ನವದೆಹಲಿ: ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಹೊಸದಾಗಿ ಸಲ್ಲಿಕೆ ಮಾಡಿರುವ ವರದಿ ಅತ್ಯಂತ ಮಹತ್ವದ್ದಾಗಿದೆ ಎಂದು ಸರ್ವೋಚ್ಛ ನ್ಯಾಯಾಲಯ ಹೇಳಿದೆ.
ಸದ್ಯ ಈ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ, ಕೋಲ್ಕತ್ತಾ ಪೊಲೀಸ್ ಕಮೀಷನರ್ ರಾಜೀವ್ ಕುಮಾರ್ರನ್ನು ವಿಚಾರಣೆ ನಡೆಸುತ್ತಿದ್ದು ಈ ವಿಚಾರಣೆಯ ಸಂಪೂರ್ಣ ವಿವರವನ್ನು ಇಂದು ಸಿಬಿಐ ಸುಪ್ರೀಂ ಕೋರ್ಟ್ಗೆ ಸಲ್ಲಿಕೆ ಮಾಡಿದೆ.
ಸುಪ್ರೀಂನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ಸಲ್ಲಿಕೆಯಾಗಿರುವ ವರದಿಯ ಕುರಿತು ಮಾತನಾಡಿದ್ದು ಇದು ಅತ್ಯಂತ ಮಹತ್ವದ ವಿಚಾರಗಳನ್ನು ಹೊಂದಿದೆ ಎಂದಿದ್ದಾರೆ.
ಇಂದು ಸಲ್ಲಿಕೆಯಾಗಿರುವ ವರದಿಗೆ ಪ್ರತಿಕ್ರಿಯೆ ನೀಡಲು ರಾಜೀವ್ ಕುಮಾರ್ಗೆ ಸುಪ್ರೀಂ ಕೋರ್ಟ್ ಹತ್ತು ದಿನಗಳ ಗಡುವು ನೀಡಿದೆ. ಕುಮಾರ್ ತಮ್ಮ ಪ್ರತಿಕ್ರಿಯೆಯನ್ನು ಮುಚ್ಚಿದ ಲಕೋಟೆಯಲ್ಲಿ ನೀಡಬೇಕು ಎಂದು ಸೂಚಿಸಿದೆ.
ರಾಜೀವ್ ಕುಮಾರ್ ಪ್ರತಿಕ್ರಿಯೆಯ ಬಳಿಕ ಎರಡೂ ಬಣಗಳ ವಾದ-ವಿವಾದವನ್ನು ಆಲಿಸಲಿದೆ ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದ್ದಾರೆ.