ನವದೆಹಲಿ : ಲಂಚ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ನಿವೃತ್ತ ಪೊಲೀಸ್ ಅಧೀಕ್ಷಕ ಎನ್ಎಂಪಿ ಸಿನ್ಹಾರನ್ನ ಸಿಬಿಐ ಬಂಧಿಸಿದೆ.
ಸಿನ್ಹಾ ಸಿಬಿಐನ ಆರ್ಥಿಕ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಕಳೆದ ಆಗಸ್ಟ್ ತಿಂಗಳಲ್ಲಿ ನಿವೃತ್ತರಾಗಿದ್ದರು. ಅಲ್ಲದೆ ಲಾಲು ಪ್ರಸಾದ್ ಯಾದವ್ ಅವರ ಮೇವು ಹಗರಣ ಪ್ರಕರಣವನ್ನು ತನಿಖೆ ನಡೆಸಿದ್ದ ತಂಡದಲ್ಲಿ ಸಿನ್ಹಾ ಕೂಡ ಇದ್ದರು.
ಆದರೆ, 25 ಲಕ್ಷ ರೂಪಾಯಿ ಲಂಚ ಪಡೆದ ಆರೋಪದಡಿ ಇಂದು ಸಿಬಿಐ ಬಂಧಿಸಿದೆ. ಜತೆಗೆ ಇಂದು ನ್ಯಾಯಾಲಯಕ್ಕೆ ಹಾಜರು ಪಡಿಸುವ ಸಾಧ್ಯತೆಯೂ ಇದೆ.