ETV Bharat / bharat

ಬೆಚ್ಚಿ ಬೀಳಿಸುತ್ತೆ ಎನ್‌ಸಿಆರ್‌ಬಿ ಅಂಕಿ ಅಂಶ: ಇವು ರಸ್ತೆಗಳೋ ಅಥವಾ ಬಲಿಪೀಠಗಳೋ..? - ರಸ್ತೆಗಳೋ ಅಥವಾ ಬಲಿಪೀಠಗಳೋ

ದೇಶಾದ್ಯಂತ ಕಳೆದ ವರ್ಷ 4.37 ಲಕ್ಷಕ್ಕೂ ಹೆಚ್ಚು ರಸ್ತೆ ಅಪಘಾತಗಳು ದಾಖಲಾಗಿದ್ದು, ಈ ಅಪಘಾತಗಳಲ್ಲಿ ಪ್ರಾಣ ಕಳೆದು ಕೊಂಡವರ ಸಂಖ್ಯೆ ಬರೋಬ್ಬರಿ ಒಂದು ಲಕ್ಷದ ಐವತ್ತೈದು ಸಾವಿರ ಎಂಬುದು ಹೃದಯ ವಿದ್ರಾವಕ ಸಂಗತಿ.

ರಸ್ತೆಗಳೋ ಅಥವಾ ಬಲಿಪೀಠಗಳೋ
Roads or Altars
author img

By

Published : Sep 10, 2020, 5:42 PM IST

ನವದೆಹಲಿ: ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ (ಎನ್‌ಸಿಆರ್‌ಬಿ) ಇತ್ತೀಚಿನ ಅಂಕಿ ಅಂಶಗಳು ಬೆಚ್ಚಿ ಬೀಳಿಸುತ್ತಿದೆ. ಎಲ್ಲಾ ಭಾರತೀಯ ನಾಗರಿಕರಿಗೆ ಸಾಂವಿಧಾನ ಖಾತರಿ ಪಡಿಸಿರುವ ಜೀವನದ ಹಕ್ಕು ಇನ್ನೂ ಹೆದ್ದಾರಿಗಳಲ್ಲಿ ರಕ್ತ ರೂಪದಲ್ಲಿ ಸೋರಿ ಹೋಗುತ್ತಿರುವಂತೆ ಭಾಸವಾಗುತ್ತಿದೆ.

ದೇಶಾದ್ಯಂತ ಕಳೆದ ವರ್ಷ 4.37 ಲಕ್ಷಕ್ಕೂ ಹೆಚ್ಚು ರಸ್ತೆ ಅಪಘಾತಗಳು ದಾಖಲಾಗಿವೆ. ಈ ಅಪಘಾತಗಳಲ್ಲಿ ಪ್ರಾಣ ಕಳೆದು ಕೊಂಡವರ ಸಂಖ್ಯೆ ಬರೋಬ್ಬರಿ ಒಂದು ಲಕ್ಷದ ಐವತ್ತೈದು ಸಾವಿರ ಎಂಬುದು ಹೃದಯ ವಿದ್ರಾವಕ ಸಂಗತಿ. ರಸ್ತೆ ಸುರಕ್ಷತೆಗೆ ಸಂಬಂಧಿಸಿದಂತೆ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಸರಕಾರ ಹಮ್ಮಿಕೊಂಡು ಬಂದಿದೆ. ಆದಾಗ್ಯೂ ಅಪಘಾತದ ಪ್ರಮಾಣ ಈ ಸಂಖ್ಯೆಯಲ್ಲಿರುವುದು ಕಳವಳಕಾರಿ.

