ನವದೆಹಲಿ: 2018ನೇ ಸಾಲಿನ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪ್ರಕಟಗೊಂಡಿದ್ದು, ರಾಜ್ಯದ ನಾಲ್ವರು ಸೇರಿದಂತೆ ಒಟ್ಟು 44 ಸಾಧಕರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಸುಗಮ ಸಂಗೀತ ಗಾಯಕಿ ಎಂ.ಡಿ. ಪಲ್ಲವಿ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರಕ್ಕೆ ಆಯ್ಕೆಯಾಗಿದ್ದು, ಗೊಂಬೆಯಾಟದ ಕಲಾವಿದೆ ಅನುಪಮಾ ಹೊಸಕೆರೆ, ರಂಗ ನಿರ್ದೇಶಕ ಎಸ್. ರಘುನಂದನ ಹಾಗೂ ಭರತನಾಟ್ಯ ಕಲಾವಿದೆ ರಾಧಾ ಶ್ರೀಧರ್ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾದ ಕರ್ನಾಟಕದವರಾಗಿದ್ದಾರೆ.
ಸಂಗೀತ, ನಾಟಕ, ಜಾನಪದ, ನೃತ್ಯ, ಹಿಂದೂಸ್ತಾನಿ ಸಂಗೀತ, ರಂಗಭೂಮಿ,ಬುಡಕಟ್ಟು ಸಂಗೀತ, ಸಾಂಪ್ರದಾಯಿಕ ಸಂಗೀತ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 44 ಸಾಧಕರನ್ನ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಗೆ ಆಯ್ಕೆ ಮಾಡಿದ್ದು, ಪ್ರಶಸ್ತಿ 1ಲಕ್ಷ ರೂ ನಗದು ಮತ್ತು ತಾಮ್ರಪತ್ರ ಒಳಗೊಂಡಿದೆ.
ಉಳಿದಂತೆ ತಬಲಾ ಮಾಂತ್ರಿಕ ಜಾಕಿರ್ ಹುಸೇನ್, ನೃತ್ಯ ಕಲಾವಿದರಾದ ಕೆ. ಕಲ್ಯಾಣಸುಂದರಂ ಪಿಳ್ಳೆ, ಸೋನಲ್ ಮಾನ್‌ಸಿಂಗ್ ಹಾಗೂ ಜತಿನ್ ಗೋಸ್ವಾಮಿ ಅವರನ್ನು ಸಂಗೀತ ನಾಟಕ ಅಕಾಡೆಮಿ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.