ನವದೆಹಲಿ: ಕೊರೊನಾ ಸೋಂಕಿತ ಶವ ಹೂಳಲು ಸಂಬಂಧಿಸಿದ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್, ಬಾಂಬೆ ಹೈಕೋರ್ಟ್‌ಗೆ ರವಾನಿಸಿದೆ.
ಈ ಬಗ್ಗೆ ಸುಪ್ರೀಂಕೋರ್ಟ್ ಈಗಾಗಲೇ ಮಧ್ಯಂತರ ತೀರ್ಪು ನೀಡಿರುವ ಹಿನ್ನೆಲೆ, ಈ ವಿಷಯವನ್ನು 2 ವಾರಗಳಲ್ಲಿ ತೀರ್ಮಾನಿಸುವಂತೆ ಅಪೆಕ್ಸ್ ನ್ಯಾಯಾಲಯ ಮುಂಬೈ ಹೈಕೋರ್ಟ್‌ಗೆ ನಿರ್ದೇಶನ ನೀಡಿದೆ.
ಕೊರೊನಾ ವೈರಸ್ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಶವ ಹೂಳಲು ನಿರಾಕರಿಸಿದ್ದ ಮುಂಬೈ ನಿವಾಸಿಯೊಬ್ಬರು, ಏಪ್ರಿಲ್ 27ರಂದು ಮುಂಬೈ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಮೃತ ದೇಹಗಳಿಂದಾಗಿ ವೈರಸ್ ಹರಡಬಹುದು ಹಾಗೂ ಸಮಾಧಿ, ಶವಾಗಾರವನ್ನು ತಾತ್ಕಾಲಿಕವಾಗಿ ನಿಷೇಧಿಸಬೇಕು ಎಂದು ಅರ್ಜಿದಾರರು ಅರ್ಜಿಯಲ್ಲಿ ನಮೂದಿಸಿದ್ದರು.