ವೇಗ ಮತ್ತು ಅಜಾಗರೂಕ ಚಾಲನೆಯ ವಿರುದ್ಧ ವ್ಯಾಪಕ ಪ್ರಚಾರದ ಹೊರತಾಗಿಯೂ ಅಪಘಾತದ ಪ್ರಮಾಣ ಕಡಿಮೆಯಾಗಿಲ್ಲ. ರಸ್ತೆಯ ಇಕ್ಕೆಲಗಳಲ್ಲಿ ಬರೆದಿರುವ "ಸ್ವರ್ಗಕ್ಕೆ ಮುಂಚಿತವಾಗಿ ಹೋಗುವ ಬದಲು ಭೂಮಿಯಿಂದ ತಡವಾಗಿ ನಿರ್ಗಮಿಸುವುದು ಉತ್ತಮ, 'ವೇಗ ರೋಮಾಂಚನ ನೀಡುತ್ತದೆ ಆದರೆ ಕೊಲ್ಲುತ್ತದೆ ", "ವೇಗದ ವಾಹನ ಸವಾರಿ ಕೊನೆಯ ಸವಾರಿಯೂ ಆಗಬಹುದು” ಎಂಬಿತ್ಯಾದಿ ಘೋಷಣೆಗಳ ಹೊರತಾಗಿಯೂ ಜನರಲ್ಲಿ ಜಾಗೃತಿ ಅಥವಾ ಭಯ ಮೂಡುತ್ತಿಲ್ಲ.

ಎನ್‌ಸಿಆರ್‌ಬಿ ವರದಿಯ ಪ್ರಕಾರ ಶೇಕಡಾ 60 ರಷ್ಟು ಅಪಘಾತಗಳಿಗೆ ವೇಗದ ಚಾಲನೆಯೇ ಪ್ರಮುಖ ಕಾರಣ. ವೇಗದ ವಾಹನ ಚಾಲನೆಯಿಂದಾಗಿ ಸುಮಾರು 86,241 ಕ್ಕೂ ಹೆಚ್ಚು ಜನರು ರಸ್ತೆಯಲ್ಲಿಯೇ ಸಾವನ್ನಪ್ಪಿದ್ದಾರೆ. ಅಜಾಗರೂಕ ಚಾಲನೆ ಮಾಡುವುದರಿಂದ ಶೇಕಡಾ 25.7 ರಷ್ಟು ರಸ್ತೆ ಅಪಘಾತಗಳು ಮತ್ತು 42,557 ಸಾವುಗಳು ಸಂಭವಿಸಿವೆ. ಒಟ್ಟಾರೆಯಾಗಿ, ವೇಗ ಮತ್ತು ನಿರ್ಲಕ್ಷ್ಯದ ಚಾಲನೆ ಎರಡೂ ಮಾರಕ ಕಾರಣಗಳಾಗಿವೆ. ಶೇಕಡಾ 85 ಕ್ಕಿಂತ ಹೆಚ್ಚು ಅಪಘಾತಗಳಿಗೆ ಇದು ಕಾರಣವಾಗಿವೆ.

ಇದರಿಂದಾಗಿ ಸಾವಿರಾರು ಕುಟುಂಬಗಳು ಆಘಾತ ಮತ್ತು ದುಃಖ ಅನುಭವಿಸುವಂತಾಗಿದೆ. ಶೇ 65 ರಷ್ಟು ರಸ್ತೆ ಅಪಘಾತಕ್ಕೆ ಬಲಿಯಾದವರಲ್ಲಿ 18-35 ವರ್ಷದ ಒಳಗಿನವರಾಗಿದ್ದಾರೆ ಮತ್ತು ಈ ಭೀಕರ ರಸ್ತೆ ಅಪಘಾತಗಳಿಂದಾಗಿ ಭಾರತ ತನ್ನ ಜಿಡಿಪಿಯ ಶೇಕಡಾ 3.5 ರಷ್ಟು ನಷ್ಟವನ್ನು ಅನುಭವಿಸುತ್ತಿದೆ ಎಂದು ಕೇಂದ್ರ ಸಚಿವ ನಿತಿನ್​​ ಗಡ್ಕರಿ ಅವರು ದುಃಖ ವ್ಯಕ್ತಪಡಿಸಿದ್ದಾರೆ.

