ETV Bharat / bharat

ಹಣಕಾಸು ಮಸೂದೆ ಉನ್ನತ ಪೀಠಕ್ಕೆ ವರ್ಗ..! ಸೆಕ್ಷನ್ 184 ತಿದ್ದುಪಡಿಗೆ ಸೂಚನೆ

2017ರ ಹಣಕಾಸು ಕಾಯ್ದೆಯ ಸೆಕ್ಷನ್ 184ರ ಪ್ರಕಾರ ನ್ಯಾಯಾಧಿಕರಣ ಅಧ್ಯಕ್ಷ ಸ್ಥಾನಕ್ಕೆ ಮತ್ತು ಸದಸ್ಯರಿಗೆ ಅರ್ಹತೆ, ನೇಮಕಾತಿ, ಅಧಿಕಾರಾವಧಿ, ಸಂಬಳ ಮತ್ತು ಭತ್ಯೆ, ರಾಜೀನಾಮೆ, ಕೆಲಸದಿಂದ ತೆಗೆದು ಹಾಕುವ ಮತ್ತು ಇತರ ಷರತ್ತುಗಳನ್ನು ಕೇಂದ್ರ ಸರ್ಕಾರ ರೂಪಿಸಬಹುದಾಗಿದೆ.

ಸುಪ್ರೀಂಕೋರ್ಟ್
author img

By

Published : Nov 13, 2019, 5:43 PM IST

ನವದೆಹಲಿ: 2017ರ ಹಣಕಾಸು ಕಾಯ್ದೆಯ ಸಿಂಧುತ್ವದ ಬಗ್ಗೆ ಬಂದ ಪ್ರಶ್ನೆಯ ವೇಳೆ ಸುಪ್ರೀಂಕೋರ್ಟ್​ ಈ ವಿಚಾರವನ್ನು ಉನ್ನತ ಪೀಠ ವಿಚಾರಣೆಗೆ ಒಪ್ಪಿಸಿ ಆದೇಶ ನೀಡಿದೆ.

ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಸುಪ್ರೀಂನ ಸಾಂವಿಧಾನಿಕ ಪೀಠ ಸೆಕ್ಷನ್ 184ರ ಸಿಂಧುತ್ವವನ್ನು ಎತ್ತಿಹಿಡಿದು, ರಚಿಸಲಾಗಿದ್ದ ಕೆಲ ನಿಯಮಾವಳಿಗಳ ಚೌಕಟ್ಟನ್ನು ತೆಗೆದು ಹಾಕಿದೆ.

ಸುಪ್ರೀಂಕೋರ್ಟ್​ ನ್ಯಾಯಮಂಡಳಿ, ಮೇಲ್ಮನವಿ ನ್ಯಾಯಾಧಿಕರಣ ಮತ್ತು ಇತರ ಅಧಿಕಾರಿಗಳು(ಅರ್ಹತೆ, ಅನುಭವ ಮತ್ತು ಸದಸ್ಯರ ಸೇವೆಯ ಇತರ ಷರತ್ತುಗಳು) ನಿಯಮಗಳನ್ನು 2017ರ ಹಣಕಾಸು ಕಾಯ್ದೆಯ ಸೆಕ್ಷನ್ 184ರ ಅಡಿಯಲ್ಲಿ ರಚಿಸಲಾಗಿತ್ತು. ಸದ್ಯ ಇವೆಲ್ಲವನ್ನು ಸರ್ವೋಚ್ಛ ನ್ಯಾಯಾಲಯ ತೆಗೆದು ಹಾಕಿದೆ. ಇದೇ ವೇಳೆ ಹೊಸ ನಿಯಮಗಳನ್ನು ರೂಪಿಸುವಂತೆ ಸರ್ಕಾರಕ್ಕೆ ಸೂಚಿಸಿದೆ.

2017ರ ಹಣಕಾಸು ಕಾಯ್ದೆಯ ಬಗ್ಗೆ ಕಾನೂನು ಸಚಿವಾಲಯ ಫಲಶೃತಿ ಅಧ್ಯಯನ ನಡೆಸಿ ವರದಿಯನ್ನು ಸುಪ್ರೀಂಕೋರ್ಟ್​ಗೆ ಸಲ್ಲಿಸುವಂತೆ ಗೊಗೊಯಿ ನೇತೃತ್ವದ ಪೀಠ ಹೇಳಿದೆ.

