ETV Bharat / bharat

ಸೋಮವಾರದಿಂದ 9-12ನೇ ತರಗತಿ ಶಾಲೆ ಆರಂಭ: ಪಂಜಾಬ್​ ಸರ್ಕಾರದಿಂದ ನಿರ್ಧಾರ!

ಸೋಮವಾರದಿಂದ ಪಂಜಾಬ್​​ನಲ್ಲಿ 9 ರಿಂದ 12ನೇ ತರಗತಿ ಶಾಲಾ - ಕಾಲೇಜು​ ಆರಂಭಗೊಳ್ಳಲಿದ್ದು, ಅದಕ್ಕಾಗಿ ಪಂಜಾಬ್​ ಸರ್ಕಾರ ಮಹತ್ವದ ಮಾರ್ಗಸೂಚಿ ಹೊರಡಿಸಿದೆ.

Schools in Punjab
Schools in Punjab
author img

By

Published : Oct 15, 2020, 8:46 PM IST

ಚಂಡೀಗಢ: ದೇಶಾದ್ಯಂತ ಕೊರೊನಾ ವೈರಸ್​ ಹಾವಳಿ ಜೋರಾಗಿರುವ ಕಾರಣ ಶಾಲಾ - ಕಾಲೇಜು​ ಬಂದ್​ ಆಗಿವೆ. ಆದರೆ, ಪಂಜಾಬ್​​ನಲ್ಲಿ ಬರುವ ಸೋಮವಾರದಿಂದ 9ರಿಂದ 12ನೇ ತರಗತಿ ಶಾಲೆ ಆರಂಭಿಸಲು ನಿರ್ಧರಿಸಲಾಗಿದೆ.

ಕಂಟೇನ್ಮೆಂಟ್​​ ವಲಯ ಹೊರತುಪಡಿಸಿ, ಸೋಮವಾರದಿಂದ ರಾಜ್ಯದಲ್ಲಿ ಶಾಲಾ - ಕಾಲೇಜ್​ ಓಪನ್​ ಆಗಲಿದ್ದು, ಅದಕ್ಕೆ ಸಂಬಂಧಿಸಿದಂತೆ ಅಲ್ಲಿನ ಸರ್ಕಾರ ಪ್ರಕಟಣೆ ಹೊರಡಿಸಿದೆ. ಇದೇ ವಿಷಯವಾಗಿ ಮಾತನಾಡಿರುವ ಶಿಕ್ಷಣ ಸಚಿವ ವಿಜಯ್​​ ಇಂದಿರಾ ಸಿಗ್ಲೆ, ಈಗಾಗಲೇ ಕೇಂದ್ರ ಗೃಹ ಸಚಿವಾಲಯ ಶಾಲೆ ಓಪನ್​ ಮಾಡುವುದಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿ ಹೊರಡಿಸಿದೆ. ಆ ಎಲ್ಲ ಮಾರ್ಗಸೂಚಿ ಫಾಲೋ ಮಾಡಿ ನಾವು ಶಾಲಾ - ಕಾಲೇಜ್​ ಓಪನ್​ ಮಾಡ್ತಿದ್ದೇವೆ ಎಂದಿದ್ದಾರೆ.

ಶಾಲೆ ಓಪನ್​ ಆಗುತ್ತಿದ್ದಂತೆ ಎಲ್ಲ ಸುರಕ್ಷತಾ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದು, ದೈಹಿಕ ಶಿಕ್ಷಣಕ್ಕೆ ಹೆಚ್ಚಿನ ಆಧ್ಯತೆ ನೀಡಲಾಗುವುದು ಎಂದಿದ್ದಾರೆ. ಕಳೆದ ಮಾರ್ಚ್​ ತಿಂಗಳಿಂದಲೂ ದೇಶದಲ್ಲಿ ಶಾಲಾ - ಕಾಲೇಜ್​ ಬಂದ್​ ಆಗಿವೆ. ಇನ್ನು ಕರ್ನಾಟಕದಲ್ಲಿ ವಿದ್ಯಾಗಮ ಯೋಜನೆ ಜಾರಿತರಲಾಗಿತ್ತು. ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿರುವ ಕಾರಣ ಬಂದ್​ ಮಾಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.