ಮುಂಬೈ: ಕೊರೊನಾಕ್ಕೆ ವ್ಯಾಕ್ಸಿನ್ ಶೀಘ್ರದಲ್ಲೇ ಮಾರುಕಟ್ಟೆ ಪ್ರವೇಶಿಸುವ ಸುದ್ದಿಯಿಂದಾಗಿ ಏಷ್ಯಾ ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ ಚೇತರಿಕೆ ಕಂಡು ಬಂದಿದೆ.
ಪರಿಣಾಮ ಮುಂಬೈ ಷೇರು ಮಾರುಕಟ್ಟೆಯಲ್ಲಿ ವಾರದ ಮೊದಲ ದಿನ ಆರಂಭಿಕ ವ್ಯವಹಾರದಲ್ಲಿ ಭಾರಿ ಏರಿಕೆಯಾಗಿದೆ.
ಇಂದು ಮುಂಬೈ ಷೇರುಪೇಟೆ 343 ಅಂಕಗಳ ಭಾರಿ ಏರಿಕೆ ದಾಖಲಿಸಿದೆ. ಇನ್ನು ರಾಷ್ಟ್ರೀಯ ಷೇರು ಸೂಚ್ಯಂಕ ಸಹ 99 ಅಂಕಗಳ ಏರಿಕೆ ಕಂಡು 12958ಕ್ಕೆ ತಲುಪಿದೆ.