ETV Bharat / bharat

ಸುಪ್ರೀಂಕೋರ್ಟ್​ನಲ್ಲಿ ಶೀಘ್ರವೇ ಜಾರಿಗೆ ಬರಲಿದೆ ಇ-ಫೈಲಿಂಗ್​ ವ್ಯವಸ್ಥೆ - ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್

ಇಂಟರ್ನೆಟ್​ ಮೂಲಕ ದಾಖಲೆಗಳನ್ನು ಸಲ್ಲಿಸಬಹುದಾದ ಇ-ಫೈಲಿಂಗ್​ ವ್ಯವಸ್ಥೆಯನ್ನು ಸುಪ್ರೀಂಕೋರ್ಟ್​ ಶೀಘ್ರ ಜಾರಿಗೆ ತರಲಿದೆ ಎಂದು ಸುಪ್ರೀಂ ಕೋರ್ಟ್​ನ ಇ-ಕಮಿಟಿ ಮುಖ್ಯಸ್ಥರಾಗಿರುವ ನ್ಯಾ. ಚಂದ್ರಚೂಡ್ ತಿಳಿಸಿದ್ದಾರೆ.​

SC to have e-filing of documents
SC to have e-filing of documents
author img

By

Published : Apr 13, 2020, 4:53 PM IST

ಹೊಸದಿಲ್ಲಿ: ಆನ್ಲೈನ್ ಮೂಲಕ ದಿನದ 24 ಗಂಟೆಯೂ ದಾಖಲೆಗಳನ್ನು ಸಲ್ಲಿಸಬಹುದಾದ ಆಧುನಿಕ ಇ-ಫೈಲಿಂಗ್​ ವ್ಯವಸ್ಥೆಯನ್ನು ಸುಪ್ರೀಂಕೋರ್ಟ್ ಶೀಘ್ರ ಅಳವಡಿಸಿಕೊಳ್ಳಲಿದೆ. ಇ-ಫೈಲಿಂಗ್ ಸಾಫ್ಟವೇರ್​ನ ಅಂತಿಮ ಹಂತದ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ ಎಂದು ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನ್ಯಾಯವಾದಿಗಳೊಂದಿಗೆ ನಡೆಸಿದ ವಿಡಿಯೋ ಸಂವಾದದಲ್ಲಿ ತಿಳಿಸಿದರು.

ಸುಪ್ರೀಂಕೋರ್ಟ್ ಬಾರ್​ ಅಸೋಸಿಯೇಷನ್ ಹಾಗೂ ಸುಪ್ರೀಂಕೋರ್ಟ್​ ಅಡ್ವೊಕೇಟ್ಸ್-ಆನ್-ರೆಕಾರ್ಡ್ ಅಸೋಸಿಯೇಷನ್ ಸದಸ್ಯರು ಇಷ್ಟರಲ್ಲೇ ಸಾಫ್ಟ್‌ವೇರ್ ಪರೀಕ್ಷೆ ಮಾಡುವ ಅವಕಾಶ ಪಡೆಯಲಿದ್ದಾರೆ. ಆರಂಭಿಕ ತಾಂತ್ರಿಕ ಸಮಸ್ಯೆಗಳನ್ನು ನಿವಾರಿಸಲಾಗಿದ್ದು, ವಿಡಿಯೋ ಕಾನ್ಫರೆನ್ಸಿಂಗ್​ ಅಡೆತಡೆಯಿಲ್ಲದೇ ನಡೆಯುತ್ತಿದೆ ಎಂದು ಸುಪ್ರೀಂಕೋರ್ಟ್​ನ ಇ-ಕಮಿಟಿ ಮುಖ್ಯಸ್ಥರೂ ಆಗಿರುವ ಚಂದ್ರಚೂಡ್​ ಹೇಳಿದರು.

ಲಾಕ್​ಡೌನ್​ನ ಸಕಾರಾತ್ಮಕ ಪರಿಣಾಮಗಳ ಬಗ್ಗೆ ಇದೇ ಸಂದರ್ಭದಲ್ಲಿ ಮೆಚ್ಚುಗೆಯ ಮಾತುಗಳನ್ನಾಡಿದ ಅವರು, ದೆಹಲಿ ಆಕಾಶದಲ್ಲಿ ಮತ್ತೆ ರಾತ್ರಿ ನಕ್ಷತ್ರಗಳನ್ನು ನೋಡಬಹುದಾಗಿದ್ದು, ನನ್ನ ಮನೆ ಮುಂದಿನ ಉದ್ಯಾನದಲ್ಲಿ ನವಿಲುಗಳ ನರ್ತನವೂ ಕಾಣಿಸುತ್ತಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.