ವಡೋದರಾ (ಗುಜರಾತ್): ಕೋವಿಡ್ -19 ರೋಗಿಗಳಿಗೆ ಆಹಾರ ಮತ್ತು ಔಷಧಗಳನ್ನು ಪೂರೈಸಲು ಗುಜರಾತ್ನ ವಡೋದರಾದ ಸರ್ ಸಯಾಜಿರಾವ್ ಗಾಯಕ್ವಾಡ್ (ಎಸ್ಎಸ್ಜಿ) ಆಸ್ಪತ್ರೆಯಲ್ಲಿ ಎರಡು ರೊಬೊಟ್ಗಳನ್ನು ನಿಯೋಜಿಸಲಾಗಿದೆ.
ಆಸ್ಪತ್ರೆಯ ಸಿಬ್ಬಂದಿಗೆ ಸೋಂಕಿನ ಅಪಾಯ ತಗ್ಗಿಸಲು ಮುನ್ನೆಚ್ಚರಿಕೆ ಕ್ರಮವಾಗಿ ಈ ವ್ಯವಸ್ಥೆ ಮಾಡಲಾಗಿದೆ. ಈ ರೊಬೊಟ್ಗಳನ್ನು ಕೊರೊನಾ ವೈರಸ್ ವಾರ್ಡ್ಗಳಲ್ಲಿ ರೋಗಿಗಳ ತಪಾಸಣೆಗೆ ಕೂಡಾ ಬಳಸಬಹುದಾಗಿದೆ.
ಶೀಘ್ರದಲ್ಲೇ ಆಸ್ಪತ್ರೆಯ ಆಡಳಿತವು ಪ್ರವೇಶ ದ್ವಾರದಲ್ಲಿ ರೊಬೊಟ್ಗಳನ್ನು ಇರಿಸಲಿದ್ದು, ಆಸ್ಪತ್ರೆಯ ಆವರಣಕ್ಕೆ ಪ್ರವೇಶಿಸುವ ಜನರಲ್ಲಿ ಕೋವಿಡ್-19 ರೋಗಲಕ್ಷಣಗಳಿವೆಯೇ ಎಂದು ಈ ರೊಬೊಟ್ಗಳು ಪರೀಕ್ಷಿಸಲಿವೆ.
ಒಮ್ಮೆ ಪೂರ್ಣವಾಗಿ ಚಾರ್ಜ್ ಮಾಡಿದಾಗ ಈ ರೊಬೊಟ್ಗಳು 4 ಗಂಟೆಗಳಿಗಿಂತ ಹೆಚ್ಚು ಕಾಲ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿವೆ.