ETV Bharat / bharat

ಶ್ರೀನಗರ: ಉಗ್ರರ ಗುಂಡಿನ ದಾಳಿಯಲ್ಲಿ ಸರಪಂಚ್​ ಸಾವು! - ಗುಂಡಿನ ದಾಳಿ

ಜಮ್ಮು-ಕಾಶ್ಮೀರದಲ್ಲಿ ಗುಂಡಿನ ದಾಳಿ ಮುಂದುವರೆದಿದ್ದು, ಉಗ್ರರ ದಾಳಿಗೆ ಸರಪಂಚ್​ವೊಬ್ಬರು ಸಾವನ್ನಪ್ಪಿದ್ದಾರೆ.

Sarpanch shot dead
Sarpanch shot dead
author img

By

Published : Jun 8, 2020, 7:25 PM IST

ಶ್ರೀನಗರ: ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ಉಗ್ರರ ಗುಂಡಿನ ದಾಳಿ ನಿಲ್ಲುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ಅನಂತನಾಗ್​ ಜಿಲ್ಲೆಯಲ್ಲಿ ನಡೆದ ಫೈರಿಂಗ್​ ವೇಳೆ ಸರಪಂಚ್​ವೊಬ್ಬರು ಸಾವನ್ನಪ್ಪಿದ್ದಾರೆ.

ಲುಕ್​ಭವನ್​ ಗ್ರಾಮದ ಸರಪಂಚ್​ ಆಗಿದ್ದ ಅಜಯ್​​ ಪಂಡಿತ್​ ಭಾರ್ತಿ ಗುಂಡಿನ ದಾಳಿ ವೇಳೆ ಸಾವನ್ನಪ್ಪಿದ್ದಾಗಿ ತಿಳಿದು ಬಂದಿದೆ. ಇಂದು ಬೆಳಗ್ಗೆಯಿಂದ ನಡೆದ ಗುಂಡಿನ ದಾಳಿಯಲ್ಲಿ ನಾಲ್ವರು ಉಗ್ರರನ್ನು ಹೊಡೆದುರುಳಿಸುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದ್ದು, ನಿನ್ನೆ ಕೂಡ ಐವರು ಉಗ್ರರ ಹೆಡೆಮುರಿ ಕಟ್ಟಲಾಗಿತ್ತು.

ಉಗ್ರರ ಗುಂಡಿನ ದಾಳಿಯಲ್ಲಿ ಸರಪಂಚ್​ ಸಾವು

ಇದರ ಮಧ್ಯೆ ಉಗ್ರರು ವಿವಿಧ ಪ್ರದೇಶಗಳಲ್ಲಿ ಬಾಲ ಬಿಚ್ಚುತ್ತಿದ್ದು, ಅವರಿಗೆ ಗುಂಡಿನ ರುಚಿ ತೂರಿಸಲಾಗುತ್ತಿದೆ. ಕಳೆದ 2 ವಾರಗಳಲ್ಲಿ 9 ಬೃಹತ್​ ಕಾರ್ಯಾಚರಣೆಗಳನ್ನು ನಡೆಸಲಾಗಿದ್ದು, ಇದರಲ್ಲಿ ಆರು ಹಿರಿಯ ಕಮಾಂಡರ್‌ಗಳು ಸೇರಿದಂತೆ ಒಟ್ಟು 22 ಉಗ್ರರನ್ನು ಹೊಡೆದುರುಳಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.