ನವದೆಹಲಿ: ಮೇ 17ರ ನಂತರ ಲಾಕ್ ಡೌನ್ ಸಡಿಲಿಕೆ ಕುರಿತು ದೆಹಲಿ ನಿವಾಸಿಗಳಿಂದ ಸಲಹೆಗಳನ್ನು ಕೋರಿದ ಅರವಿಂದ್ ಕೇಜ್ರಿವಾಲ್ಗೆ, ನಿನ್ನೆ ಸಂಜೆ ವೇಳೆಗೆ ಸುಮಾರು 3 ಲಕ್ಷ ಸಂದೇಶಗಳು, 5,000 ಇಮೇಲ್‌ಗಳು ಮತ್ತು ಸುಮಾರು 25 ಸಾವಿರ ರೆಕಾರ್ಡೆಡ್ ಫೋನ್ ಕಾಲ್ಗಳು ಬಂದಿವೆ.
ಸಿಎಂ ಕೇಜ್ರಿವಾಲ್ ನಿನ್ನೆ ಮಧ್ಯಾಹ್ನ ಸಲಹೆ ನೀಡುವಂತೆ ಜನರಲ್ಲಿ ಕೋರಿದ್ದರು. ಮೇ 17ರ ಬಳಿಕ ಲಾಕ್ ಡೌನ್ ಅನ್ನು ಸಂಪೂರ್ಣವಾಗಿ ತೆಗೆದುಹಾಕಲಾಗುವುದಿಲ್ಲ ಎಂದು ಹೆಳಿದ ಕೇಜ್ರಿವಾಲ್, ಮೇ 17ರಿಂದ ಲಾಕ್ ಡೌನ್ ಸಡಿಲಿಕೆ ಕುರಿತು ಜನರಿಂದ ಸಲಹೆ ಕೋರಿದ್ದರು.
"ಕೋವಿಡ್ -19 ಸೋಂಕು ಹರಡುತ್ತಿರುವುದರಿಂದ ಲಾಕ್‌ಡೌನ್ ಅನ್ನು ಸಂಪೂರ್ಣವಾಗಿ ತೆಗೆದುಹಾಕುವುದು ಒಳ್ಳೆಯದಲ್ಲ. ಆದರೆ ನಿಮ್ಮ ಸಲಹೆಗಳನ್ನು ನಾನು ಬಯಸುತ್ತೇನೆ." ಎಂದು ಕೇಜ್ರಿವಾಲ್ ಕೇಳಿದ್ದರು.
ಲಾಕ್ ಡೌನ್ ಸಡಿಲಿಕೆ ಕಾರ್ಯರೂಪಕ್ಕೆ ಬಂದರೂ ಜನ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಮಾಸ್ಕ್ ಧರಿಸಬೇಕು ಮತ್ತು ಇತರ ಎಲ್ಲ ನಿಯಮಗಳನ್ನು ಪಾಲಿಸಬೇಕು. ಜನರ ಸಲಹೆಗಳನ್ನು ಕೇಂದ್ರಕ್ಕೆ ಕಳುಹಿಸಲಾಗುವುದು ಎಂದು ಸಿಎಂ ಕೇಜ್ರಿವಾಲ್ ಹೇಳಿದ್ದಾರೆ.