ಮಧ್ಯ ಪ್ರದೇಶ: ಪೌರತ್ವ (ತಿದ್ದುಪಡಿ) ಕಾಯ್ದೆಯಲ್ಲಿ ದೇಶದ ಪ್ರಜೆಯ ಪೌರತ್ವವನ್ನು ಕಸಿಯುವ ಬಗ್ಗೆ ಒಂದೇ ಒಂದು ಅಂಶವಿದ್ದರೂ ತೆಗೆದು ತೋರಿಸಲಿ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸವಾಲು ಹಾಕಿದ್ದಾರೆ.
ಮಧ್ಯಪ್ರದೇಶದ ಜಬಲ್ಪುರದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ, ಪೌರತ್ವ (ತಿದ್ದುಪಡಿ) ಕಾಯ್ದೆಯ ವಿಚಾರವಾಗಿ ವಿರೋಧ ಪಕ್ಷಗಳು ಅಪಪ್ರಚಾರ ಮಾಡುತ್ತಿರುವುದರ ಕುರಿತು ಕಿಡಿಕಾರಿದರು. ದೇಶದ ಮೇಲೆ ನಮಗೆ ನಿಮಗೆ ಎಷ್ಟು ಅಧಿಕಾರ ಇದೆಯೋ ಅಷ್ಟೇ ಅಧಿಕಾರ ಪಾಕಿಸ್ತಾನದಿಂದ ಬಂದ ಹಿಂದೂಗಳು, ಸಿಖ್ಖರು, ಬೌದ್ಧರು ಹಾಗೂ ಕ್ರೈಸ್ತರಿಗೂ ಇದೆ ಎಂದರು.
'ತಾಕತ್ತಿದ್ದರೆ ರಾಮ ಮಂದಿರ ನಿರ್ಮಾಣ ತಡೆಯಿರಿ':
ಒಂದೆಡೆ ರಾಮ ಮಂದಿರ ನಿರ್ಮಾಣವಾಗುವುದಿಲ್ಲ ಅಂತಾ ಕಾಂಗ್ರೆಸ್ ವಕೀಲ ಕಪಿಲ್ ಸಿಬಲ್ ಹೇಳುತ್ತಾರೆ. ಇನ್ನು ನಾಲ್ಕು ತಿಂಗಳಲ್ಲಿ ರಾಮ ಮಂದಿರ ಕಟ್ಟೇ ಕಟ್ಟುತ್ತೇವೆ, ನಿಮಗೆ ತಾಕತ್ತಿದ್ದರೆ ತಡೆಯಿರಿ ಎಂದು ಸಿಬಲ್ಗೆ ಶಾ ಓಪನ್ ಚಾಲೆಂಜ್ ಮಾಡಿದ್ದಾರೆ.
ಇದೇ ವೇಳೆ ಜೆಎನ್ಯು ಹಿಂಸಾಚಾರ ಪ್ರಕರಣದ ಕುರಿತು ಮಾತನಾಡಿದ ಅವರು, ಭಾರತ ದೇಶ ಸಾವಿರ ತುಂಡು ತುಂಡುಗಳಾಗಲಿ ಎಂದು ಜೆಎನ್ಯು ವಿದ್ಯಾರ್ಥಿಗಳು ದೇಶ ವಿರೋಧಿ ಘೋಷಣೆ ಕೂಗುತ್ತಾರೆ. ಅಂತವರನ್ನ ಜೈಲಲ್ಲಿ ಇಡಬೇಕೇ ಬೇಡವೇ? ಎಂದು ಪ್ರಶ್ನಿಸಿದರೆ.