ್ನು ತಿರುಚಿ ತೋರಿಸಿವೆ ಎಂದು ಜಯಂತ್ ಪಾಟೀಲ್ ಹೇಳಿದರು. ನಮ್ಮಲ್ಲಿ ಕಡಿಮೆ ಮಾನವ ಸಂಪನ್ಮೂಲವಿದೆ ಮತ್ತು ಸದ್ಯ ಎನ್‌ಸಿಪಿಯಲ್ಲಿ ಯಾವುದೇ ನಿರ್ಧಾರವಾದರೂ ಶರದ್ ಪವಾರ್ ಮಾತ್ರ ತೆಗೆದುಕೊಳ್ಳುವವರಾಗಿದ್ದಾರೆ ಎಂದು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.