ETV Bharat / bharat

ಸತ್ಯ ಮೇಲುಗೈ ಸಾಧಿಸಲಿದೆ: ಸುಶಾಂತ್‌ ಸಾವಿನ ಬಗ್ಗೆ ರಿಯಾ ಚಕ್ರವರ್ತಿ ಹೇಳಿಕೆ - ಸುಶಾಂತ್​ ಸಿಂಗ್​​ ರಜಪೂತ್​

ಬಾಲಿವುಡ್​ ನಟ ಸುಶಾಂತ್​ ಸಿಂಗ್​ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಯಾ ಚಕ್ರವರ್ತಿ ವಿರುದ್ಧ ದೂರು ದಾಖಲಾಗಿದ್ದು, ಇದೇ ಮೊದಲ ಬಾರಿಗೆ ಅವರು ಸಾರ್ವಜನಿಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

Rhea Chakraborty
Rhea Chakraborty
author img

By

Published : Jul 31, 2020, 7:15 PM IST

ನವದೆಹಲಿ: ಬಾಲಿವುಡ್​ ನಟ ಸುಶಾಂತ್​ ಸಿಂಗ್ ರಜಪೂತ್​ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಿಯಾ ಚಕ್ರವರ್ತಿ ವಿರುದ್ಧ ದೂರು ದಾಖಲಾಗಿದ್ದು, ಇದಾದ ಬಳಿಕ ಅವರು ತಲೆಮರೆಸಿಕೊಂಡು ಓಡಾಡುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿತ್ತು.

ಕಳೆದ ಕೆಲ ದಿನಗಳ ಹಿಂದೆ ಸುಶಾಂತ್​ ತಂದೆ ಪಾಟ್ನಾದ ಪೊಲೀಸ್​ ಠಾಣೆಯಲ್ಲಿ ರಿಯಾ ವಿರುದ್ಧ ದೂರು ದಾಖಲಿಸಿದ್ದರು. ಇದರ ಜತೆಗೆ ತಮ್ಮ ಮಗ ಆತ್ಮಹತ್ಯೆ ಮಾಡಿಕೊಳ್ಳಲು ನಟಿ ನೇರ ಹೊಣೆ ಎಂದು ಆರೋಪಿಸಿದ್ದರು. ಬಳಿಕ ಪೊಲೀಸರು ರಿಯಾ ನಿವಾಸಕ್ಕೆ ತೆರಳಿದ್ದು ಈ ಸಂದರ್ಭದಲ್ಲಿ ಅವರು ಮನೆಯಲ್ಲಿ ಇರಲಿಲ್ಲ ಎಂಬ ಮಾಹಿತಿ ಸಹ ಲಭ್ಯವಾಗಿತ್ತು. ಇದರ ಮಧ್ಯೆ ಏಕಾಏಕಿ ಪ್ರತ್ಯಕ್ಷವಾಗಿರುವ ರಿಯಾ ಇದೀಗ ವಿಡಿಯೋ ಹರಿಬಿಟ್ಟಿದ್ದಾರೆ.

ನಾನು ದೇವರು ಮತ್ತು ನ್ಯಾಯಾಂಗದ ಮೇಲೆ ಅಪಾರ ನಂಬಿಕೆ ಹೊಂದಿದ್ದೇನೆ. ನನಗೆ ನ್ಯಾಯ ಸಿಗುತ್ತದೆ ಎಂದು ನಂಬಿದ್ದೇನೆ ಎಂದಿರುವ ಅವರು ಸತ್ಯಮೇವ ಜಯತೆ, ಸತ್ಯವು ಮೇಲುಗೈ ಸಾಧಿಸುತ್ತದೆ ಎಂದು ಹೇಳಿದ್ದಾರೆ.

ಅವರ ವಿರುದ್ಧ ದೂರು ದಾಖಲಾದ ಬಳಿಕ ಇದೇ ಮೊದಲ ಬಾರಿಗೆ ಅವರು ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದು, ಅವರ ಪರ ವಕೀಲ ಸತೀಶ್ ಮನೇಶಿಂದೆ ಪೋಸ್ಟ್ ಮಾಡಿದ್ದಾರೆ. ಸುಶಾಂತ್​ ಜತೆ ಒಂದು ವರ್ಷ ಲಿವ್​ ಇನ್​ ರಿಲೇಷನ್​​ಷಿಪ್​​ನಲ್ಲಿದ್ದೆ ಎಂದು ಈ ಹಿಂದೆ ರಿಯಾ ಹೇಳಿಕೆ ನೀಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.