ETV Bharat / bharat

ಮಾನಸಿಕ ಅಸ್ವಸ್ಥರಿಗೆ ಚಿಕಿತ್ಸೆ ಮುಂದುವರಿಕೆ: ಕೇಂದ್ರ, ಐಆರ್‌ಡಿಎಗೆ ಸುಪ್ರೀಂಕೋರ್ಟ್ ನೋಟಿಸ್ - ಐಆರ್‌ಡಿಎ

ಮಾನಸಿಕ ಅಸ್ವಸ್ಥರಿಗೆ ವೈದ್ಯಕೀಯ ಚಿಕಿತ್ಸೆ ಮುಂದುವರಿಸಲು ವಿಮಾ ಸೌಲಭ್ಯ ವಿಸ್ತರಿಸುವ ಕುರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್‌ ಇಂದು ನಡೆಸಿತು. ಈ ಸಂಬಂಧ ಕೇಂದ್ರ ಹಾಗೂ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎ)ಕ್ಕೆ ನೋಟಿಸ್‌ ನೀಡಿದೆ.

SC notice to Centre, IRDA on plea to extend medical insurance for treatment of mental illness
ಮಾನಸಿ ಅಸ್ವಸ್ಥರಿಗೆ ಚಿಕಿತ್ಸೆ ಮುಂದುವರಿಕೆ; ಕೇಂದ್ರ, ಐಆರ್‌ಡಿಎಗೆ ಸುಪ್ರೀಂಕೋರ್ಟ್ ನೋಟಿಸ್
author img

By

Published : Jun 16, 2020, 12:55 PM IST

ನವದೆಹಲಿ: ಮಾನಸಿಕ ಅಸ್ವಸ್ಥರಿಗೆ ವೈದ್ಯಕೀಯ ಚಿಕಿತ್ಸೆ ನೀಡಲು ವಿಮಾ ಸೌಲಭ್ಯ ವಿಸ್ತರಿಸುವ ಕುರಿತು ಕೇಂದ್ರ ಸರ್ಕಾರ ಮತ್ತು ಐಆರ್‌ಡಿಎಗೆ ಸುಪ್ರೀಂಕೋರ್ಟ್ ನೋಟಿಸ್‌ ನೀಡಿದೆ.

ಮಾನಸಿಕ ಅಸ್ವಸ್ಥರಿಗೆ ವೈದ್ಯಕೀಯ ಚಿಕಿತ್ಸೆ ಮುಂದುವರಿಸಲು ವಿಮಾ ಸೌಲಭ್ಯಗಳನ್ನು ವಿಸ್ತರಿಸಲು ವಿಮಾ ಕಂಪನಿಗಳಿಗೆ ನಿರ್ದೇಶನ ನೀಡಬೇಕು ಎಂದು ಸುಪ್ರೀಂಕೋರ್ಟ್‌ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು.

ನ್ಯಾಯಮೂರ್ತಿ ರೊಹಿಂಗ್ಟನ್‌ ಫಾಲಿ ನಾರಿಮನ್‌ ನೇತೃತ್ವದ ತ್ರಿಸದಸ್ಯ ಪೀಠ ಇಂದು ಅರ್ಜಿಯ ವಿಚಾರಣೆ ನಡೆಸಿ ಕೇಂದ್ರ ಸರ್ಕಾರ ಹಾಗೂ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎ) ಈ ಸಂಬಂಧ ಉತ್ತರಿಸುವಂತೆ ನೋಟಿಸ್‌ ನೀಡಿದೆ.

ಸೆಕ್ಷನ್‌ 21ರ ಮೆಂಟಲ್‌ ಹೆಲ್ತ್‌ ಕೇರ್‌ ಆ್ಯಕ್ಟ್‌ 2017 ಅನ್ನು ಐಆರ್‌ಡಿಎ 2018ರ ಆಗಸ್ಟ್‌ನಲ್ಲಿ ಜಾರಿಗೊಳಿಸಲಾಗಿತ್ತು. ಆದ್ರೆ ಇದನ್ನು ಯಾವುದೇ ವಿಮಾನ ಕಂಪನಿಗಳು ಪಾಲಿಸುತ್ತಿಲ್ಲ ಎಂದು ಅರ್ಜಿಯಲ್ಲಿ ದೂರಲಾಗಿದೆ. ಕಾಯ್ದೆಯ ಸೆಕ್ಷನ್‌ 21 ರ ಪ್ರಕಾರ ಸಾಮಾನ್ಯ ಜನರಿಗೆ ನೀಡುವಂತೆಯೇ ಸಮಾನವಾಗಿ ಚಿಕಿತ್ಸೆ ನೀಡಬೇಕು ಎಂಬುದು ಕಾಯ್ದೆಯಲ್ಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.