ETV Bharat / bharat

ಗ್ರಾಮೀಣ ಭಾರತ ತನ್ನನ್ನು 'ಬಯಲು ಶೌಚ ಮುಕ್ತ' ಎಂದು ಘೋಷಿಸಿಕೊಂಡಿದೆ: ಪ್ರಧಾನಿ ಮೋದಿ - 150ನೇ ಗಾಂಧಿ ಜನ್ಮ ದಿನ

ರಾಷ್ಟ್ರಪಿತನ 150ನೇ ಜನ್ಮದಿನಾಚರಣೆ ಅಂಗವಾಗಿ ಪ್ರಧಾನಿ ಮೋದಿ ಗುಜರಾತ್​ನ ಸಬರಮತಿ ಆಶ್ರಮದಲ್ಲಿ 'ಸ್ವಚ್ಛ ಭಾರತ ದಿವಸ' ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ
author img

By

Published : Oct 2, 2019, 10:04 PM IST

Updated : Oct 2, 2019, 10:11 PM IST

ಅಹಮದಾಬಾದ್​​: ಗ್ರಾಮೀಣ ಭಾರತ ಇದೀಗ ಬಯಲು ಶೌಚ ಮುಕ್ತವಾಗಿದೆ. 60 ಕೋಟಿ ಭಾರತೀಯರಿಗೆ 11 ಕೋಟಿ ಶೌಚಾಲಯ ನಿರ್ಮಿಸಿ ಕೊಡಲಾಗಿದ್ದು, 2014ರಲ್ಲಿ ಕಾರ್ಯರೂಪಕ್ಕೆ ತಂದಿರುವ ಸ್ವಚ್ಛ ಭಾರತ ಯೋಜನೆ ಯಶಸ್ವಿಯಾಗಿದೆ ಎಂದು ಪ್ರಧಾನಿ ಮೋದಿ ಘೋಷಿಸಿದ್ರು.

ಗಾಂಧೀಜಿ 150ನೇ ಜನ್ಮದಿನ ಅಂಗವಾಗಿ ಪ್ರಧಾನಿ ಮೋದಿ ಅಹಮದಾಬಾದ್​ನ ಸಬರಮತಿ ಆಶ್ರಮದಲ್ಲಿ ಸ್ವಚ್ಚ ಭಾರತ ಅಭಿಯಾನದ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ್ರು.

ನರೇಂದ್ರ ಮೋದಿ

ಮಹಾತ್ಮ ಗಾಂಧೀಜಿಯವರ 150ನೇ ವಾರ್ಷಿಕೋತ್ಸವವನ್ನು ವಿಶ್ವಸಂಸ್ಥೆಯಲ್ಲಿ ಅಪಾರ ಉತ್ಸಾಹದಿಂದ ಗುರುತಿಸಲಾಗಿದೆ. ಜಗತ್ತು ಎದುರಿಸುತ್ತಿರುವ ಯಾವುದೇ ಸಮಸ್ಯೆಯನ್ನೇ ತೆಗೆದುಕೊಳ್ಳಿ, ಗಾಂಧೀಜಿ ಬೋಧನೆ ಅದಕ್ಕೆ ಪರಿಹಾರ ನೀಡುತ್ತವೆ ಎಂದರು.

ಭಾರತದ ಶ್ರೇಷ್ಠತೆ ಜಾಗತಿಕ ವೇದಿಕೆಗಳಲ್ಲಿ ಉದಯಿಸುತ್ತಿವೆ. ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶದ ಗೌರವ ಹೆಚ್ಚುತ್ತಿದೆ. ದೇಶ ಎಲ್ಲಾ ರಂಗದಲ್ಲೂ ಸಕಾರಾತ್ಮಕ ಬದಲಾವಣೆ ಹೊಂದುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದ್ರು.

ಮುಂದಿನ ದಿನಗಳಲ್ಲಿ ಏಕ​ ಬಳಕೆ ಪ್ಲಾಸ್ಟಿಕ್​ಗಳ ವಿರುದ್ಧ ನಮ್ಮ ಸಮರ ನಡೆಯಲಿದ್ದು, 2022ರವೇಳೆಗೆ ಈ ಯೋಜನೆ ಯಶಸ್ವಿಯಾಗಿ ಮುಕ್ತಾಯಗೊಳ್ಳಲು ಪ್ರಧಾನಿ ಇದೇ ವೇಳೆ ದೇಶವಾಸಿಗಳ ಸಹಾಯ ಕೋರಿದ್ರು.

ಇದಕ್ಕೂ ಮೊದಲು ಮಹಾತ್ಮ ಗಾಂಧಿಯವರ 150ನೇ ಜನ್ಮ ದಿನದ ಅಂಗವಾಗಿ 150ರೂ ಮುಖಬೆಲೆಯ ನಾಣ್ಯವನ್ನು ಸ್ಮರಣಾರ್ಥವಾಗಿ ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ವಿಜಯ್​ ರೂಪಾಣಿ ಉಪಸ್ಥಿತರಿದ್ದರು.

