ನವದೆಹಲಿ: ಸಿಎಎ, ಎನ್‌ಆರ್‌ಸಿ ವಿರುದ್ಧ ಕಳೆದ ಕೆಲ ದಿನಗಳಿಂದ ದೊಡ್ಡ ಮಟ್ಟದ ಪ್ರತಿಭಟನೆ ನಡೆಯುತ್ತಿದ್ದು, ಇದೀಗ ತಮ್ಮೊಂದಿಗೆ ಪ್ರೇಮಿಗಳ ದಿನ ಆಚರಣೆ ಮಾಡಲು ಬನ್ನಿ ಎಂದು ಪ್ರಧಾನಿ ನರೇಂದ್ರ ಮೋದಿಗೆ ಆಹ್ವಾನ ನೀಡಿದ್ದಾರೆ.
ಕಳೆದ ಡಿಸೆಂಬರ್ 15ರಿಂದಲೂ ಪ್ರತಿಭಟನಾಕಾರರು ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಪೌರತ್ವ ನೋಂದಣಿ ಕಾಯ್ದೆ ವಾಪಸ್ ಪಡೆದುಕೊಳ್ಳುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗ್ತಿದೆ. ದೆಹಲಿಯ ಶಾಹೀನ್ ಬಾಗ್ನಲ್ಲಿ ಧರಣಿ ಕುಳಿತಿರುವ ಪ್ರತಿಭಟನಾಕಾರರು ಇಂದು ಪ್ರಧಾನಿ ಮೋದಿಗೆ ಆಹ್ವಾನ ನೀಡಿದ್ದು, ಅವರಿಗೆ ವಿಶೇಷ ಉಡುಗೊರೆ ನೀಡಲು ಸಿದ್ಧರಾಗಿದ್ದಾರೆ.
ಪ್ರತಿಭಟನೆ ನಡೆಯುತ್ತಿರುವ ದಿನದಿಂದಲೂ ಮೋದಿ ಈ ಸ್ಥಳಕ್ಕೆ ಭೇಟಿ ನೀಡದ ಕಾರಣ, ಮೋದಿಯವರೇ ದಯವಿಟ್ಟು ಶಾಹೀನ್ ಬಾಗ್ಗೆ ಬಂದು ನಮ್ಮೊಂದಿಗೆ ಮಾತನಾಡಿ, ಉಡುಗೊರೆ ತೆಗೆದುಕೊಂಡು ಹೋಗಿ ಎಂಬ ಬ್ಯಾನರ್ ಹಾಕಿಕೊಂಡಿದ್ದು, ಅವುಗಳನ್ನ ಸೋಷಿಯಲ್ ಮೀಡಿಯಾದಲ್ಲೂ ಹರಿಬಿಟ್ಟಿದ್ದಾರೆ.
ಶಾಹೀನ್ ಬಾಗ್ನಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಮೇಲೆ ಫೆಬ್ರವರಿ 1ರಂದು ಗಾಳಿಯಲ್ಲಿ ಗುಂಡು ಹಾರಿಸಿದ ಪರಿಣಾಮ ವ್ಯಕ್ತಿಯೊಬ್ಬ ಗಾಯಗೊಂಡಿದ್ದ ಘಟನೆ ಸಹ ನಡೆದಿತ್ತು. ಇಲ್ಲಿ ನಡೆಯುತ್ತಿರುವ ಸಿಎಎ ವಿರೋಧಿ ಪ್ರತಿಭಟನೆ ಕುರಿತ ಅರ್ಜಿ ವಿಚಾರಣೆಯನ್ನು ದೆಹಲಿ ಚುನಾವಣೆ ಬಳಿಕ ಕೈಗೆತ್ತಿಕೊಳ್ಳುವುದಾಗಿ ಸುಪ್ರೀಂಕೋರ್ಟ್ ಹೇಳಿತ್ತು.