ಮುಂಬೈ: ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಎಸ್ಬಿಐ ಕನಿಷ್ಠ ನಿಧಿ ಮೇಲಿನ ಸಾಲದ ಬಡ್ಡಿ ದರ (ಎಂಸಿಎಲ್ಆರ್)ವನ್ನ ಕಡಿತ ಮಾಡಿವುದಾಗಿ ಘೋಷಿಸಿದೆ.
15 ಬೇಸಿಸ್ ಪಾಯಿಂಟ್ನಷ್ಟು ಕಡಿತವಾಗಲಿದ್ದು, ಇದೇ ಮಾರ್ಚ್ 10ರಿಂದ ಇದು ಅನ್ವಯವಾಗಲಿದೆ. ಇದಕ್ಕೂ ಮೊದಲು ಎಸ್ಬಿಐ 7.85 ರಷ್ಟಿದ್ದ ಎಂಸಿಎಲ್ಆರ್ ಅನ್ನು 7.75ಕ್ಕೆ ಅಂದರೆ 10 ಮೂಲ ಅಂಶಗಳಷ್ಟು ಇಳಿಕೆ ಮಾಡಿತ್ತು. ಪ್ರಸಕ್ತ ಹಣಕಾಸು ವರ್ಷದಲ್ಲಿ ಸುಮಾರು 10 ಬಾರಿ ಎಂಸಿಎಲ್ಆರ್ ಕಡಿತ ಮಾಡಲಾಗಿದೆ.
ಸೋಮವಾರ ಯೂನಿಯನ್ ಬ್ಯಾಂಕ್ ಎಂಸಿಎಲ್ಆರ್ ನಲ್ಲಿ 10ರಷ್ಟು ಮೂಲದರ ಕಡಿತ ಮಾಡಿ ಆದೇಶ ಹೊರಡಿಸಿತ್ತು. ಇದರ ಬೆನ್ನಲ್ಲೆ ಎಸ್ಬಿಐ ಈ ನಿರ್ಧಾರ ಪ್ರಕಟಿಸಿದೆ.
ಎಂಸಿಎಲ್ಆರ್ ಎಂದರೇನು? ಬ್ಯಾಂಕ್ ಗ್ರಾಹಕರ ಮೇಲೆ ಸಾಲದ ಮೇರೆ ವಿಧಿಸಬಹುದಾದ ಅತ್ಯಂತ ಕಡಿಮೆ ಬಡ್ಡಿ ದರವಾಗಿದ್ದು, ಆರ್ಬಿಐಯ ಅವಕಾಶವಿಲ್ಲದೆ ಇದಕ್ಕಿಂತ ಕಡಿಮೆ ಬಡ್ಡಿದರವನ್ನು ಬ್ಯಾಂಕ್ ವಿಧಿಸುವಂತಿಲ್ಲ. ಬ್ಯಾಂಕ್ ಸ್ವಂತ ವೆಚ್ಚದ ನಿಧಿಯನ್ನು ಆಧರಿಸಿ ಎಂಸಿಎಲ್ಆರ್ ನಿಗದಿಪಡಿಸಲಾಗುತ್ತದೆ. ಗ್ರಾಹಕರ ಈಗಿನ ಗೃಹಸಾಲ ಎಸ್ಬಿಐಯ ಎಂಸಿಎಲ್ಆರ್ ದರದ ಜೊತೆ ಜೋಡಣೆಯಾಗಿದ್ದರೆ ಇಂದಿನ ಇಳಿಕೆಯಿಂದಾಗಿ ಗ್ರಾಹಕರ ಇಎಂಐ ದರ ತಕ್ಷಣವೇ ಇಳಿಕೆ ಆಗುವುದಿಲ್ಲ.