Intro:Body:

ಗ್ರಾಮೀಣ ಭಾರತ ಇದೀಗ ಬಯಲು ಶೌಚ ಮುಕ್ತ ದೇಶ: ಪ್ರಧಾನಿ ಮೋದಿ ಘೋಷಣೆ

ಅಹಮದಾಬಾದ್​​: ಮಹಾತ್ಮ ಗಾಂಧಿಯವರ 150ನೇ ಜನ್ಮ ದಿನ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅಹಮದಾಬಾದ್​ನ ಸಬರಮತಿ ಆಶ್ರಮದಲ್ಲಿ ರಾಷ್ಟ್ರಪಿತನಿಗೆ ಗೌರವ ಸಲ್ಲಿಕೆ ಮಾಡಿದರು. 

ಈ ವೇಳೆ ಮಾತನಾಡಿದ ನಮೋ, ಗ್ರಾಮೀಣ ಭಾರತ ಇದೀಗ ಬಯಲು ಶೌಚ ಮುಕ್ತ ದೇಶ ಎಂದು ಘೋಷಣೆ ಮಾಡಿದರು. 60 ಕೋಟಿ ಭಾರತೀಯರಿಗೆ 11 ಕೋಟಿ ಶೌಚಾಲಯ ನಿರ್ಮಿಸಿ ಕೊಡಲಾಗಿದ್ದು, 2014ರಲ್ಲಿ ಕಾರ್ಯರೂಪಕ್ಕೆ ತಂದಿರುವ ಸ್ವಚ್ಛ ಭಾರತ ಯೋಜನೆ ಯಶಸ್ವಿಯಾಗಿದೆ ಎಂದು ತಿಳಿಸಿದ್ರು. 

ಇದೇ ವೇಳೆ ತಮ್ಮ ಭಾಷಣ ಮುಂದುವರಿಸಿದ ಮೋದಿ, ಮಹಾತ್ಮ ಗಾಂಧಿಯವರ 150ನೇ ವಾರ್ಷಿಕೋತ್ಸವವನ್ನು ವಿಶ್ವಸಂಸ್ಥೆಯಲ್ಲಿ ಅಪಾರ ಉತ್ಸಾಹದಿಂದ ಗುರುತಿಸಲಾಗಿದೆ. ಜಗತ್ತು ಎದುರಿಸುತ್ತಿರುವ ಯಾವುದೇ ಸಮಸ್ಯೆಯನ್ನು ತೆಗೆದುಕೊಳ್ಳಿ, ಮಹಾತ್ಮ ಗಾಂಧಿಯವರ ಬೋಧನೆ ಅದಕ್ಕೆ ಪರಿಹಾರ ನೀಡುತ್ತವೆ. 

ಭಾರತದ ಶ್ರೇಷ್ಠತೆ ಜಾಗತಿಕ ವೇದಿಕೆಗಳಲ್ಲಿ ಉದಯಿಸುತ್ತಿವೆ. ಭಾರತದ ಗೌರವ ಎಲ್ಲೆಡೆ ಹೆಚ್ಚುತ್ತಿದೆ. ಭಾರತ ಎಲ್ಲ ರಂಗದಲ್ಲೂ ಸಕಾರಾತ್ಮಕ ಬದಲಾವಣೆ ಹೊಂದುತ್ತಿದೆ ಎಂದು ಹೇಳಿದರು. 

ಮುಂದಿನ ದಿನಗಳಲ್ಲಿ ಸಿಂಗಲ್​ ಬಳಕೆ ಪ್ಲಾಸ್ಟಿಕ್​ಗಳ ವಿರುದ್ಧ ನಮ್ಮ ಸಮರ ನಡೆಯಲಿದ್ದು, 2022ರವೇಳೆಗೆ ಈ ಯೋಜನೆ ಯಶಸ್ವಿಯಾಗಿ ಮುಕ್ತಾಯಗೊಳ್ಳಲು ನಿಮ್ಮೆಲ್ಲರ ಸಹಾಯ ಅವಶ್ಯ ಎಂದರು. 

ಇದಕ್ಕೂ ಮೊದಲು ಮಹಾತ್ಮ ಗಾಂಧಿಯವರ 150ನೇ ಜನ್ಮ ದಿನದ ಅಂಗವಾಗಿ 150ರೂ ಮುಖಬೆಲೆಯ ನಾಣ್ಯವನ್ನ ಸ್ಮರಣಾರ್ಥವಾಗಿ ರಿಲೀಸ್ ಮಾಡಿದರು. ಅವರಿಗೆ ಅಲ್ಲಿನ ಮುಖ್ಯಮಂತ್ರಿ ವಿಜಯ್​ ರೂಪಾಣಿ ಸಾಥ್​ ನೀಡಿದರು. 

Conclusion:
Last Updated : Oct 2, 2019, 10:11 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.