ಮುಂಬೈ: ಕೊರೊನಾಗೆ ಚುಚ್ಚುಮದ್ದು ಕಂಡು ಹಿಡಿದ್ದಾರೆ ಎಂಬ ಸುದ್ದಿಯಿಂದ ಉತ್ತೇಜನಗೊಂಡಿರುವ ಮುಂಬೈ ಷೇರುಪೇಟೆ ಇಂದು 414 ಅಂಕಗಳ ಆರಂಭಿಕ ಏರಿಕೆ ದಾಖಲಿಸಿದೆ.
ಇದೇ ವೇಳೆ ಜಾಗತಿಕ ಷೇರುಪೇಟೆಗಳಲ್ಲೂ ಏರಿಕೆ ಕಂಡು ಬಂದಿರುವುದರಿಂದ ದಲಾಲ್ ಸ್ಟ್ರೀಟ್ ನಲ್ಲಿ ಉಲ್ಲಾಸದ ವಾತಾವರಣ ಕಂಡುಬಂದಿದೆ. ಪರಿಣಾಮ ಮುಂಬೈ ಷೇರು ಸೂಚ್ಯಂಕದಲ್ಲಿ ಭಾರಿ ಏರಿಕೆ ಕಂಡು ಬಂದಿದೆ.
ಇನ್ನು ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ ಸಹ 110 ಅಂಕಗಳ ಏರಿಕೆ ದಾಖಲಿಸಿದೆ. ಫೈನಾನ್ಸ್ ಮತ್ತು ಐಟಿ ಷೇರುಗಳು ಭಾರಿ ಲಾಭ ಗಳಿಕೆ ಮಾಡಿಕೊಂಡಿವೆ. ಉಳಿದಂತೆ ಹೆಚ್ಡಿಎಫ್ಸಿ, ಆರ್ಐಎಲ್, ಐಸಿಐಸಿಐ, ಇನ್ಫೋಸಿಸ್ ಷೇರುಗಳ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ.