ETV Bharat / bharat

ಕೊರೊನಾ ವಿರುದ್ಧ ಹೋರಾಡಲು ಬೆಳೆದ ಅಕ್ಕಿಯನ್ನೆಲ್ಲಾ ಇಡೀ ಊರಿಗೆ ಹಂಚಿದ ತಾಯಿ ಶಾರದೆ..

ಮಧ್ಯಮ ವರ್ಗದ ಕುಟುಂಬದಿಂದ ಬಂದಿರುವ ಶಾರದಾ ಅವರ ಬಗ್ಗೆ ಇಡೀ ಊರು ಪ್ರಶಂಸೆ ವ್ಯಕ್ತಪಡಿಸುತ್ತಿದೆ. ಗ್ರಾಮ ಪಂಚಾಯತ್‌ ಚುನಾವಣೆಯಲ್ಲಿ ಅವರನ್ನೇ ಆರಿಸುವ ಕುರಿತು ಜನತೆ ಮಾತನಾಡಿಕೊಳ್ಳುತ್ತಿದ್ದಾರೆ.

Sarpanch Distributed Her whole Crop to Poor villagers in Telangana
ಕೊರೊನಾ ವಿರುದ್ಧ ಹೋರಾಡಲು ಬೆಳೆದ ಅಕ್ಕಿಯನ್ನೆಲ್ಲಾ ಇಡೀ ಊರಿಗೆ ಹಂಚಿದ ಮಹಿಳೆ
author img

By

Published : May 1, 2020, 6:16 PM IST

ಕರೀಂನಗರ (ತೆಲಂಗಾಣ): ದೇಶದಾದ್ಯಂತ ಲಾಕ್​​ಡೌನ್ ಇರುವ ಹಿನ್ನೆಲೆ ತಾವು ಬೆಳೆದ ಬೆಳೆಯನ್ನು ಹೇಗಾದರೂ ಮಾರುಕಟ್ಟೆಗೆ ತಂದು ಅದರಿಂದ ಮಾರಿ ಬಂದ ಹಣದಿಂದ ಸುಖಿ ಜೀವನ ನಡೆಸುವವರ ನಡುವೆ ಇಲ್ಲೊಬ್ಬರು ತಾವು ಕಷ್ಟಪಟ್ಟು ಬೆಳೆದ ಬೆಳೆಯನ್ನು ಇಡೀ ಊರಿಗೆ ಹಂಚಿ ಮಾದರಿಯಾಗಿದ್ದಾರೆ.

ತೆಲಂಗಾಣದ ಕರೀಂನಗರ ಜಿಲ್ಲೆಯ ಹುಜುರ್​​ಬಾದ್ ಗ್ರಾಮದ ಶಾರದಾ ತಾವು ಬೆಳೆದಿದ್ದ 150 ಅಕ್ಕಿಯ ಚೀಲಗಳನ್ನು ಊರಿನ ಜನರಿಗೆ ನೀಡಿದ್ದಾರೆ. ಪ್ರತಿ ಕುಟುಂಬಕ್ಕೆ ತಲಾ 25 ಕೆಜಿ ಅಕ್ಕಿ ನೀಡಿದಂತಾಗಿದೆ. ಮಧ್ಯಮ ವರ್ಗದ ಕುಟುಂಬದಿಂದ ಬಂದಿರುವ ಶಾರದಾ ಅವರ ಬಗ್ಗೆ ಇಡೀ ಊರು ಪ್ರಶಂಸೆ ವ್ಯಕ್ತಪಡಿಸುತ್ತಿದೆ. ಗ್ರಾಮ ಪಂಚಾಯತ್‌ ಚುನಾವಣೆಯಲ್ಲಿ ಅವರನ್ನೇ ಆರಿಸುವ ಕುರಿತು ಜನತೆ ಮಾತನಾಡಿಕೊಳ್ಳುತ್ತಿದ್ದಾರೆ.

ಕೊರೊನಾ ಲಾಕ್​ಡೌನ್​ನಿಂದಾಗಿ ಇಲ್ಲಿನ ಶಾಲಾಪಲ್ಲಿ-ಇಂದಿರಾನಗರ ಗ್ರಾಮದಲ್ಲಿ ಬಡವರು ತೀವ್ರ ಸಂಕಷ್ಟಕ್ಕೊಳಗಾಗಿದ್ದರು. ಇದನ್ನು ಮನಗಂಡ ಶಾರದಾ ಅವರು ಬಡವರಿಗೆ ತಾವು ಬೆಳೆದಿದ್ದ ಭತ್ತದಿಂದ ಅಕ್ಕಿ ಮಾಡಿಸಿ ಉಚಿತವಾಗಿ ವಿತರಿಸಿದ್ದಾರೆ. 650 ಕುಟುಂಬಗಳಿಗೆ ಒಟ್ಟು 53 ಕ್ವಿಂಟಾಲ್​ ಅಕ್ಕಿ ದಾನವಾಗಿ ನೀಡಿದ್ದಾರೆ. ಅಷ್ಟೇ ಅಲ್ಲ, ಗ್ರಾಮಸ್ಥರಿಗೆ 20ಸಾವಿರ ಮೌಲ್ಯದ ಮಾಸ್ಕ್​​ಗಳನ್ನೂ ವಿತರಿಸಿದ್ದಾರೆ. ಹಳ್ಳಿಯಾದ್ಯಂತ ಕೊರೊನಾ ವಿರುದ್ಧ ಜಾಗೃತಿ ಕಾರ್ಯಕ್ರಮಗಳನ್ನೂ ಹಮ್ಮಿಕೊಂಡಿದ್ದರು ಶಾರದಾ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.