ಆಂಧ್ರಪ್ರದೇಶ: ಪ್ರಕಾಶಂ ಜಿಲ್ಲೆಯ ಸಂತನುಥಲಪಾಡು ಮಂಡಳಿಯ ಪೆರ್ನಮಿಟ್ಟಾದ ನಿವೃತ್ತ ಶಿಕ್ಷಕಿಯೊಬ್ಬರು ಮೃತಪಟ್ಟಿದ್ದು, ಕೊರೊನಾ ಭಯ ಹಿನ್ನೆಲೆ ಗ್ರಾಮಸ್ಥರು ಅಂತ್ಯಕ್ರಿಯೆಗೆ ಅಡ್ಡಿಪಡಿಸಿದ ಘಟನೆ ನಡೆದಿದೆ.
ಶಿಕ್ಷಕಿ ಕೊರೊನಾದಿಂದಾಗಿ ಮೃತಪಟ್ಟಿದ್ದಾರೆ ಎಂದು ಭಾವಿಸಿ, ಗ್ರಾಮಸ್ಥರು ಅಂತ್ಯಕ್ರಿಯೆಯನ್ನು ಸ್ಮಶಾನದಲ್ಲಿ ನಡೆಸಬಾರದು ಎಂದು ಅಡ್ಡಿಪಡಿಸಿದ್ದಾರೆ. ಈ ಹಿನ್ನೆಲೆ ಮೃತ ಮಹಿಳೆಯ ಸಂಬಂಧಿಕರು ಮತ್ತು ಗ್ರಾಮಸ್ಥರ ನಡುವೆ ಜಗಳ ನಡೆದಿದೆ.
ಸಂಬಂಧಿಕರು ಗ್ರಾಮಸ್ಥರ ಆಕ್ಷೇಪದ ಮೇರೆಗೆ ಜಿಲ್ಲಾ ನ್ಯಾಯಾಂಗದ ಅಧ್ಯಕ್ಷರಿಗೆ ಅರ್ಜಿ ಸಲ್ಲಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಪ್ರಾಸಿಕ್ಯೂಷನ್ ಸಂಸ್ಥೆ ಅಂತ್ಯಕ್ರಿಯೆಯನ್ನು ಕಾನೂನುಬದ್ಧವಾಗಿ ಸ್ಮಶಾನದಲ್ಲಿ ನಡೆಸಲು ಸಹಕರಿಸುವಂತೆ ಪೊಲೀಸರಿಗೆ ಆದೇಶಿಸಿದೆ.
ಬಳಿಕ ಪೊಲೀಸರ ಸಮ್ಮುಖದಲ್ಲಿ ಅಂತ್ಯಕ್ರಿಯೆಯ ನಡೆಸಲಾಗಿದ್ದು, ಮೃತ ಮಹಿಳೆಯ ಪುತ್ರರು ನ್ಯಾಯಾಂಗಕ್ಕೆ ಧನ್ಯವಾದ ಅರ್ಪಿಸಿದ್ದಾರೆ.