ETV Bharat / bharat

ವಿವಾಹದ ಹುಸಿ ಭರವಸೆ ನೀಡಿ ದೈಹಿಕ ಸಂಪರ್ಕ ಹೊಂದುವುದು ಅತ್ಯಾಚಾರವಲ್ಲ: ಒಡಿಶಾ ಹೈಕೋರ್ಟ್​ - Sex on false promise of marriage

ಇಂತಹ ಪ್ರಕರಣಗಳಲ್ಲಿ ವಿವಾಹದ ಸುಳ್ಳು ಭರವಸೆಯ ಮೇರೆಗೆ ಪುರುಷರ ಲೈಂಗಿಕ ಆಮಿಷಕ್ಕೆ ಮಹಿಳೆಯರು ಒಳಗಾಗುತ್ತಾರೆಯೇ ಹೊರತು ಅದು ಅತ್ಯಾಚಾರವಲ್ಲವೆಂದು ಒಡಿಶಾ ಹೈಕೋರ್ಟ್​ ಅಭಿಪ್ರಾಯಪಟ್ಟಿದೆ.

: ಒಡಿಶಾ ಹೈಕೋರ್ಟ್​
: ಒಡಿಶಾ ಹೈಕೋರ್ಟ್​
author img

By

Published : May 24, 2020, 8:11 PM IST

Updated : May 24, 2020, 9:23 PM IST

ಕಟಕ್ (ಒಡಿಶಾ): ವಿವಾಹದ ಸುಳ್ಳು ಭರವಸೆಯ ಮೇರೆಗೆ ಸಂಭೋಗದಲ್ಲಿ ಪಾಲ್ಗೊಳ್ಳುವುದು ಅತ್ಯಾಚಾರಕ್ಕೆ ಸಮನಾಗಿಲ್ಲ ಎಂದು ಒಡಿಶಾ ಹೈಕೋರ್ಟ್‌ ನ್ಯಾಯಮೂರ್ತಿ ಎಸ್.ಕೆ. ಪಾಣಿಗ್ರಾಹಿ ಅಭಿಪ್ರಾಯಪಟ್ಟಿದ್ದಾರೆ.

ಕಳೆದ ವರ್ಷ ನವೆಂಬರ್‌ನಲ್ಲಿ 19 ವರ್ಷದ ಬುಡಕಟ್ಟು ಮಹಿಳೆಯೊಬ್ಬರು ನೀಡಿದ ದೂರಿನ ಮೇರೆಗೆ ಒಡಿಶಾದ ಕೊರಪುಟ್ ಜಿಲ್ಲೆಯ ವಿದ್ಯಾರ್ಥಿಯನ್ನು ಅತ್ಯಾಚಾರ ಆರೋಪದಡಿ ಬಂಧಿಸಿದ ಪ್ರಕರಣದ ವಿಚಾರಣೆ ವೇಳೆ ಈ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ.

ಪ್ರಕರಣದ ದಾಖಲೆಗಳ ಪ್ರಕಾರ, ಒಂದೇ ಹಳ್ಳಿಯ ಯುವಕ ಮತ್ತು ಮಹಿಳೆ ಸುಮಾರು ನಾಲ್ಕು ವರ್ಷಗಳ ಕಾಲ ದೈಹಿಕ ಸಂಬಂಧದಲ್ಲಿದ್ದರು ಮತ್ತು ಆ ಅವಧಿಯಲ್ಲಿ ಅವಳು ಎರಡು ಬಾರಿ ಗರ್ಭಿಣಿಯಾಗಿದ್ದಳು. ಯುವಕ ಮದುವೆಯಾಗುವುದಾಗಿ ಭರವಸೆ ನೀಡಿ, ಮೋಸ ಮಾಡಿದ್ದಾನೆ ಎಂದು ಮಹಿಳೆ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದಳು.

ಗರ್ಭಪಾತ ಮಾತ್ರೆಗಳನ್ನು ಸೇವಿಸುವ ಮೂಲಕ ತನ್ನ ಗರ್ಭಧಾರಣೆಯನ್ನು ಅಂತ್ಯಗೊಳಿಸುವಂತೆ ಆರೋಪಿ ಒತ್ತಾಯಿಸಿದ್ದ ಎಂದು ಈ ಮಹಿಳೆ ಹೇಳಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿ ಕಳೆದ ಆರು ತಿಂಗಳ ಹಿಂದೆ ಯುವಕನನ್ನು ಬಂಧಿಸಿದ್ದರು.

ಪ್ರಾಸಿಕ್ಯೂಷನ್‌ಗೆ ಸಹಕರಿಸುತ್ತೇನೆ ಮತ್ತು ಆಪಾದಿತನು ಸಂತ್ರಸ್ತೆಗೆ ಬೆದರಿಕೆ ಹಾಕಬಾರದು ಎಂಬ ಷರತ್ತಿನ ಮೇರೆಗೆ ಹೈಕೋರ್ಟ್ ಗುರುವಾರ ಯುವಕನ ಜಾಮೀನು ಅರ್ಜಿಗೆ ಅನುಮತಿ ನೀಡಿತು.

ಈ ವೇಳೆ ಒಡಿಶಾ ಹೈಕೋರ್ಟ್​ 12 ಪುಟಗಳ ಆದೇಶದಲ್ಲಿ, ಅತ್ಯಾಚಾರ ಕಾನೂನುಗಳನ್ನು ವಿವರವಾಗಿ ಚರ್ಚಿಸಲಾಗಿದೆ. ಯಾವುದೇ ಆಶ್ವಾಸನೆಯಿಲ್ಲದ ಸಹಮತದ ಸಂಬಂಧವು ಐಪಿಸಿ (ಅತ್ಯಾಚಾರ) ಸೆಕ್ಷನ್ 376 ರ ಅಡಿಯಲ್ಲಿ ಅಪರಾಧವೆಂದು ಪರಿಗಣಿಸಲಾಗದು ಎಂದು ತಿಳಿಸಿದೆ.

ಈ ವಿಷಯವನ್ನು ಪರಿಶೀಲಿಸುವ ಅವಶ್ಯಕತೆಯಿದೆ. ಇಂತಹ ಪ್ರಕರಣಗಳಲ್ಲಿ ವಿವಾಹದ ಸುಳ್ಳು ಭರವಸೆಯ ಮೇರೆಗೆ ಪುರುಷರ ಲೈಂಗಿಕ ಆಮಿಷಕ್ಕೆ ಮಹಿಳೆಯರು ಒಳಗಾಗುತ್ತಾರೆಯೇ ಹೊರತು ಅದು ಅತ್ಯಾಚಾರವಲ್ಲವೆಂದು ಅಭಿಪ್ರಾಯಪಟ್ಟಿದೆ.

Last Updated : May 24, 2020, 9:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.