ಮುಂಬೈ: ವಾಣಿಜ್ಯ ನಗರಿ ಮುಂಬೈನ ಷೇರು ಮಾರುಕಟ್ಟೆಯಲ್ಲಿಂದು ಮತ್ತೆ ಕರಡಿ ಕುಣಿತ ಮುಂದುವರೆದಿದೆ. ಬೆಳಗಿನ ಆರಂಭದಲ್ಲೇ ಸೆನ್ಸೆಕ್ಸ್ 1000 ಅಂಕಗಳ ಕುಸಿತಗೊಳ್ಳುವ ಮೂಲಕ 30,634ರಲ್ಲಿ ವಹಿವಾಟು ನಡೆಸುತ್ತಿದೆ. ರಾಷ್ಟ್ರೀಯ ಸಂವೇದಿ ಸೂಚ್ಯಂಕ ನಿಫ್ಟಿ ಕೂಡ 234 ಅಂಕಗಳನ್ನು ಕಳೆದುಕೊಂಡು 9 ಸಾವಿರದ 26ರಲ್ಲಿತ್ತು.
ದಿನದ ಆರಂಭದಲ್ಲೇ ಸೆನ್ಸೆಕ್ಸ್ ಕುಸಿತದಿಂದ ಬ್ಯಾಂಕ್, ಇಂಧನ, ಮಾಹಿತಿ ತಂತ್ರಜ್ಞಾನ ಕಂಪನಿಗಳ ಷೇರಿನ ಮೌಲ್ಯವು ಕಡಿಮೆಯಾಗಿದೆ. ಜಾಗತಿಕ ತೈಲ ಮಾರುಕಟ್ಟೆಗಳಲ್ಲಿ ಇಂಧನದ ಏರಿಳಿತವೇ ಷೇರುಗಳ ಭಾರಿ ಪತನಕ್ಕೆ ಕಾರಣ ಎಂದು ವ್ಯಾಪಾರಿಗಳು ಹೇಳಿದ್ದಾರೆ.
ಮಾರುತಿ ಸುಜುಕಿ ಹೆಚ್ಚು ನಷ್ಟಹೊಂದಿದೆ. ಜೊತೆಗೆ ಟಾಟಾ ಸ್ಟೀಲ್, ಇಂಡಸ್ ಇಂಡ್ ಬ್ಯಾಂಕ್, ಬಜಾಜ್ ಫೈನಾನ್ಸ್, ಆಕ್ಸೀಸ್ ಬ್ಯಾಂಕ್ ಐಸಿಐಸಿಐ ಬ್ಯಾಂಕ್‌ನ ಷೇರುಗಳ ಮೌಲ್ಯವೂ ಕುಸಿದಿದೆ. ಉಳಿದಂತೆ ಸನ್ ಫಾರ್ಮಾ, ನೆಸ್ಲೆ ಇಂಡಿಯಾ, ಹೆಚ್‌ಯುಎಲ್, ಏಷಿಯನ್ ಪೇಂಟ್ಸ್ ಮತ್ತು ಐಟಿಸಿ ಷೇರುಗಳು ಮೌಲ್ಯ ಏರಿಕೆಯಾಗಿದೆ.