ETV Bharat / bharat

ಕಾಜಿರಂಗಾದಲ್ಲಿ ಖಡ್ಗಮೃಗದ ಮೇಲೆ ಗುಂಡು.. ಕೊಂಬು ಹೊತ್ತೊಯ್ದ ಖದೀಮರು

ಕಾಜಿರಂಗಾ ರಾಷ್ಟ್ರೀಯ ಉದ್ಯಾನವನದಲ್ಲಿ ಖಡ್ಗಮೃಗವನ್ನು ಗುಂಡು ಹಾರಿಸಿ ಕೊಂದು, ಅದರ ಕೊಂಬನ್ನು ಕತ್ತರಿಸಿದ್ದಾರೆ. ಈ ಸಂಬಂಧ ಓರ್ವನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.

Rhino carcass riddled with bullet
ಕಾಜಿರಂಗಾದಲ್ಲಿ ಖಡ್ಗಮೃಗದ ಮೇಲೆ ಗುಂಡು
author img

By

Published : Aug 9, 2020, 8:43 AM IST

ಜೋರ್ಹತ್ (ಅಸ್ಸೋಂ): ಇಲ್ಲಿನ ಕಾಜಿರಂಗಾ ರಾಷ್ಟ್ರೀಯ ಉದ್ಯಾನವನದೊಳಗೆ ಹೆಣ್ಣು ಖಡ್ಗಮೃಗದ ಮೇಲೆ ಗುಂಡು ಹಾರಿಸಿ ಕೊಂದು ಅದರ ಕೊಂಬನ್ನು ತೆಗೆದುಕೊಂಡು ಹೋಗಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೆಟೆಕಾ ಬೀಲ್ ಪ್ರದೇಶದ ಬಳಿ ಅರಣ್ಯ ಇಲಾಖೆ ಸಿಬ್ಬಂದಿ ಖಡ್ಗಮೃಗದ ಮೃತದೇಹ ಪತ್ತೆಮಾಡಿದ್ದಾರೆ. ಇದೇ ಪ್ರದೇಶದಲ್ಲಿ ಖಾಲಿ ಕಾಟ್ರಿರ್ಜ್​ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

ಗಸ್ತು ತಿರುಗುತ್ತಿದ್ದ ಸಿಬ್ಬಂದಿ ಕಳ್ಳ ಬೇಟೆಗಾರರ ​​ಹೆಜ್ಜೆಗುರುತುಗಳನ್ನು ಪತ್ತೆ ಹಚ್ಚಿ ಶವವನ್ನು ಪತ್ತೆ ಮಾಡಿದ್ದಾರೆ. ಈ ಸಂಬಂಧ ಒಬ್ಬ ವ್ಯಕ್ತಿಯನ್ನು ಬಿಸ್ವಾನಾಥ್ ವನ್ಯಜೀವಿ ವಿಭಾಗವು ವಶಕ್ಕೆ ಪಡೆದಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.