ಮೆಚುಕ: ಸೋಮವಾರ ನಾಪತ್ತೆಯಾದ ವಾಯುಪಡೆಯ AN-32 ವಿಮಾನದ ಸುಳಿವು ಇನ್ನೂ ಸಿಕ್ಕಿಲ್ಲ. ಅರುಣಾಚಲಪ್ರದೇಶದ ಮೆಚುಕದ ಬೆಟ್ಟ-ಗುಡ್ಡ ಪ್ರದೇಶದಲ್ಲಿ ಕಾರ್ಯಾಚರಣೆ ಮುಂದುವರೆದಿದ್ದು, ಪ್ರತಿಕೂಲ ವಾತಾವರಣದಿಂದ ಶೋಧಕರು ತೊಂದರೆ ಅನುಭವಿಸುವಂತಾಗಿದೆ.
Sukhoi-30, C-130J, ಎರಡು Mi-17 ಹಾಗೂ ಎರಡು ALH ಹೆಲಿಕಾಪ್ಟರ್ಗಳು ನಿರಂತರ ಕಾರ್ಯಾಚರಣೆಯಲ್ಲಿ ತೊಡಗಿವೆ. ನೌಕಾಪಡೆಯ P-8I ವಿಮಾನ ಹಾಗೂ ಇಸ್ರೋ ಸಹ ಕಾರ್ಯಾಚರಣೆಯಲ್ಲಿ ನಿರಂತರವಾಗಿ ಭಾಗಿಯಾಗಿವೆ. ಶೋಧ ಕಾರ್ಯ ಪ್ರದೇಶದಲ್ಲಿ ಮಳೆಯಾಗುತ್ತಿರುವುದರಿಂದ ಕಾರ್ಯಾಚರಣೆಗೆ ಅಡ್ಡಿಯಾಗಿದೆ.
ಘಟನೆಯಲ್ಲಿ ನಾಪತ್ತೆಯಾದವರ ಕುಟುಂಬದವರೊಂದಿಗೆ ವಾಯುಪಡೆ ನಿರಂತರ ಸಂಪರ್ಕದಲ್ಲಿದೆ. ದೊರೆತ ಮಾಹಿತಿ ಅವರಿಗೆ ರವಾನಿಸುತ್ತಿದೆ ಎಂದು ತಿಳಿದುಬಂದಿದೆ. ಭಾರತೀಯ ಸೇನೆ, ಇಂಡೋ-ಟಿಬೇಟಿಯನ್ ಪೊಲೀಸ್ ಹಾಗೂ ಸ್ಥಳೀಯ ಆಡಳಿತ ಹಗಲಿರುಳೆನ್ನದೆ ಕಾರ್ಯಾಚರಣೆ ನಡೆಸುತ್ತಲೇ ಇವೆ.
ಸೋಮವಾರ ಅಸ್ಸೋನ ಜೊಹ್ರಾತ್ನಿಂದ 12:25ಕ್ಕೆ ಹೊರಟ ವಿಮಾನ 1 ಗಂಟೆಗೆ ಸಂಪರ್ಕ ಕಳೆದುಕೊಂಡು ನಾಪತ್ತೆಯಾಗಿದೆ.