ETV Bharat / bharat

ನಿತ್ಯಾನಂದ ಸ್ವಾಮಿ ವಿಚಾರಣೆಗೆ ಹಾಜರಾಗುವಂತೆ ನೋಡಿಕೊಳ್ಳಿ: ರಾಮನಗರ ಕೋರ್ಟ್​ಗೆ ಸುಪ್ರೀಂ ನಿರ್ದೇಶನ

author img

By

Published : Mar 4, 2020, 4:15 PM IST

ಅತ್ಯಾಚಾರ ಪ್ರಕರಣ ಎದುರಿಸುತ್ತಿದ್ದು ಸದ್ಯ ತಲೆಮರೆಸಿಕೊಂಡಿರುವ ಆರೋಪಿ ಬಿಡದಿ ಆಶ್ರಮದ ನಿತ್ಯಾನಂದ ಸ್ವಾಮಿ ವಿಚಾರಣೆಗಾಗಿ ಕೋರ್ಟ್ ನಲ್ಲಿ ಹಾಜರಾಗುವಂತೆ ವಿಚಾರಣಾ ನ್ಯಾಯಾಲಯ ಎಲ್ಲ ಪ್ರಯತ್ನಗಳನ್ನು ಮಾಡಬೇಕು ಎಂದು ಸುಪ್ರೀಂಕೋರ್ಟ್ ನಿರ್ದೇಶಿಸಿದೆ.

sc directs trial court to ensure presence
ರಾಮನಗ ಕೋರ್ಟ್​ಗೆ ಸುಪ್ರೀಂ ನಿರ್ದೇಶನ

ನವದೆಹಲಿ: 2010ರ ಅತ್ಯಾಚಾರ ಪ್ರಕರಣವೊಂದರಲ್ಲಿ ವಿಚಾರಣೆ ಎದುರಿಸುತ್ತಿರುವ ಸ್ವಘೋಷಿತ ದೇವಮಾನವ ಸ್ವಾಮಿ ನಿತ್ಯಾನಂದನ ಉಪಸ್ಥಿತಿಯನ್ನು ಖಚಿತಪಡಿಸಿಕೊಳ್ಳಲು ರಾಮನಗರ ಜಿಲ್ಲೆಯ ವಿಚಾರಣಾ ನ್ಯಾಯಾಲಯಕ್ಕೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.

ಮುಖ್ಯ ನ್ಯಾಯಮೂರ್ತಿ ಎಸ್‌.ಎ.ಬೊಬ್ಡೆ ನೇತೃತ್ವದ ನ್ಯಾಯಪೀಠವು, ಈ ಹಿಂದೆ ನಿತ್ಯಾನಂದ ಸ್ವಾಮಿಯ ಕಾರು ಚಾಲಕನಾಗಿದ್ದ ಕೆ.ಲೆನಿನ್ ಅಲಿಯಾಸ್ ನಿತ್ಯ ಧರ್ಮಾನಂದ ಅವರ ಮನವಿಗೆ ಸ್ಪಂದಿಸಿದೆ. ಲೆನಿನ್ ಮೇಲೆ ಹೊರಡಿಸಲಾಗಿದ್ದ ಜಾಮೀನು ರಹಿತ ವಾರೆಂಟ್ ರದ್ದು ಪಡಿಸುವಂತೆ ರಾಮನಗರ ನ್ಯಾಯಾಲಯಕ್ಕೆ ಆದೇಶಿಸಿದೆ.

ರೇಪ್ ಕೇಸ್ ನಲ್ಲಿ ವಿಚಾರಣೆ ಎದುರಿಸಲು ನಿತ್ಯಾನಂದ ಸ್ವಾಮಿಯ ಉಪಸ್ಥಿತಿಯನ್ನು ಖಚಿತಪಡಿಸಿಕೊಳ್ಳಲು ಸಂಬಂಧಪಟ್ಟ ವಿಚಾರಣಾ ನ್ಯಾಯಾಲಯವು ಎಲ್ಲ ಪ್ರಯತ್ನಗಳನ್ನು ಮಾಡಬೇಕು ಎಂದು ಕೋರ್ಟ್ ನಿರ್ದೇಶಿಸಿದೆ. ಪರಾರಿಯಾಗಿರುವ ನಿತ್ಯಾನಂದ 'ಆಧ್ಯಾತ್ಮಿಕ ಪ್ರವಾಸ'ದಲ್ಲಿದ್ದಾನೆ ಎಂದು ರಾಜ್ಯ ಪೊಲೀಸರು ಹೇಳಿಕೊಂಡಿದ್ದರೂ, ಕರ್ನಾಟಕ ಹೈಕೋರ್ಟ್ ಕಳೆದ ತಿಂಗಳು ನಿತ್ಯಾನಂದಗೆ ನೀಡಿದ್ದ ಜಾಮೀನು ರದ್ದುಗೊಳಿಸಿತ್ತು.

ಅತ್ಯಾಚಾರ ಮತ್ತು ಅಸ್ವಾಭಾವಿಕ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವ ಆರೋಪ ಎದುರಿಸುತ್ತಿರುವ ನಿತ್ಯಾನಂದ ಸ್ವಾಮಿಯನ್ನು 2010ರ ಏಪ್ರಿಲ್ 22 ರಂದು ಬಂಧಿಸಲಾಗಿತ್ತು. ಅದೇ ವರ್ಷ ಜೂನ್ 11 ರಂದು ಆತನಿಗೆ ಜಾಮೀನು ಮಂಜೂರಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.