2017ರ ಹಣಕಾಸು ಕಾಯ್ದೆಯ ಸೆಕ್ಷನ್ 184ರ ಪ್ರಕಾರ ನ್ಯಾಯಾಧಿಕರಣ ಅಧ್ಯಕ್ಷ ಸ್ಥಾನಕ್ಕೆ ಮತ್ತು ಸದಸ್ಯರಿಗೆ ಅರ್ಹತೆ, ನೇಮಕಾತಿ, ಅಧಿಕಾರಾವಧಿ, ಸಂಬಳ ಮತ್ತು ಭತ್ಯೆ, ರಾಜೀನಾಮೆ, ಕೆಲಸದಿಂದ ತೆಗೆದು ಹಾಕುವ ಮತ್ತು ಇತರ ಷರತ್ತುಗಳನ್ನು ಕೇಂದ್ರ ಸರ್ಕಾರ ರೂಪಿಸಬಹುದಾಗಿದೆ.

ರೋಜರ್ ಮ್ಯಾಥ್ಯೂ Vs ಸೌತ್ ಇಂಡಿಯನ್ ಬ್ಯಾಂಕ್ ಲಿ. ಪ್ರಕರಣದಲ್ಲಿ 2017ರ ಹಣಕಾಸು ಕಾಯ್ದೆಯ ಸಾಂವಿಧಾನಿಕ ಸಿಂಧುತ್ವದ ಬಗ್ಗೆ ಪ್ರಶ್ನೆ ಎದುರಾಗಿತ್ತು. ಇದು ಸಂಸತ್ತಿನಲ್ಲಿ ಹಣಕಾಸು ಮಸೂದೆಯ ಹೆಸರಿನಲ್ಲಿ ಅಂಗೀಕಾರವಾಗಿತ್ತು.

ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಪಂಚಸದಸ್ಯ ಪೀಠದಲ್ಲಿ ಜಸ್ಟೀಸ್ ಎನ್​.ವಿ.ರಮಣ, ಡಿ.ವೈ.ಚಂದ್ರಚೂಡ್, ದೀಪಕ್ ಗುಪ್ತಾ, ಸಂಜೀವ್ ಖನ್ನಾ ಸದಸ್ಯರಾಗಿದ್ದರು. ಈ ಪೀಠ ಏ.2ರಂದು ತೀರ್ಪನ್ನು ಕಾಯ್ದಿರಿಸಿತ್ತು.

ಹಣಕಾಸು ಮಸೂದೆ ಎಂದರೇನು..?

ಸಂವಿಧಾನದ 110 (1) ನೇ ವಿಧಿಯ ಅನ್ವಯ, ಯಾವುದೇ ತೆರಿಗೆಯನ್ನು ಹೇರಿಕೆ, ರದ್ದತಿ, ಉಪಶಮನ ಅಥವಾ ನಿಯಂತ್ರಣ ಮತ್ತು ಹಣದ ಪಾವತಿ ಅಥವಾ ಹಿಂತೆಗೆದುಕೊಳ್ಳುವುದು ಮುಂತಾದ ವಿಷಯಗಳನ್ನು ಮಾತ್ರ ನಿರ್ವಹಿಸುವ ಮಸೂದೆಯನ್ನು ಹಣ ಮಸೂದೆ ಎಂದು ಪರಿಗಣಿಸಲಾಗುತ್ತದೆ.

Intro:Body:

ನವದೆಹಲಿ: 2017ರ ಹಣಕಾಸು ಕಾಯ್ದೆಯ ಸಿಂಧುತ್ವದ ಬಗ್ಗೆ ಬಂದ ಪ್ರಶ್ನೆಯ ವೇಳೆ ಸುಪ್ರೀಂಕೋರ್ಟ್​ ಈ ವಿಚಾರವನ್ನು ಉನ್ನತ ಪೀಠ ವಿಚಾರಣೆರ ನಡೆಸಲಿದೆ ಎಂದು ಹೇಳಿದೆ.

ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಸುಪ್ರೀಂನ ಸಾಂವಿಧಾನಿಕ ಪೀಠ ಸೆಕ್ಷನ್ 184ರ ಸಿಂಧುತ್ವವನ್ನು ಎತ್ತಿಹಿಡಿದು, ರಚಿಸಲಾಗಿದ್ದ ಕೆಲ ನಿಯಮಾವಳಿಗಳ ಚೌಕಟ್ಟನ್ನು ತೆಗೆದು ಹಾಕಿದೆ.

