ETV Bharat / bharat

ಮಧ್ಯಪ್ರದೇಶ ರೆಬೆಲ್ ಶಾಸಕರು ತಂಗಿರುವ ರೆಸಾರ್ಟ್​ನಲ್ಲಿ ಹೈಡ್ರಾಮ: ಕೈ ನಾಯಕ, ಪೊಲೀಸ್ ಸಿಬ್ಬಂದಿ ನಡುವೆ ಗಲಾಟೆ

author img

By

Published : Mar 12, 2020, 5:11 PM IST

Updated : Mar 12, 2020, 5:57 PM IST

ಬೆಂಗಳೂರಿನ ಖಾಸಗಿ ರೆಸಾರ್ಟ್​ನಲ್ಲಿರುವ ಮಧ್ಯಪ್ರದೇಶ ಕಾಂಗ್ರೆಸ್ ರೆಬೆಲ್ ಶಾಸಕರನ್ನು ಭೇಟಿ ಮಾಡಲು ಬಂದಿದ್ದ ಕಾಂಗ್ರೆಸ್ ನಾಯಕ ಜೀತು ಪಟ್ವಾರಿ ಮತ್ತು ಪೊಲೀಸ್ ಸಿಬ್ಬಂದಿ ನಡುವೆ ಗಲಾಟೆ ನಡೆದಿದೆ.

Scuffle between Congress leader and a police personnel,ಕೈ ನಾಯಕ ಪೊಲೀಸ್ ಸಿಬ್ಬಂದಿ ನಡುವೆ ಗಲಾಟೆ
ಕೈ ನಾಯಕ ಪೊಲೀಸ್ ಸಿಬ್ಬಂದಿ ನಡುವೆ ಗಲಾಟೆ

ಬೆಂಗಳೂರು: ಮಧ್ಯಪ್ರದೇಶದ ರೆಬೆಲ್ ಶಾಸಕರನ್ನು ಭೇಟಿಯಾಗಲು ಬಂದಿದ್ದ ಅಲ್ಲಿನ ಕಾಂಗ್ರೆಸ್ ಮುಖಂಡ ಜೀತು ಪಟ್ವಾರಿ ಮತ್ತು ಪೊಲೀಸ್ ಸಿಬ್ಬಂದಿ ನಡುವೆ ಗಲಾಟೆ ನಡೆದಿದೆ.

ಕಾಂಗ್ರೆಸ್ ಮುಖಂಡ ಜೀತು ಪಟ್ವಾರಿ ಮತ್ತು ಪೊಲೀಸ್ ಸಿಬ್ಬಂದಿ ನಡುವೆ ಗಲಾಟೆ

ಮಧ್ಯಪ್ರದೇಶದ ಕಾಂಗ್ರೆಸ್ ಬಂಡಾಯ ಶಾಸಕರು ದೇವನಹಳ್ಳಿಯ ಪ್ರೆಸ್ಟೀಜ್​ ಗಾಲ್ಫ್ ಶೈರ್ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಬಂಡಾಯ ಶಾಸಕರನ್ನ ಭೇಟಿ ಮಾಡಲು ಸಚಿವ ಜೀತು ಪಟ್ವಾರಿ ಬೆಂಗಳೂರು ಉತ್ತರ ತಾಲೂಕಿನ ಸಾದಹಳ್ಳಿ ಬಳಿಯ ಖಾಸಗಿ ರೆಸಾರ್ಟ್​ಗೆ ಬಂದಿದ್ದರು.

  • Madhya Pradesh Congress: Two of our minister Jitu Patwari & Lakhan Singh had gone to Bengaluru. They were assaulted, we have info that our ministers have been arrested. If the police don't take action & release our ministers & MLAs, we will have to take it to the court. #Bhopal pic.twitter.com/QM1D4KaToI

    — ANI (@ANI) March 12, 2020 " class="align-text-top noRightClick twitterSection" data=" ">

ಸ್ಥಳದಲ್ಲಿಯೇ ಇದ್ದ ಚಿಕ್ಕಜಾಲ ಪೊಲೀಸರು, ಜೀತು ಪಟ್ವಾರಿ ಅವರನ್ನು ತಡೆಯಲು ಮುಂದ್ದಾಗಿದ್ದಾರೆ. ಈ ವೇಳೆ ಜೀತು ಪಾಟ್ವರಿ ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಚಿಕ್ಕಜಾಲ ಪೊಲೀಸರು, ಪಟ್ವಾರಿ ಸೇರಿದಂತೆ 10 ಕಾಂಗ್ರೆಸ್ ಮುಖಂಡರನ್ನ ಬಂಧಿಸಿ ಠಾಣೆಗೆ ಕರೆದುಕೊಂಡು ಹೋಗಿ ನಂತರ ಬಿಡುಗಡೆ ಮಾಡಿದ್ದಾರೆ. ಸದ್ಯ ಜೀತು ಪಟ್ವಾರಿ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಿವಾಸಕ್ಕೆ ತೆರಳಿದ್ದಾರೆ.

ಘಟನೆ ಬಗ್ಗೆ ಸುದ್ದಿಗೋಷ್ಠಿ ನಡೆಸಿರುವ ಮಧ್ಯಪ್ರದೇಶ ಕಾಂಗ್ರೆಸ್ ನಾಯಕರು, ನಮ್ಮ ಇಬ್ಬರು ಸಚಿವರಾದ ಜೀತು ಪಟ್ವಾರಿ ಮತ್ತು ಲಖನ್ ಸಿಂಗ್ ಬೆಂಗಳೂರಿಗೆ ಹೋಗಿದ್ದರು. ಅವರ ಮೇಲೆ ಹಲ್ಲೆ ನಡೆಸಿ ಬಂಧಿಸಲಾಗಿದೆ ಎಂಬ ಮಾಹಿತಿ ನಮ್ಮಲ್ಲಿದೆ. ಪೊಲೀಸರು ಸರಿಯಾದ ಕ್ರಮ ಕೈಗೊಂಡು ನಮ್ಮ ಮಂತ್ರಿಗಳು ಮತ್ತು ಶಾಸಕರನ್ನು ಬಿಡುಗಡೆ ಮಾಡದಿದ್ದರೆ, ನಾವು ಕೋರ್ಟ್ ಮೊರೆ ಹೋಗುತ್ತೇವೆ ಎಂದಿದ್ದಾರೆ.

Last Updated : Mar 12, 2020, 5:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.