ಕೃಷ್ಣ(ಆಂಧ್ರ ಪ್ರದೇಶ): ವಿದೇಶದಿಂದ ಅಕ್ರಮವಾಗಿ ಸಾಗಿಸುತ್ತಿದ್ದ 1.865 ಕೆ.ಜಿ ಚಿನ್ನವನ್ನು ಕೃಷ್ಣ ಜಿಲ್ಲೆಯ ಗನ್ನವರಂ ವಿಮಾನ ನಿಲ್ದಾಣ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ವಂದೇ ಭಾರತ್ ಮಿಷನ್‌ನ ಅಂಗವಾಗಿ ಕುವೈತ್‌ನಿಂದ ವಿಶೇಷ ವಿಮಾನ ಗುರುವಾರ ಗನ್ನವರಂ ವಿಮಾನ ನಿಲ್ದಾಣಕ್ಕೆ ಬಂದಿತ್ತು. ಈ ವೇಳೆ ಪ್ರಯಾಣಿಕರನ್ನು ಪರಿಶೀಲಿಸಿದ ಕಸ್ಟಮ್ಸ್ ಅಧಿಕಾರಿಗಳಿಗೆ ಮೂವರು ಮಹಿಳೆಯರ ಕೈಚೀಲಗಳಲ್ಲಿ ಚಿನ್ನ ಪತ್ತೆಯಾಗಿದೆ.
ಸುಮಾರು 95 ಲಕ್ಷ ರೂ. ಮೌಲ್ಯದ 1.865 ಕೆ.ಜಿ ಚಿನ್ನವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈ ಮೊತ್ತದ ಚಿನ್ನದ ಮೂಲದ ಕುರಿತು ವಿಮಾನ ನಿಲ್ದಾಣದ ಅಧಿಕಾರಿಗಳು ಆರೋಪಿಗಳನ್ನು ಪ್ರಶ್ನಿಸುತ್ತಿದ್ದಾರೆ. ತನಿಖೆ ಮುಂದುವರೆದಿದೆ.