ಅಲ್ವಾರ್(ಉತ್ತರ ಪ್ರದೇಶ): ಚಿತಾಭಸ್ಮವನ್ನು ವಿಸರ್ಜಿಸಲು ತೆರಳಿದ ಒಂದೇ ಕುಟುಂಬದ ನಾಲ್ವರು ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ಹತ್ರಾಸ್‌ನಲ್ಲಿ ನಡೆದಿದೆ.
ರಾಜಸ್ಥಾನ ಬುಜ್‌ಪುರಿ ಮೂಲದ ಕುಟುಂಬವೊಂದು ತಮ್ಮ ಕುಟುಂಬದಲ್ಲಿ ಮೃತರಾದ ಒಬ್ಬರ ಚಿತಾಭಸ್ಮವನ್ನು ಬಿಡಲು ಉತ್ತರ ಪ್ರದೇಶದ ಸೂರ್ಜಿಗೆ ತೆರಳುತ್ತಿದ್ದರು. ಈ ಸಂದರ್ಭ ಅಪಘಾತ ನಡೆದು, ನಾಲ್ವರು ದಾರುಣವಾಗಿ ಮೃತಪಟ್ಟಿದ್ದಾರೆ.
ಮಿಶ್ರಮ್ ಮೀನಾ ಎಂಬಾತ ಕ್ಯಾನ್ಸರ್ನಿಂದ ಮೃತಪಟ್ಟಿದ್ದನು. ಅವನ ಚಿತಾಭಸ್ಮವನ್ನು ವಿಸರ್ಜಿಸಲು ಬಂದವರು ಮಸಣ ಸೇರಿದ್ದಾರೆ. ಬಿಎಸ್ಎಫ್ ಜವಾನ ರಂಬಾಕ್ಷಿ ಫೌಜಿ, ಮೃತನ ಮಗಳು ರಾಮ್ನಿವಾಸ್ ಮೀನಾ, ಆಕೆಯ ಸೋದರ ಮಾವ ಸಲೋಲಿ ಹಾಗೂ ಕಾರು ಚಾಲಕ ಮದನ್ ಸೈನಿ ಮೃತಪಟ್ಟಿದ್ದಾರೆ. ಕುಟುಂಬದ ಉಳಿದ ಐವರು ಸಣ್ಣಪುಟ್ಟ ಗಾಯಗಳಿಂದ ಬಚಾವ್ ಆಗಿದ್ದಾರೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮೃತರ ದೇಹಗಳನ್ನು ಸಂಜೆ ಅವರ ಕಳುಹಿಸಿಕೊಡಲಾಯಿತು. ಬಿಎಸ್ಎಫ್ ಜವಾನ ರಂಬಾಕ್ಷಿ ಫೌಜಿ ಅವರ ಅಂತಿಮ ಸಂಸ್ಕಾರವನ್ನು ಸರ್ಕಾರಿ ಸಕಲ ಗೌರವದೊಂದಿಗೆ ನೆರವೇರಿಸಿದರು.