2018ರ ವೇಳೆಗೆ ದೇಶೀಯ ರಸ್ತೆ ಅಪಘಾತಗಳ ಸಂಖ್ಯೆಯನ್ನು ಅರ್ಧಕ್ಕೆ ಇಳಿಸಲು ತಮ್ಮ ಸರ್ಕಾರ ಬಹುಮುಖಿ ಮಾರ್ಗವನ್ನು ತೆಗೆದುಕೊಳ್ಳುವುದಾಗಿ ಈ ಹಿಂದೆ ಘೋಷಿಸಿದ್ದ ಗಡ್ಕರಿ, ಕಳೆದ ಫೆಬ್ರವರಿಯಲ್ಲಿ ನಡೆದ ಸ್ಟಾಕ್‌ ಹೋಮ್ಸ್ ಸಮ್ಮೇಳನದಲ್ಲಿ ತಮ್ಮ ಸಚಿವಾಲಯದ ವೈಫಲ್ಯಗಳನ್ನು ಒಪ್ಪಿಕೊಂಡರು. ಕೇಂದ್ರ ಸರಕಾರ ತಂದ ಹೊಸ ಮೋಟಾರು ವಾಹನ ಕಾಯ್ದೆ ಅದರ ಅನುಷ್ಠಾನದಲ್ಲಿ ಇನ್ನೂ ತೊಂದರೆಗಳನ್ನು ಎದುರಿಸುತ್ತಿದೆ. ಈ ಕಾಯಿದೆಯ ಕುರಿತು ಹೆಚ್ಚಿನ ಜಾಗೃತಿ ಹಾಗೂ ಮಾಹಿತಿಯ ಕೊರತೆ ಕಾಣಿಸುತ್ತಿದೆ.

ಅದಲ್ಲದೆ ಎಲ್ಲಾ ಅಪಘಾತಗಳಿಗೆ ವೇಗ ಮತ್ತು ನಿರ್ಲಕ್ಷ್ಯದ ಮೇಲೆ ಆಪಾದನೆ ಮಾಡುವುದು ಸರಿಯಲ್ಲ. ವೇಗ ಮತ್ತು ನಿರ್ಲಕ್ಷ್ಯವೇ ಕಾರಣ ಎಂದು ತಿಳಿದುಕೊಂಡರೆ ಉಳಿದ ಕಾರಣಗಳನ್ನು ನಿರ್ಲಕ್ಷಿಸಿದಂತಾಗುತ್ತದೆ. ಹಾಗಾದಲ್ಲಿ ರಸ್ತೆಗಳಲ್ಲಿ ಅಪಘಾತದ ಮೂಲಕ ರಕ್ತ ಚೆಲ್ಲುವುದನ್ನು ಕಡಿಮೆಗೊಳಿಸಲು ಸಾಧ್ಯವಿಲ್ಲ. ಪ್ರತಿ ವರ್ಷ ಲಕ್ಷಾಂತರ ಕುಟುಂಬಗಳು ಅನ್ನ ಹಾಕುವ ಕೈಗಳನ್ನು ದುಡಿಯುವ ರಟ್ಟೆಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಅಪಘಾತಕ್ಕೊಳಗಾದವರ ದೇಹ ರಸ್ತೆಗಳಲ್ಲಿ ಅನಾಥವಾಗಿ ಬಿದ್ದಿರುವ ಪರಿಸ್ಥಿತಿ ಎದುರಾಗುತ್ತಿದೆ. ಈ ಪರಿಸ್ಥಿತಿ ಎಷ್ಟು ದಿನ ಮುಂದುವರಿಯುತ್ತದೆ..? ಈ ಅದೃಷ್ಟ ಹೀನ ಸ್ಥಿತಿಗೆ ಯಾರು ಜವಾಬ್ದಾರರು..? ಈ ಅಸಹಾಯಕ ಜನರಿಗೆ ಯಾರು ಉತ್ತರಿಸುತ್ತಾರೆ..?