ಸುಪ್ರೀಂಕೋರ್ಟ್​ ನ್ಯಾಯಮಂಡಳಿ, ಮೇಲ್ಮನವಿ ನ್ಯಾಯಾಧಿಕರಣ ಮತ್ತು ಇತರ ಅಧಿಕಾರಿಗಳು(ಅರ್ಹತೆ, ಅನುಭವ ಮತ್ತು ಸದಸ್ಯರ ಸೇವೆಯ ಇತರ ಷರತ್ತುಗಳು) ನಿಯಮಗಳನ್ನು 2017ರ ಹಣಕಾಸು ಕಾಯ್ದೆಯ ಸೆಕ್ಷನ್ 184ರ ಅಡಿಯಲ್ಲಿ ರಚಿಸಲಾಗಿತ್ತು. ಸದ್ಯ ಇವೆಲ್ಲವನ್ನು ಸರ್ವೋಚ್ಛ ನ್ಯಾಯಾಲಯ ತೆಗೆದು ಹಾಕಿದೆ. ಇದೇ ವೇಳೆ ಹೊಸ ನಿಯಮಗಳನ್ನು ರೂಪಿಸುವಂತೆ ಸರ್ಕಾರಕ್ಕೆ ಸೂಚಿಸಿದೆ.

2017ರ ಹಣಕಾಸು ಕಾಯ್ದೆಯ ಬಗ್ಗೆ ಕಾನೂನು ಸಚಿವಾಲಯ ಫಲಶೃತಿ ಅಧ್ಯಯನ ನಡೆಸಿ ವರದಿಯನ್ನು ಸುಪ್ರೀಂಕೋರ್ಟ್​ಗೆ ಸಲ್ಲಿಸುವಂತೆ ಗೊಗೊಯಿ ನೇತೃತ್ವದ ಪೀಠ ಹೇಳಿದೆ.

2017ರ ಹಣಕಾಸು ಕಾಯ್ದೆಯ ಸೆಕ್ಷನ್ 184ರ ಪ್ರಕಾರ ನ್ಯಾಯಾಧಿಕರಣ ಅಧ್ಯಕ್ಷ ಸ್ಥಾನಕ್ಕೆ ಮತ್ತು ಸದಸ್ಯರಿಗೆ ಅರ್ಹತೆ, ನೇಮಕಾತಿ, ಅಧಿಕಾರಾವಧಿ, ಸಂಬಳ ಮತ್ತು ಭತ್ಯೆ, ರಾಜೀನಾಮೆ, ಕೆಲಸದಿಂದ ತೆಗೆದು ಹಾಕುವ ಮತ್ತು ಇತರ ಷರತ್ತುಗಳನ್ನು ಕೇಂದ್ರ ಸರ್ಕಾರ ರೂಪಿಸಬಹುದಾಗಿದೆ.

ರೋಜರ್ ಮ್ಯಾಥ್ಯೂ Vs  ಸೌತ್ ಇಂಡಿಯನ್ ಬ್ಯಾಂಕ್ ಲಿ. ಪ್ರಕರಣದಲ್ಲಿ 2017ರ ಹಣಕಾಸು ಕಾಯ್ದೆಯ ಸಾಂವಿಧಾನಿಕ ಸಿಂಧುತ್ವದ ಬಗ್ಗೆ ಪ್ರಶ್ನೆ ಎದುರಾಗಿತ್ತು. ಇದು ಸಂಸತ್ತಿನಲ್ಲಿ ಹಣಕಾಸು ಮಸೂದೆಯ ಹೆಸರಿನಲ್ಲಿ ಅಂಗೀಕಾರವಾಗಿತ್ತು.

ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಪಂಚಸದಸ್ಯ ಪೀಠದಲ್ಲಿ ಜಸ್ಟೀಸ್ ಎನ್​.ವಿ.ರಮಣ, ಡಿ.ವೈ.ಚಂದ್ರಚೂಡ್, ದೀಪಕ್ ಗುಪ್ತಾ, ಸಂಜೀವ್ ಖನ್ನಾ ಸದಸ್ಯರಾಗಿದ್ದರು. ಈ ಪೀಠ ಏ.2ರಂದು ತೀರ್ಪನ್ನು ಕಾಯ್ದಿರಿಸಿತ್ತು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.