ನವದೆಹಲಿ : ಸತತ 18ನೇ ದಿನವೂ ತೈಲಬೆಲೆಯಲ್ಲಿ ಹೆಚ್ಚಳವಾಗಿದೆ. ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳು ಡಿಸೇಲ್ನ ಬೆಲೆಯಲ್ಲಿ 55 ಪೈಸೆಯನ್ನು ಹೆಚ್ಚಿಸಿವೆ. ಆದರೆ ಪೆಟ್ರೋಲ್ ಬೆಲೆಯನ್ನ ಏರಿಸಲಾಗಿಲ್ಲ.
ಇದರಿಂದಾಗಿ ಡೀಸೆಲ್ನ ಬೆಲೆ 18 ದಿನಗಳಲ್ಲಿ ಡೀಸೆಲ್ನ ಬೆಲೆ 11 ರೂ.ನಷ್ಟು ಹೆಚ್ಚಳ ಕಂಡಿದೆ. ಪೆಟ್ರೋಲ್ನ ಬೆಲೆ 8 ರೂಪಾಯಿ 50 ಪೈಸೆಯಷ್ಟು ಹೆಚ್ಚಳವಾಗಿದೆ. ಇದು ವಾಹನ ಸವಾರರಿಗೆ ತಲೆಬಿಸಿಯಾಗಿದ್ದು, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪೆಟ್ರೋಲ್ನ ಬೆಲೆ ದೆಹಲಿಯಲ್ಲಿ ಲೀಟರ್ಗೆ 79.76 ರೂಪಾಯಿ ಹಾಗೂ ಡೀಸೆಲ್ಗೆ 79.88 ರೂಪಾಯಿಯಷ್ಟಿದೆ. ಮುಂದಿನ ದಿನಗಳಲ್ಲೂ ಕೂಡಾ ಇಂಧನ ಬೆಲೆ ಏರುಗತಿಯಲ್ಲಿ ಸಾಗುವ ಎಲ್ಲಾ ಲಕ್ಷಣಗಳು ಕಂಡುಬಂದಿವೆ.