ವಿನ್ಯಾಸ ಹಂತದಲ್ಲಿ ಐದು ವರ್ಷಗಳ ಹಿಂದೆಯೇ ಈ ರಸ್ತೆ ಅಪಘಾತದ ಸಮಸ್ಯೆಯನ್ನು ಬಗೆಹರಿಸುವುದಾಗಿ ಕೇಂದ್ರ ಸರಕಾರ ಯೀಜನೆಯನ್ನು ರೂಪಿಸಿತ್ತು. ರಸ್ತೆ ಸುರಕ್ಷತೆಗಾಗಿ ಅಪಾಯಕಾರಿ ರಸ್ತೆಗಳ ದುರಸ್ತಿ, ರಸ್ತೆ ನಿರ್ಮಾಣದ ಹಂತದಲ್ಲಿ ಅಗತ್ಯ ಸುರಕ್ಷತಾ ಕ್ರಮ, ವಾಹನಗಳ ಉತ್ಪಾದನಾ ಹಂತದಲ್ಲಿಯೇ ಸುರಕ್ಷತೆ ಮತ್ತು ಸ್ಥಿರತೆಯನ್ನು ಖಚಿತಪಡಿಸುವುದು, ಚಾಲಕರಿಗೆ ಸರಿಯಾದ ತರಬೇತಿಯನ್ನು ನೀಡುವುದು, ಅದಲ್ಲದೆ ಸರಿಯಾದ ಪರಿಶೀಲನೆ ರಸ್ತೆ ಅಪಘಾತಗಳನ್ನು ನಿಯಂತ್ರಿಸುವುದಾಗಿ ಐದು ವರ್ಷಗಳ ಹಿಂದೆ ಕೇಂದ್ರ ಕಾರ್ಯದರ್ಶಿಗಳು ಘೋಷಿಸಿದ್ದಾರೆ. ಕಟ್ಟು ನಿಟ್ಟಿನ ಕಾನೂನುಗಳನ್ನು ಜಾರಿಗೊಳಿಸುವುದಾಗಿ ಭರವಸೆ ನೀಡಲಾಗಿತ್ತು. ಜರ್ಮನಿ ಹಾಗೂ ಅಮೆರಿಕ ದಂತಹ ದೇಶಗಳಲ್ಲಿ ಭಾರತಕ್ಕಿಂತ ವೇಗವಾಗಿ ವಾಹನಗಳು ಓಡುತ್ತಿದ್ದರೂ ಸಾವಿನ ಸಂಖ್ಯೆ ಕಡಿಮೆ ಎಂದು ಕೇಂದ್ರ ಸಚಿವ ಗಡ್ಕರಿ ಆರು ತಿಂಗಳ ಹಿಂದೆಯೇ ಹೇಳಿದ್ದರು.

ಅತಿಯಾದ ವೇಗ ಒಂದೇ ಅಪಘಾತಗಳಿಗೆ ಕಾರಣ ಎಂದು ಹೇಳುವುದು ಸರಿಯಲ್ಲ ಎಂದು ಅವರು ತಿಳಸಿದರು. ಎಂಜಿನಿಯರಿಂಗ್ ದೋಷಗಳು, ವಿವರವಾದ ಯೋಜನಾ ವರದಿಗಳಲ್ಲಿನ ಲೋಪದೋಷಗಳು, ರಸ್ತೆಗಳಲ್ಲಿ ಸಮರ್ಪಕ ಸೂಚಕಗಳ ಕೊರತೆ ಇತ್ಯಾದಿಗಳನ್ನು ರಸ್ತೆ ಅಪಘಾತಗಳು ಹೆಚ್ಚಾಗಲು ಮುಖ್ಯ ಕಾರಣವೆಂದು ಅವರು ಆರೋಪಿಸುತ್ತಾರೆ. ಈ ಎಲ್ಲಾ ಲೋಪ ದೋಷಗಳನ್ನು ಸರಿಪಡಿಸುವ ಕಾರ್ಯಗಳು ಹಾಗೂ ಕ್ರಮಗಳು ಯಾಕೆ ಯುದ್ದೋಪಾದಿಯಲ್ಲಿ ನಡೆಯುತ್ತಿಲ್ಲ..? ನಾಲ್ಕು ವರ್ಷಗಳ ಹಿಂದೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ 786 ಪ್ರದೇಶಗಳನ್ನು ಅತ್ಯಂತ ಅಪಾಯಕಾರಿ ತಾಣಗಳಾಗಿ ಗುರುತಿಸಲಾಗಿದೆ ಮತ್ತು ಎರಡು ವರ್ಷಗಳಲ್ಲಿ ಅವುಗಳನ್ನು 11 ಸಾವಿರ ಕೋಟಿ ರೂಪಾಯಿಗಳ ವೆಚ್ಚದಲ್ಲಿ ಸರಿಪಡಿಸಲಾಗುವುದು ಎಂದು ಘೋಷಿಸಲಾಯಿತು.

