ನವದೆಹಲಿ: ಭಾರತದ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ ನೇತೃತ್ವದ ಪೀಠವು ಏರ್ ಇಂಡಿಯಾ ತನ್ನ ನಿಗದಿತ ಅಂತಾರಾಷ್ಟ್ರೀಯ ವಿಮಾನಯಾನಗಳನ್ನು ಕೇಂದ್ರದ ಸೀಟ್ ಬುಕ್ಕಿಂಗ್ನೊಂದಿಗೆ 10 ದಿನಗಳವರೆಗೆ ನಡೆಸಲು ಅನುಮತಿ ನೀಡಿತು. ನಂತರ ಬಾಂಬೆ ಹೈಕೋರ್ಟ್ ಆದೇಶದಂತೆ ಮಧ್ಯದ ಸೀಟ್ಗಳನ್ನು ಖಾಲಿ ಇಡಲು ನಿರ್ದೇಶಿಸುವಂತೆ ವಿಮಾನಯಾನ ಸಂಸ್ಥೆಗೆ ಸೂಚನೆ ನೀಡಿದರು.
ಮೇ 22 ರಂದು, ಬಾಂಬೆ ಹೈಕೋರ್ಟ್ ಏರ್ ಇಂಡಿಯಾಕ್ಕೆ ನಿಗದಿತ ಅಂತಾರಾಷ್ಟ್ರೀಯ ವಿಮಾನಗಳ ಖಾಲಿ ಜಾಗವನ್ನು ಖಾಲಿ ಇರುವಂತೆ ನಿರ್ದೇಶಿಸಿತ್ತು. ಏರ್ ಇಂಡಿಯಾದ ಪೈಲಟ್ ಸಲ್ಲಿಸಿದ ಮನವಿಗೆ ಪ್ರತಿಕ್ರಿಯೆಯಾಗಿ, ಈ ಸಮಯದಲ್ಲಿ ವಿಮಾನಗಳಲ್ಲಿ ಸಾಮಾಜಿಕ ಅಂತರ ಪಾಲಿಸುವ ಮಾನದಂಡಗಳನ್ನು ಅನುಸರಿಸುತ್ತಿಲ್ಲ ಎಂದು ಹೇಳಿದ್ದಾರೆ.
ಈ ಕುರಿತಾದ ಚಿತ್ರಗಳನ್ನು ಹೈಕೋರ್ಟ್‌ನಲ್ಲಿ ತೋರಿಸುವುದರ ಮೂಲಕ, ಎಲ್ಲ ಸೀಟುಗಳನ್ನು ಕಾಯ್ದಿರಿಸಲಾಗಿದೆ ಮತ್ತು ವಿಮಾನಗಳಲ್ಲಿನ ಮಧ್ಯದ ಆಸನಗಳನ್ನು ಖಾಲಿ ಇಡಲಾಗಿಲ್ಲ. ಇದರಿಂದ ಕೊರೊನಾ ವೈರಸ್ ಹರಡಲು ಕಾರಣವಾಗಬಹುದು ಎಂದು ಅವರು ಹೇಳಿದ್ದಾರೆ.
ಬಾಂಬೆ ಹೈಕೋರ್ಟ್ ಆದೇಶದ ವಿರುದ್ಧ ತಮ್ಮ ಅರ್ಜಿಗಳ ತುರ್ತು ವಿಚಾರಣೆಗಾಗಿ ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ಏರ್ ಇಂಡಿಯಾ ಸುಪ್ರೀಂಕೋರ್ಟ್‌ಗೆ ತೆರಳಿದ್ದವು.
ಡಿಜಿಸಿಎ ಮಾರ್ಚ್ 23 ರ ಸುತ್ತೋಲೆಯಲ್ಲಿ ಸಾಮಾಜಿಕ ಅಂತರವನ್ನು ಜಾರಿಗೆ ತರಲು ವಿಮಾನಗಳಲ್ಲಿ ಮಧ್ಯದ ಸೀಟ್ಗಳನ್ನು ಖಾಲಿ ಇಡುವಂತೆ ಕೇಳಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಈ ಸುತ್ತೋಲೆ ನಿಗದಿತ ವಾಣಿಜ್ಯ ವಿಮಾನಗಳಿಗೆ ಮಾತ್ರ ಅನ್ವಯಿಸುತ್ತದೆ ಮತ್ತು ವಿದೇಶದಲ್ಲಿ ಸಿಕ್ಕಿಬಿದ್ದ ಭಾರತೀಯರನ್ನು ಮರಳಿ ಕರೆತರಲು ವಿಶೇಷ ಅಂತಾರಾಷ್ಟ್ರೀಯ ವಿಮಾನಯಾನಕ್ಕೆ ಅನ್ವಯಿಸಲ್ಲ ಎಂದು ಎಸ್‌ಜಿ ತುಷಾರ್ ಮೆಹ್ತಾ ವಾದಿಸಿದರು.
