ಮೀರತ್: ಉತ್ತರಪ್ರದೇಶದ ಮೀರತ್ನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸರು ದಾಳಿ ಮಾಡಿ ಬರೋಬ್ಬರಿ 18 ಯುವತಿಯರನ್ನು ಬಂಧಿಸಿದ್ದಾರೆ. ಇವರಲ್ಲಿ ಓರ್ವ ಯುವತಿ ಕೆಲ ದಿನಗಳಲ್ಲೇ ಮದುವೆ ಬಂಧನಕ್ಕೆ ರೆಡಿಯಾದ್ದಳು ಎಂಬ ಮಾಹಿತಿ ಸಿಕ್ಕಿದೆ.
ಲಭ್ಯವಾಗಿರುವ ಮಾಹಿತಿ ಪ್ರಕಾರ, ಮೀರತ್ನ ಹೋಟೆಲ್ ಮೇಲೆ ಪೊಲೀಸರು ಏಕಾಏಕಿ ದಾಳಿ ನಡೆಸಿದಾಗ 18 ಯುವತಿಯರು ಹಾಗೂ ಹೋಟೆಲ್ ಮಾಲೀಕ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಈ ವೇಳೆ ಅವರೆಲ್ಲರನ್ನೂ ಠಾಣೆಗೆ ಕರೆದುಕೊಂಡು ಬಂದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಬಂಧನವಾಗಿದ್ದ ಯುವತಿಯೋರ್ವಳು ಪೊಲೀಸರ ಮುಂದೆ ತನ್ನ ಅಳಲು ತೊಡಿಕೊಂಡಿದ್ದಾಳೆ.
'ಅಂಕಲ್ ನನ್ನನ್ನು ದಯವಿಟ್ಟು ಬಿಟ್ಟುಬಿಡಿ'
ಅಂಕಲ್ ನನ್ನನ್ನು ದಯವಿಟ್ಟು ಬಿಟ್ಟುಬಿಡಿ, ಕೆಲವೇ ದಿನಗಳಲ್ಲಿ ನನ್ನ ಮದುವೆ ನಡೆಯಲಿದೆ. ಈಗಾಗಲೇ ನನ್ನ ನಿಶ್ಚಿತಾರ್ಥ ಕೂಡಾ ಆಗಿದೆ ಎಂದು ಹೇಳಿದ್ದಾಳಂತೆ.
ಹೈ ಪ್ರೊಫೈಲ್ ಸೆಕ್ಸ್ ರಾಕೆಟ್ ನಡೆಯುತ್ತಿದೆ ಎನ್ನುವ ಖಚಿತ ಮಾಹಿತಿ ಮೇರೆಗೆ ಯುಪಿ ಪೊಲೀಸರು ದಾಳಿ ನಡೆಸಿದ್ದರು. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು ಆರೋಪಿಗಳು ಅರೆಸ್ಟ್ ಆಗಿದ್ದಾರೆ.