ETV Bharat / bharat

ಚಿನ್ಮಯಾನಂದ ವಿರುದ್ಧದ ಲೈಂಗಿಕ ದೌರ್ಜನ್ಯ ಕೇಸ್​​ ವಾಪಸ್​ ಪಡೆದ ಕಾನೂನು ವಿದ್ಯಾರ್ಥಿನಿ! - ಚಿನ್ಮಯಾನಂದ ವಿರುದ್ಧ ಲೈಂಗಿಕ ದೌರ್ಜನ್ಯ ಕೇಸ್​​ ವಾಪಸ್

ಮಾಜಿ ಸಚಿವ ಚಿನ್ಮಯಾನಂದ ಮೇಲೆ ಲೈಂಗಿಕ ದೌರ್ಜನ್ಯ ಕೇಸ್​ ದಾಖಲು ಮಾಡಿದ್ದ ಕಾನೂನು ವಿದ್ಯಾರ್ಥಿನಿ ಇದೀಗ ತಮ್ಮ ಹೇಳಿಕೆ ಹಿಂಪಡೆದುಕೊಂಡಿದ್ದಾರೆ.

Chinmayanand
Chinmayanand
author img

By

Published : Oct 14, 2020, 11:41 AM IST

ಲಖನೌ( ಉತ್ತರ ಪ್ರದೇಶ): ಮಾಜಿ ಸಚಿವ ಚಿನ್ಮಯಾನಂದ ವಿರುದ್ಧ ಲೈಂಗಿಕ ದೌರ್ಜನ್ಯ ಕೇಸ್​ ದಾಖಲು ಮಾಡಿದ್ದ ಕಾನೂನು ವಿದ್ಯಾರ್ಥಿನಿ ಇದೀಗ ತಮ್ಮ ದೂರು ಹಿಂಪಡೆದುಕೊಂಡಿದ್ದಾರೆ. ಈ ಹಿಂದೆ ತಾವು ಬಿಜೆಪಿ ನಾಯಕನಿಂದ ನಿರಂತರವಾಗಿ ಅತ್ಯಾಚಾರಕ್ಕೊಳಗಾಗಿದ್ದಾಗಿ ಗಂಭೀರ ಆರೋಪ ಮಾಡಿದ್ದರು.

ಆದರೆ, ಇದೀಗ ಲಖನೌದ ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯದಿಂದ ತಮ್ಮ ಹೇಳಿಕೆ ವಾಪಸ್​ ಪಡೆದುಕೊಂಡಿದ್ದಾರೆ. ತಾವು ಮಾಡಿದ್ದ ಅತ್ಯಾಚಾರದ ಆರೋಪ ನಿರಾಕರಿಸುವುದಾಗಿ ತಿಳಿಸಿದ್ದಾರೆ. 2019ರಲ್ಲಿ ಚಿನ್ಮಯಾನಂದ ಮೇಲೆ ಅತ್ಯಾಚಾರದ ಪ್ರಕರಣ ಮಾಡಿದ್ದರಿಂದ ಸೆಪ್ಟೆಂಬರ್​​ 20, 2019ರಲ್ಲಿ ಇವರನ್ನ ಬಂಧನ ಮಾಡಲಾಗಿತ್ತು.

ಚಿನ್ಮಯಾನಂದ್ ಅವರ ಟ್ರಸ್ಟ್​​ ನಡೆಸುತ್ತಿರುವ ಸಹಜಾನ್​ಪುರ್​​ ಕಾನೂನು ಕಾಲೇಜ್​​ನಲ್ಲಿ ವಿದ್ಯಾರ್ಥಿನಿಯಾಗಿದ್ದ ಯುವತಿ ತಮಗೆ ಕೊಲೆ ಬೆದರಿಕೆ ಸಹ ಹಾಕಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು. ಇದೀಗ ದಿಢೀರ್​ ಆಗಿ ತಮ್ಮ ಹೇಳಿಕೆಯಲ್ಲಿ ಬದಲಾವಣೆ ಮಾಡಿರುವ ಕಾರಣ ಆಕ್ರೋಶಗೊಂಡಿರುವ ಪ್ರಾಸಿಕ್ಯೂಷನ್​​​ ಸಿಆರ್​ಪಿಸಿ ಸೆಕ್ಷನ್​ 340ರ ಅಡಿ ಅರ್ಜಿ ಸಲ್ಲಿಸಿದ್ದು, ಸುಳ್ಳು ಆರೋಪಕ್ಕಾಗಿ ಆಕೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.

ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಚಿನ್ಮಯಾನಂದ ಕೇಂದ್ರ ಸಚಿವರಾಗಿದ್ದರು. ಅಲಹಾಬಾದ್​ ಹೈಕೋರ್ಟ್​ ನಿರ್ದೇಶನದ ಮೇರೆಗೆ ಲಖನೌ ನ್ಯಾಯಾಲಯ ಪ್ರಕರಣದ ವಿಚಾರಣೆ ನಡೆಸುತ್ತಿತ್ತು. ಬಂಧನವಾಗಿದ್ದ ಚಿನ್ಮಯಾನಂದ ಫೆಬ್ರವರಿ 3,2020ರಂದು ಜಾಮೀನು ಪಡೆದು ಬಿಡುಗಡೆಯಾಗಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.