ಗಡ್ಕರಿಯ ಇತ್ತೀಚಿನ ಹೇಳಿಕೆಯೆಂದರೆ, ಪ್ರಸ್ತುತ ಮೂರು ಸಾವಿರ ಅತ್ಯಂತ ಅಪಾಯಕಾರಿ ಪ್ರದೇಶಗಳನ್ನು ರಾಷ್ಟ್ರೀಯ ಹೆದ್ದಾರಿಗಳಲ್ಲಿವೆ. ಮುಂದಿನ ಹತ್ತು ವರ್ಷಗಳಲ್ಲಿ ರಸ್ತೆ ಅಪಘಾತ ಸಾವಿನ ಸಂಖ್ಯೆಯನ್ನು ಅರ್ಧಕ್ಕೆ ಇಳಿಸಲು ರಸ್ತೆ ಸುರಕ್ಷತೆಗಾಗಿ ಹೆಚ್ಚುವರಿ 10,900 ಕೋಟಿ ಡಾಲರ್ (ಅಂದಾಜು ರೂ. 8,17,000 ಕೋಟಿ) ಖರ್ಚು ಮಾಡಬೇಕೆಂದು ವಿಶ್ವ ಬ್ಯಾಂಕ್ ವರದಿ ತಿಳಿಸಿದೆ. ಇಷ್ಟು ದೊಡ್ಡ ಖರ್ಚಿಗೆ ಸರ್ಕಾರ ಸಿದ್ಧವಾದರೆ ಅದು ವರ್ಷಕ್ಕೆ ಜಿಡಿಪಿಯ ಶೇಕಡಾ 3.7 ರಷ್ಟು ಆರ್ಥಿಕ ಲಾಭವನ್ನು ನೀಡುತ್ತದೆ ಎಂದು ವರದಿ ತಿಳಿಸಿದೆ.

ಈ ವರದಿಗಳ ಹೊರತಾಗಿಯೂ ಪ್ರಸ್ತುತ ದೇಶವನ್ನು ಕಾಡುತ್ತಿರುವ ಕೋವಿಡ್ ಬಿಕ್ಕಟ್ಟಿನಲ್ಲಿ ಇಷ್ಟಿ ಆರ್ಥಿಕ ಹೊರಯನ್ನು ಬರಿಸಲು ಸಾಧ್ಯವೇ..? ಐದು ಸೆಕೆಂಡುಗಳಲ್ಲಿ ನೂರು ಕಿಲೋಮೀಟರ್​​​ವರೆಗೆ ವಾಹನದ ವೇಗವನ್ನು ಹೆಚ್ಚಿಸಬಹುದು ಎಂದು ಗ್ರಾಹಕರಿಗೆ ಭರವಸೆ ನೀಡುವ ಮತ್ತು ಉತ್ತೇಜಿಸುವ ವಾಹನಾ ತಯಾರಿಕಾ ಉದ್ಯಮವು ಇಲ್ಲಿನ ನೈಜತೆಯನ್ನು ಅರಿತುಕೊಂಡು ತಮ್ಮ ಆವಿಷ್ಕಾರವನ್ನು ನಿಧಾನಗೊಳಿಸಬೇಕಾಗಿದೆ. ಮತ್ತು ಪ್ರಸ್ತುತ ದೇಶದ ರಸ್ತೆಗಳ ಗುಣಮಟ್ಟಕ್ಕೆ ತಕ್ಕಂತೆ ನಿಯಂತ್ರಣಗಳನ್ನು ಬಿಗಿಗೊಳಿಸಿದರೆ, ರಸ್ತೆ ಸುರಕ್ಷತೆ ಸ್ವಲ್ಪ ಮಟ್ಟಿಗೆ ಸುಧಾರಿಸುತ್ತದೆ...

ETV Bharat Logo

Copyright © 2025 Ushodaya Enterprises Pvt. Ltd., All Rights Reserved.