ಮಾರ್ಚ್ 22 ರಂದು ಹೊರಡಿಸಲಾದ ಸುತ್ತೋಲೆಯಲ್ಲಿ ಮಧ್ಯದ ಸೀಟ್ಗಳನ್ನು ಖಾಲಿ ಇಡುವ ನಿರ್ದೇಶನಗಳಿಲ್ಲ. ಆದರೆ, ಮಾರ್ಚ್ 23 ರ ಸುತ್ತೋಲೆಯಲ್ಲಿ ಅದನ್ನು ರದ್ದುಪಡಿಸಲಾಗಿದೆ ಎಂದು ಎಸ್‌ಜಿ ನ್ಯಾಯಾಲಯದಲ್ಲಿ ಸ್ಪಷ್ಟಪಡಿಸಿದ್ದಾರೆ.
ಮೇ 4 ರಂದು ವೈದ್ಯಕೀಯ ಮತ್ತು ವಾಯುಯಾನ ತಜ್ಞರು ಸಭೆ ನಡೆಸಿದ್ದಾರೆ ಎಂದು ಎಸ್‌ಜಿ ತುಷಾರ್ ಮೆಹ್ತಾ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು ಮತ್ತು ಮಧ್ಯದ ಸ್ಥಾನವನ್ನು ಖಾಲಿ ಬಿಡುವುದರಿಂದ ಯಾವುದೇ ರೀತಿ ನೆರವಾಗುವುದಿಲ್ಲ. ಪರೀಕ್ಷೆ ಮತ್ತು ಕ್ವಾರಂಟೈನ್ ಉತ್ತಮ ಅಭ್ಯಾಸ ಎಂದು ಅವರು ಹೇಳಿದರು.
ಬುಕಿಂಗ್ ಬಗ್ಗೆ ವಿಚಾರಿಸಿದಾಗ, ಜೂನ್ 16 ರ ವರೆಗೆ ಮಧ್ಯದ ಸ್ಥಾನಗಳು ಸೇರಿದಂತೆ ಎಲ್ಲ ಸೀಟುಗಳನ್ನು ಕಾಯ್ದಿರಿಸಲಾಗಿದೆ ಎಂದು ಎಸ್‌ಜಿ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.
ಆದೇಶದ ವ್ಯಾಪ್ತಿ ವಿಸ್ತರಿಸಿದೆ ಮತ್ತು ನಿಗದಿತ ಅಂತಾರಾಷ್ಟ್ರೀಯ ವಿಮಾನಗಳಲ್ಲಿಯೂ ಈ ಸ್ಥಿತಿಯನ್ನು ಹಾಕಲಾಗಿದೆ ಎಂದು ಎಸ್‌ಜಿ ಮೆಹ್ತಾ ಆಕ್ಷೇಪಿಸಿದಾಗ, ಸಿಜೆಐ ಪ್ರತಿಕ್ರಿಯಿಸಿ, ನಾವು ಏನು ಮಾಡುತ್ತಿದ್ದೇವೆಂದು ನಮಗೆ ತಿಳಿದಿದೆ. ನಾಗರಿಕರ ಆರೋಗ್ಯದ ಬಗ್ಗೆ ನೀವು ಚಿಂತಿಸಬೇಕು. ವಾಣಿಜ್ಯ ವಿಮಾನಯಾನ ಸಂಸ್ಥೆಗಳ ಆರೋಗ್ಯದ ಬಗ್ಗೆ ಅಲ್ಲ ಎಂದರು.
ಈ ವಿಷಯದ ಬಗ್ಗೆ ಏರ್ ಇಂಡಿಯಾ ಮತ್ತು ಡಿಜಿಸಿಎ ಮುಕ್ತವಾಗಿ ನಿರ್ಧಾರ ಕೈಗೊಳ್ಳಬಹುದು ಎಂದು ನ್ಯಾಯಪೀಠ ಆದೇಶಿಸಿತು ಮತ್ತು ಈ ವಿಷಯವನ್ನು ತ್ವರಿತವಾಗಿ ನಿರ್ಧರಿಸಲು ಬಾಂಬೆ ಹೈಕೋರ್ಟ್ಗೆ ಸೂಚಿಸಿತು.
ಈದ್ ಸಂದರ್ಭದಲ್ಲಿ ಇಂದು ನ್ಯಾಯಾಲಯವನ್ನು ಮುಚ್ಚಲಾಗಿದ್ದರಿಂದ ವಿಶೇಷ ಸಭೆಯ ಕುರಿತು ನ್ಯಾಯಪೀಠ ಆದೇಶ ಹೊರಡಿಸಿತು