ನವದೆಹಲಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯದ ಇತ್ತೀಚಿನ ದತ್ತಾಂಶದ ಪ್ರಕಾರ ಭಾರತದ ಲಿಂಗಾನುಪಾತ ಕಳೆದ ಮೂರು ವರ್ಷಗಳಲ್ಲಿ ಏರಿಕೆಯಾಗಿದೆ ಎಂದು ತಿಳಿಸಿದೆ.
ಬೇಟಿ ಬಚಾವೋ, ಬೇಟಿ ಪಡಾವೋ ಕುರಿತು ಸಂಸತ್ ಅಧಿವೇಶನದಲ್ಲಿ ಕೇಳಿದ್ದ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ, ಸದ್ಯ ದೇಶದಲ್ಲಿ ಪ್ರತಿ ಸಾವಿರ ಪುರುಷರಿಗೆ 931 ಮಹಿಳೆಯರಿದ್ದಾರೆ. 2015-16ರಲ್ಲಿ ಪ್ರತಿ 1,000 ಪುರುಷರಿಗೆ 623 ಮಹಿಳೆಯರಿದ್ದರು. ಬಳಿಕ 2017-18ರಲ್ಲಿ 929ಕ್ಕೆ ಏರಿಕೆ ಆಗಿತ್ತು ಎಂದು ಉಲ್ಲೇಖಿಸಿದೆ.
ರಾಜ್ಯವಾರು ಲಿಂಗಾನುಪಾತದಲ್ಲಿ ಕೇರಳ (959) ಹಾಗೂ ಛತ್ತೀಸಗಢ್ (959) ಮೊದಲ ಸ್ಥಾನದಲ್ಲಿವೆ. ನಂತರದಲ್ಲಿ ಮಿಜೋರಾಂ (958) ಮತ್ತು ಗೋವಾ (954) ಹೊಂದಿವೆ. ಅತಿ ಕಡಿಮೆ ಲಿಂಗಾನುಪಾತ ಹೊಂದಿರುವುದರಲ್ಲಿ ಕೇಂದ್ರಾಡಳಿತ ಪ್ರದೇಶ ದಿಯು ಮತ್ತು ದಮನ್ (889) ಹಾಗೂ ಪಂಜಾಬ್ (900) ಸ್ಥಾನ ಪಡೆದಿವೆ.