ನವದೆಹಲಿ: ಕಳೆದ ಕೆಲ ದಿನಗಳಿಂದ ರಾಷ್ಟ್ರ ರಾಜಧಾನಿ ನವದೆಹಲಿಯ ವಾತಾವರಣ ಮತ್ತಷ್ಟು ವಿಷಮಗೊಂಡಿದೆ. ಹೆಚ್ಚುತ್ತಿರುವ ವಾಯು ಮಾಲಿನ್ಯದಿಂದ ಜನ ಮನೆಯಿಂದ ಹೊರ ಬಾರದ ಪರಿಸ್ಥಿತಿ ಇದೆ.
ಈ ನಡುವೆ ವಾಯು ಮಾಲಿನ್ಯ ಕಡಿತ ಮಾಡುವ ದೃಷ್ಟಿಯಿಂದ ಸರಿ- ಬೆಸ(ಒಡ್ -ಈವನ್) ಯೋಜನೆ ಜಾರಿಗೊಳಿಸಿದೆ. ಈ ಬಗ್ಗೆ ಅಂದರೆ ಯೋಜನೆ ಜಾರಿಯಿಂದ ಎಷ್ಟು ಪ್ರಮಾಣದಲ್ಲಿ ಪರಿಸರ ಮಾಲಿನ್ಯ ಕಡಿಮೆ ಆಗಿದೆ ಎಂಬುದನ್ನ ದಾಖಲೆ ಸಮೇತ ಶುಕ್ರವಾರದ ಒಳಗೆ ವರದಿ ಸಲ್ಲಿಸುವಂತೆ ದೆಹಲಿ ರಾಜ್ಯ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.
-
Supreme Court orders that no power cuts should take place in Delhi, Punjab, Haryana, and Uttar Pradesh to ensure that no diesel generators are used. High powered committee of states to meet today and the report to be submitted on November 6 https://t.co/QMw4fV3tvr
— ANI (@ANI) November 4, 2019 " class="align-text-top noRightClick twitterSection" data="
">Supreme Court orders that no power cuts should take place in Delhi, Punjab, Haryana, and Uttar Pradesh to ensure that no diesel generators are used. High powered committee of states to meet today and the report to be submitted on November 6 https://t.co/QMw4fV3tvr
— ANI (@ANI) November 4, 2019Supreme Court orders that no power cuts should take place in Delhi, Punjab, Haryana, and Uttar Pradesh to ensure that no diesel generators are used. High powered committee of states to meet today and the report to be submitted on November 6 https://t.co/QMw4fV3tvr
— ANI (@ANI) November 4, 2019
ಇನ್ನು ಎನ್ಆರ್ಸಿಯಲ್ಲಿ ಕಟ್ಟಡ ನಿರ್ಮಾಣ ಹಾಗೂ ಕಟ್ಟಡಗಳನ್ನು ತೆರವುಗೊಳಿಸುವ ಕೆಲಸಗಳನ್ನ ಕೋರ್ಟ್ ನಿರ್ದೇಶನ ನೀಡುವವರೆಗೂ ಸ್ಥಗಿತಗೊಳಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಇಂತಹ ಚಟುವಟಿಕೆಗಳೇನಾದರೂ ಕಂಡು ಬಂದರೆ ಅಂತಹವರ ಮೇಲೆ 1 ಲಕ್ಷ ರೂ. ವರೆಗೂ ದಂಡ ವಿಧಿಸಲಾಗುವುದು ಎಂದು ಆದೇಶ ಹೊರಡಿಸಿದೆ.
ಇನ್ನು ಯಾರಾದರೂ ಕೊಯ್ಲು ಬೆಳೆಗೆ ಬೆಂಕಿ ಇಟ್ಟು ಇನ್ನಷ್ಟು ವಾತಾವರಣ ಕಲುಷಿತಗೊಳಿಸಿದರೆ ಅವರನ್ನ ನ್ಯಾಯಾಂಗ ನಿಂದನೆ ಕೇಸ್ ನಡಿ ವಿಚಾರಣೆಗೆ ಒಳಪಡಿಸಲಾಗುವುದು ಎಂದು ಸುಪ್ರೀಂಕೋರ್ಟ್ ಗ್ರಾಮ ಪಂಚಾಯ್ತಿ ಸರ್ಪಂಚ್ಗಳಿಗೆ ಸೂಚನೆ ನೀಡುವಂತೆ ರಾಜ್ಯ ಮುಖ್ಯ ಕಾರ್ಯದರ್ಶಿಗಳ ಮೂಲಕ ಮಾಹಿತಿ ರವಾನಿಸಿದೆ.
ಮತ್ತೊಂದು ಕಡೆ ಉತ್ತರಪ್ರದೇಶ, ಪಂಜಾಬ್, ಹರಿಯಾಣ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಸುಪ್ರೀಂಕೋರ್ಟ್ ಎದುರು ಹಾಜರಾಗಿ ವಿವರಣೆ ನೀಡುವಂತೆ ಸಮನ್ಸ್ ಜಾರಿಗೊಳಿಸಿದೆ.