ನವದೆಹಲಿ: ನಿಮ್ಮಗಡ್ಡ ರಮೇಶ್ ಕುಮಾರ್ ವಿಚಾರ ಸಂಬಂಧ ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯೆಟ್ ದೂರು ದಾಖಲಾಗಿದೆ. ಆಂಧ್ರ ಹೈಕೋರ್ಟ್ ನೀಡಿರುವ ಆದೇಶಕ್ಕೆ ತಡೆ ನೀಡದಂತೆ ವಕೀಲರಾದ ನರ್ರಾ ಶ್ರೀನಿವಾಸ್ ರಾವ್ ಕೇವಿಯೆಟ್ ಸಲ್ಲಿಸಿದ್ದಾರೆ.
ರಾಜ್ಯ ಚುನಾವಣಾ ಆಯುಕ್ತರ ನೇಮಕ ವಿಚಾರದಲ್ಲಿ ನಿಯಮಗಳನ್ನು ಬದಲಾಯಿಸಲು ಆಂಧ್ರ ಸರ್ಕಾರ ಜಾರಿ ಮಾಡಿದ್ದ ಸುಗ್ರೀವಾಜ್ಞೆಯನ್ನು ಅಲ್ಲಿನ ಹೈಕೋರ್ಟ್ ನಿನ್ನೆಯಷ್ಟೇ ರದ್ದು ಮಾಡಿತ್ತು.
ಎಸ್‌ಇಸಿ ರಮೇಶ್ ಕುಮಾರ್, ಕೋವಿಡ್-19 ಹಿನ್ನೆಲೆಯಲ್ಲಿ ಆಂಧ್ರ ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಂದೂಡಿಕೆ ಮಾಡಿದ್ದರು. ಮಾರ್ಚ್ 14ರಂದು ಈ ಸಂಬಂಧ ಸಿಎಂ ಜನಗ್ ಮೋಹನ್ ರೆಡ್ಡಿ, ರಾಜ್ಯಪಾಲರನ್ನು ಭೇಟಿ ಮಾಡಿ ದೂರು ನೀಡಿದ್ದರು. ಟಿಡಿಪಿ ಪರ ಚುನಾವಣಾ ಆಯುಕ್ತರು ಕೆಲಸ ಮಾಡ್ತಿದ್ದಾರೆ ಎಂದು ಆಡಳಿತದಲ್ಲಿರುವ ವೈಎಸ್‌ಆರ್ ಕಾಂಗ್ರೆಸ್ ಆರೋಪ ಮಾಡಿತ್ತು.