ತಿರುವನಂತಪುರಂ: ದೇಶಾದ್ಯಂತ ಎಲ್ಲ ದೇವಸ್ಥಾನಗಳು ಈಗಾಗಲೇ ತೆರೆದಿದ್ದು, ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ ಕೇರಳದಲ್ಲಿರುವ ಪ್ರಸಿದ್ಧ ಶಬರಿಮಲೆ ದೇಗುಲದಲ್ಲಿ ಮಾತ್ರ ಭಕ್ತರ ಅವಕಾಶಕ್ಕೆ ಪ್ರವೇಶ ನಿರಾಕರಣೆ ಮಾಡಲಾಗಿದೆ.
ಕೇರಳದ ಮುಜರಾಯಿ ಖಾತೆ ಸಚಿವ ಕಡಕಂಪಲ್ಲಿ ಸುರೇಂದ್ರನ್ ತಿರುವಾಂಕೂರು ದೇವಸ್ವಂ ಮಂಡಳಿ ಅಧ್ಯಕ್ಷ ಎನ್ ವಾಸು ಜತೆ ಸಭೆ ನಡೆಸಿ ಈ ಮಹತ್ವದ ಮಾಹಿತಿ ಹೊರಹಾಕಿದ್ದಾರೆ. ದೇವಸ್ಥಾನದಲ್ಲಿ ನಡೆಯುತ್ತಿದ್ದ ತಿಂಗಳ ಪೂಜೆ ಹಾಗೂ ಹಬ್ಬ ನಡೆಸದಂತೆ ಈಗಾಗಲೇ ನಿರ್ಧರಿಸಲಾಗಿದ್ದು, ಜೂನ್ 19ರಿಂದ ಆರಂಭಗೊಳ್ಳಬೇಕಾಗಿದ್ದ ದೇವಸ್ಥಾನದ ಜಾತ್ರೆ ರದ್ಧುಗೊಳಿಸಲಾಗಿದೆ ಎಂದು ಸ್ಪಷ್ಟ ಪಡಿಸಿದ್ದಾರೆ.
ರಾಜ್ಯದಲ್ಲಿ ಕೊರೊನಾ ಅಬ್ಬರ ಜೋರಾಗಿದ್ದು, ಇದರ ಬೆನ್ನಲ್ಲೇ ಈ ನಿರ್ಧಾರ ಕೈಗೊಳ್ಳಲಾಗಿದೆ. ಕೇಂದ್ರ ಸರ್ಕಾರ ಈಗಾಗಲೇ ಕೆಲವೊಂದು ಷರತ್ತು ವಿಧಿಸಿ ದೇವಾಲಯ ತೆರೆಯಲು ಅನುಮತಿ ನೀಡಿದೆ. ಬೇರೆ ಬೇರೆ ರಾಜ್ಯದ ಭಕ್ತರು ಹೆಚ್ಚಿನ ರೀತಿಯಲ್ಲಿ ದೇವಸ್ಥಾನಕ್ಕೆ ಆಗಮಿಸುವ ಸಾಧ್ಯತೆ ಹೆಚ್ಚಾಗಿರುವ ಕಾರಣ ತಕ್ಷಣವೇ ದೇಗುಲ ತೆರೆಯುವುದು ಬೇಡ ಎಂದು ಇಂದಿನ ಸಭೆಯಲ್ಲಿ ತಿರ್ಮಾನ ಕೈಗೊಂಡಿದ್ದಾಗಿ ಅವರು ಹೇಳಿದ್ದಾರೆ.