ಶಿಮ್ಲಾ ( ಹಿಮಾಚಲ ಪ್ರದೇಶ ) : ಕಳೆದೆರಡು ತಿಂಗಳಿನಿಂದ ಕೆಲಸವಿಲ್ಲದೆ ಕೂತಿದ್ದ ದೇಶದ ವಿವಿಧ ಭಾಗಗಳ ವಲಸೆ ಕಾರ್ಮಿಕರು ಇದೀಗ ಬ್ರಿಟಿಷ್ ಕಾಲದ ಕಟ್ಟಡವಾದ 'ಬ್ಯಾಂಟೋನಿ ಕ್ಯಾಸಲ್' ನವೀಕರಣ ಕಾರ್ಯದಲ್ಲಿ ತೊಡಗಿದ್ದಾರೆ.
ಈ ಬಗ್ಗೆ ಮಾತನಾಡಿದ ಜಾರ್ಖಂಡ್ ಮೂಲದ ವಲಸೆ ಕಾರ್ಮಿಕ ಸುಖ್ಮೇನಿಯಾ, ನಾನು ಏಳು ತಿಂಗಳ ಹಿಂದೆ ಇಲ್ಲಿಗೆ ಬಂದಿದ್ದೇನೆ. ಇಷ್ಟರವರೆಗೆ ನಮ್ಮ ಕೈಯಲ್ಲಿ ಹಣವಿರಲಿಲ್ಲ. ಈಗ ಕೆಲಸ ಸಿಕ್ಕಿದೆ ಲಾಕ್ ಡೌ್ನ್ ಕೊನೆಗೊಂಡಾಗ ಊರಿಗೆ ಹೋಗುತ್ತೇನೆ ಎಂದಿದ್ದಾರೆ.
ಸುಮಾರು 125 ವರ್ಷಗಳಷ್ಟು ಹಳೆಯದಾದ ಕಟ್ಟಡದ ನವೀಕರಣ ಉಸ್ತುವಾರಿಯನ್ನು ಹಿಮಾಚಲ ಪ್ರದೇಶದ ಪ್ರವಾಸೋಧ್ಯಮ ಇಲಾಖೆ ವಹಿಸಕೊಂಡಿದೆ. ಊರಿಗೆ ಹಿಂದಿರುಗಲಾಗದೆ ಬಾಕಿಯಾದ ವಲಸೆ ಕಾರ್ಮಿಕರು ಕಟ್ಟಡ ನವೀಕರಣ ಕಾರ್ಯದಲ್ಲಿ ತೊಡಗಿದ್ದು, ಅವರಿಗೆ ಬೇಕಾದ ಸಾಮಗ್ರಿಗಳನ್ನು ಪೂರೈಸಲಾಗಿದೆ.